ADVERTISEMENT

ಈ ‘ಸುಲ್ತಾನ್’ ಬೆಲೆ ₹15 ಲಕ್ಷ!

ನಾಗೇಶ ಪ್ರಭಾ
Published 8 ಫೆಬ್ರುವರಿ 2020, 20:27 IST
Last Updated 8 ಫೆಬ್ರುವರಿ 2020, 20:27 IST
ಬೀದರ್ ತಾಲ್ಲೂಕಿನ ಕಮಠಾಣ ಬಳಿಯ ಕರ್ನಾಟಕ ಪಶು ವೈದ್ಯಕೀಯ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಪಶು ಮೇಳದಲ್ಲಿ ರೈತರ ಆಕರ್ಷಣೆಯ ಕೇಂದ್ರವಾಗಿರುವ ‘ಸುಲ್ತಾನ್’ ಹೆಸರಿನ ಒಂಗೋಲ್ ಹೋರಿ
ಬೀದರ್ ತಾಲ್ಲೂಕಿನ ಕಮಠಾಣ ಬಳಿಯ ಕರ್ನಾಟಕ ಪಶು ವೈದ್ಯಕೀಯ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಪಶು ಮೇಳದಲ್ಲಿ ರೈತರ ಆಕರ್ಷಣೆಯ ಕೇಂದ್ರವಾಗಿರುವ ‘ಸುಲ್ತಾನ್’ ಹೆಸರಿನ ಒಂಗೋಲ್ ಹೋರಿ   

ಜನವಾಡ: ಬೀದರ್ ತಾಲ್ಲೂಕಿನ ಕಮಠಾಣ ಸಮೀಪದ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ ಆಯೋಜಿಸಿರುವ ರಾಜ್ಯಮಟ್ಟದ ಪಶು ಮೇಳದಲ್ಲಿ ‘ಸುಲ್ತಾನ್‌’ನದ್ದೇ ಚರ್ಚೆ.

6 ಅಡಿ ಎತ್ತರ, 8.5 ಅಡಿ ಉದ್ದ ಹಾಗೂ 1,462 ಕೆ.ಜಿ. ಭಾರ ಇರುವ ಒಂಗೋಲ್ ಹೋರಿಯೇ ಈ ‘ಸುಲ್ತಾನ್’. ಉಡುಪಿ ಜಿಲ್ಲೆಯ ಉಪ್ಪಿನಕೋಟೆಯ ಮಹಮ್ಮದ್ ಇರ್ಷಾದ್ ಆಬೇದಿನ್ ಅವರು ‘ಸುಲ್ತಾನ್’ ಹೆಸರಿನ ಈ ಹೋರಿಯನ್ನು ಪ್ರದರ್ಶನಕ್ಕೆ ಇಟ್ಟಿದ್ದಾರೆ. ಹೋರಿಯನ್ನು ಕಂಡ ರೈತರು ಅದರ ಭಾರಿ ಗಾತ್ರದಿಂದಾಗಿ ಅಬ್ಬಬ್ಬಾ! ಎಂಥ ಹೋರಿ... ಎಂದು ಉದ್ಗರಿಸುತ್ತಿದ್ದಾರೆ.

‘ಒಂಗೋಲ್ ಉತ್ಕೃಷ್ಟ ತಳಿಗಳಲ್ಲಿ ಒಂದಾಗಿದೆ. ಈ ಹೋರಿಯನ್ನು ₹15 ಲಕ್ಷಕ್ಕೆ ಕೇಳುತ್ತಿದ್ದಾರೆ. ಆದರೆ, ಮಾರಾಟಕ್ಕೆ ಇಟ್ಟಿಲ್ಲ. ಹೋರಿಯನ್ನು ಮನೆ ಮಗನಂತೆ ಸಾಕಿದ್ದೇವೆ’ ಎಂದು ಹೇಳುತ್ತಾರೆ ಮಹಮ್ಮದ್ ಇರ್ಷಾದ್ ಆಬೇದಿನ್.

ADVERTISEMENT

ಆಬೇದಿನ್ ಅವರ ಮಳಿಗೆಯಲ್ಲಿ ಉದ್ದನೆಯ ಕೋಡುಗಳು ಇರುವ ಕಾಂಕ್ರೇಜ್ ಎತ್ತು ಕೂಡ ಇದೆ. ಅದರ ಮೌಲ್ಯ ₹ 4 ಲಕ್ಷ ಎಂದು ತಿಳಿಸುತ್ತಾರೆ ಅವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.