ADVERTISEMENT

ಶಾಂತಲಿಂಗೇಶ್ವರ ಜಾತ್ರಾ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2022, 16:29 IST
Last Updated 16 ಆಗಸ್ಟ್ 2022, 16:29 IST
ಖಟಕಚಿಂಚೋಳಿ ಗ್ರಾಮದ ಹುಲಿಕುಂಟೆ ಮಠದ ಆವರಣದಲ್ಲಿ ಶಾಂತಲಿಂಗೇಶ್ವರ ಜಾತ್ರೆ ನಡೆಯಿತು
ಖಟಕಚಿಂಚೋಳಿ ಗ್ರಾಮದ ಹುಲಿಕುಂಟೆ ಮಠದ ಆವರಣದಲ್ಲಿ ಶಾಂತಲಿಂಗೇಶ್ವರ ಜಾತ್ರೆ ನಡೆಯಿತು   

ಖಟಕಚಿಂಚೋಳಿ: ಇಲ್ಲಿಯ ಹುಲಿಕುಂಟೆ ಮಠದ ಆವರಣದಲ್ಲಿ ಸೋಮವಾರ ಶಾಂತಲಿಂಗೇಶ್ವರ ಜಾತ್ರೆ ವಿಜೃಂಭಣೆಯಿಂದ ನಡೆಯಿತು.

ಬೆಳಿಗ್ಗೆಯಿಂದಲೇ ಧಾರ್ಮಿಕ ವಿಧಿ ವಿಧಾನದಂತೆ ರುದ್ರಾಭಿಷೇಕ, ಪಲ್ಲಕ್ಕಿ ಉತ್ಸವ, ಜಂಗಿ ಕುಸ್ತಿ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜರುಗಿದವು.

ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಿದ ಮಠದ ಪೀಠಾಧಿಪತಿ ಶಿವಾನಂದ ಸ್ವಾಮೀಜಿ ಮಾತನಾಡಿ,‘ಹುಲಿಕುಂಟೆ ಮಠವು ಅತ್ಯಂತ ಪುರಾತನ ಹಾಗೂ ಪುಣ್ಯ ಕ್ಷೇತ್ರವಾಗಿದೆ’ ಎಂದರು. ಸಾಯಗಾಂವದ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಮುಖಂಡ ಸಾಗರ ಖಂಡ್ರೆ, ಪ್ರಮುಖರಾದ ಮಲ್ಲಿಕಾರ್ಜುನ ಕಡಗಂಚಿ, ರವಿ ರೆಡ್ಡಿ ಕೊತ್ತೂರ, ವೀರಶೆಟ್ಟಿ ಕಲ್ಲಾ, ರಾಜಕುಮಾರ ಬನ್ನಾಳೆ, ಸುರೇಶ ಭುರಕೆ, ಸುರೇಶ ಅಲ್ಲೂರೆ, ದಶವಂತ ಡಾವರಗೆ, ರಾಜಕುಮಾರ , ನಾಗಪ್ಪ ಬಿರಾದಾರ, ಬಸವರಾಜ ಝಿಳೇ, ರವಿ ಕಡಗಂಚಿ, ಸುರೇಶ ಸಂಗೂಳಗೆ, ಮಲ್ಲಿಕಾರ್ಜುನ ಪಾಟೀಲ, ಇಂದೂಧರ ಅಲಶೆಟ್ಟಿ, ಗುರುರೆಡ್ಡ ಹಾಗೂ ಪ್ರದೀಪ ಉಂಬರಗೆ ಇದ್ದರು. ಮೌನೇಶ ಸ್ವಾಗತಿಸಿದರು. ರಾಜಕುಮಾರ ಬಿರಾದಾರ ನಿರೂಪಿಸಿದರು. ಓಂಕಾರ ಸ್ವಾಮಿ ವಂದಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.