ADVERTISEMENT

ಜನೌಷಧಿ ಕೇಂದ್ರ ಬಂದ್: ಶಾಸಕರಿಂದ ಧರಣಿ

​ಪ್ರಜಾವಾಣಿ ವಾರ್ತೆ
Published 30 ಮೇ 2025, 14:09 IST
Last Updated 30 ಮೇ 2025, 14:09 IST
ಬಸವಕಲ್ಯಾಣದ ತಾಲ್ಲೂಕು ಆಸ್ಪತ್ರೆ ಎದುರಲ್ಲಿ ಶುಕ್ರವಾರ ಜನೌಷಧಿ ಕೇಂದ್ರ ಮುಚ್ಚಿಸುವ ಸರ್ಕಾರ ನಿರ್ಣಯ ಖಂಡಿಸಿ ಬಿಜೆಪಿಯಿಂದ ಧರಣಿ ನಡೆಸಲಾಯಿತು. ಶಾಸಕ ಶರಣು ಸಲಗರ ಪಾಲ್ಗೊಂಡಿದ್ದರು
ಬಸವಕಲ್ಯಾಣದ ತಾಲ್ಲೂಕು ಆಸ್ಪತ್ರೆ ಎದುರಲ್ಲಿ ಶುಕ್ರವಾರ ಜನೌಷಧಿ ಕೇಂದ್ರ ಮುಚ್ಚಿಸುವ ಸರ್ಕಾರ ನಿರ್ಣಯ ಖಂಡಿಸಿ ಬಿಜೆಪಿಯಿಂದ ಧರಣಿ ನಡೆಸಲಾಯಿತು. ಶಾಸಕ ಶರಣು ಸಲಗರ ಪಾಲ್ಗೊಂಡಿದ್ದರು   

ಬಸವಕಲ್ಯಾಣ: ತಾಲ್ಲೂಕು ಆಸ್ಪತ್ರೆಗಳ ಆವರಣದಲ್ಲಿನ ಜನೌಷಧಿ ಕೇಂದ್ರಗಳನ್ನು ಮುಚ್ಚಿಸುವ ರಾಜ್ಯ ಸರ್ಕಾರದ ನಿರ್ಣಯ ಖಂಡಿಸಿ ಶಾಸಕ ಶರಣು ಸಲಗರ ನೇತೃತ್ವದಲ್ಲಿ ಶುಕ್ರವಾರ ಕೈಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಧರಣಿ ನಡೆಸಲಾಯಿತು.

ಶಾಸಕ ಶರಣು ಸಲಗರ ಮಾತನಾಡಿ, ‘ಬಡವರ ವಿರುದ್ಧದ ನಿರ್ಣಯ ಇದಾಗಿದೆ’ ಎಂದು ಖಂಡಿಸಿದರು.

ಪಕ್ಷದ ಗ್ರಾಮೀಣ ಘಟಕದ ಅಧ್ಯಕ್ಷ ಜ್ಞಾನೇಶ್ವರ ಮುಳೆ, ನಗರ ಘಟಕದ ಅಧ್ಯಕ್ಷ ಸಿದ್ದು ಬಿರಾದಾರ, ಮುಖಂಡರಾದ ಮಹಾದೇವ ಹಸೂರೆ, ದೀಪಕ ಗಾಯಕವಾಡ, ಅಶೋಕ ವಕಾರೆ, ಸುಧೀರ ಕಾಡಾದಿ, ಅರವಿಂದ ಮುತ್ತೆ, ಅಮರ ಬಡದಾಳೆ, ಪ್ರದೀಪ ಗಡವಂತೆ, ದಿಗಂಬರ ಜಲ್ದೆ, ಕೃಷ್ಣಾ ಗೋಣೆ, ಶಂಕರ ನಾಗದೆ, ಶ್ರಿನಿವಾಸ ಪಾಟೀಲ, ರತಿಕಾಂತ ಕೊಹಿನೂರ, ಪುಷ್ಪರಾಜ ಹಾರಕೂಡೆ, ನೀಲಕಂಠ ಭೆಂಡೆ, ಶಿವಕುಮಾರ ಸೀತಾರ, ಆನಂದ ಪಾಟೀಲ, ಶಿವರುದ್ರ ತಾಟೆ ಮತ್ತಿತರರು ಪಾಲ್ಗೊಂಡಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.