ADVERTISEMENT

ಜನವಾಡ | ಅಂಗನವಾಡಿ ಕೇಂದ್ರಗಳಿಗೆ ಭೇಟಿ: ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2025, 7:44 IST
Last Updated 13 ಆಗಸ್ಟ್ 2025, 7:44 IST
ಬೀದರ್ ತಾಲ್ಲೂಕಿನ ಮರಕಲ್ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿಯ ತಂಡದ ಸದಸ್ಯರು ಮಂಗಳವಾರ ಭೇಟಿ ನೀಡಿದರು
ಬೀದರ್ ತಾಲ್ಲೂಕಿನ ಮರಕಲ್ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿಯ ತಂಡದ ಸದಸ್ಯರು ಮಂಗಳವಾರ ಭೇಟಿ ನೀಡಿದರು   

ಜನವಾಡ: ಅಂಗನವಾಡಿ ಕೇಂದ್ರಗಳ ಪುನಃಶ್ಚೇತನದ ಭಾಗವಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿಯ 15 ಪ್ರತ್ಯೇಕ ತಂಡಗಳಿಂದ ಬೀದರ್ ತಾಲ್ಲೂಕಿನ ವಿವಿಧ ಅಂಗನವಾಡಿ ಕೇಂದ್ರಗಳಿಗೆ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು.

ತಂಡದ ಸದಸ್ಯರು ಮರಕಲ್, ಜನವಾಡ, ಚಿಲ್ಲರ್ಗಿ, ಮನ್ನಳ್ಳಿ, ಕಮಠಾಣ, ಬಗದಲ್, ರಂಜೋಳಖೇಣಿ, ಪಾತರಪಳ್ಳಿ, ನಿಡವಂಚಾ ಸೇರಿದಂತೆ ವಿವಿಧ ಅಂಗನವಾಡಿ ಕೇಂದ್ರಗಳಿಗೆ ಭೇಟಿ ಕೊಟ್ಟರು.

ಕೇಂದ್ರಗಳಲ್ಲಿ ಪೋಷಣ್ ಟ್ರ್ಯಾಕರ್ ಬಳಕೆ, ದಾಖಲಾತಿ ನಿರ್ವಹಣೆ, ಶಾಲಾ ಪೂರ್ವ ಶಿಕ್ಷಣ ಅನುಷ್ಠಾನ, ಪೂರಕ ಪೌಷ್ಠಿಕ ಆಹಾರ ಸದ್ಬಳಕೆ ಸೇರಿದಂತೆ ಹಲವಾರು ವಿಚಾರಗಳ ಬಗ್ಗೆ ಪರಿಶೀಲನೆ ನಡೆಸಿದರು.

ADVERTISEMENT

ಪ್ರಧಾನಮಂತ್ರಿ ಮಾತೃ ವಂದನ ಯೋಜನೆ ಸೌಲಭ್ಯಕ್ಕೆ ಅರ್ಹರಾದ ಫಲಾನುಭವಿಗಳ ಮನೆಗೂ ಭೇಟಿ ನೀಡಿದರು. ಯಾವುದೇ ನ್ಯೂನ್ಯತೆಗೆ ಅವಕಾಶ ಇಲ್ಲದಂತೆ ಕಾರ್ಯ ನಿರ್ವಹಿಸಲು ಕೇಂದ್ರಗಳ ಸಿಬ್ಬಂದಿಗೆ ಸೂಚನೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.