ADVERTISEMENT

ಜನವಾಡ: ಚಿತ್ರನಟ ಪುನೀತ್ ರಾಜಕುಮಾರ ಸ್ಮರಣಾರ್ಥವಾ ರಂಗೋಲಿ ಸ್ಪರ್ಧೆ

ಪುನೀತ್ ರಾಜಕುಮಾರ ಸ್ಮರಣಾರ್ಥ ಆಯೋಜನೆ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2023, 6:52 IST
Last Updated 3 ಫೆಬ್ರುವರಿ 2023, 6:52 IST
ಬೀದರ್ ತಾಲ್ಲೂಕಿನ ಯಾಕತಪುರ ಗ್ರಾಮದಲ್ಲಿ ಆಯೋಜಿಸಿದ್ದ ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು
ಬೀದರ್ ತಾಲ್ಲೂಕಿನ ಯಾಕತಪುರ ಗ್ರಾಮದಲ್ಲಿ ಆಯೋಜಿಸಿದ್ದ ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು   

ಜನವಾಡ: ಚಿತ್ರನಟ ಪುನೀತ್ ರಾಜಕುಮಾರ ಸ್ಮರಣಾರ್ಥವಾಗಿ ತಾಲ್ಲೂಕಿನ ಯಾಕತಪುರ ಗ್ರಾಮದಲ್ಲಿ ಯುವ ಮುಖಂಡ ನರಸಪ್ಪ ಬಿ. ಜಾನಕನೋರ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ರಂಗೋಲಿ ಸ್ಪರ್ಧೆಯಲ್ಲಿ ಗ್ರಾಮದ ಅಂಬೇಡ್ಕರ್ ತತ್ವ ಪ್ರೌಢಶಾಲೆಯ ಮಂಗಲಾ ಶ್ರಾವಣ ಪ್ರಥಮ ಸ್ಥಾನ ಗಳಿಸಿದ್ದಾರೆ.

ಮನ್ನಳ್ಳಿಯ ಬಸವ ಪ್ರೌಢಶಾಲೆಯ ಅಂಕಿತಾ ಬಸವರಾಜ ದ್ವಿತೀಯ ಮತ್ತು ಯಾಕತಪುರದ ಲಿಟಲ್ ಫ್ಲಾವರ್ ಪಬ್ಲಿಕ್ ಸ್ಕೂಲ್‍ನ ಮಹೇಶ್ವರಿ ಜಗನ್ನಾಥ ತೃತೀಯ ಸ್ಥಾನ ಪಡೆದರು.

ವಿಜೇತರಿಗೆ ಗ್ರಾಮದ ಅಂಬೇಡ್ಕರ್ ತತ್ವ ಪ್ರೌಢಶಾಲೆಯಲ್ಲಿ ನಗದು ಬಹುಮಾನ, ಪುನೀತ್ ರಾಜಕುಮಾರ ಭಾವಚಿತ್ರ ಹಾಗೂ ಪ್ರಮಾಣ ಪತ್ರ ವಿತರಿಸಲಾಯಿತು.

ADVERTISEMENT

ನಾಗೋರಾ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಾಯತ್ರಿದೇವಿ ಎಸ್. ಹೊಸಮನಿ ಮಾತನಾಡಿ, ಗ್ರಾಮ ಪಂಚಾಯಿತಿ ಸದಸ್ಯ ನರಸಪ್ಪ ಜಾನಕನೋರ ಅವರು ಪುನೀತ್ ರಾಜಕುಮಾರ ಸ್ಮರಣಾರ್ಥವಾಗಿ ವಿದ್ಯಾರ್ಥಿಗಳಿಗೆ ರಂಗೋಲಿ ಸ್ಪರ್ಧೆ ಆಯೋಜಿಸಿ, ಪ್ರೋತ್ಸಾಹಿಸಿರುವುದು ಶ್ಲಾಘನೀಯ ಎಂದು ಹೇಳಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರಭಾವತಿ ಅಣ್ಣಾರಾವ್ ಸ್ಪರ್ಧೆಯನ್ನು ಉದ್ಘಾಟಿಸಿದರು. ರಾಜ್ಯ ದ್ರಾಕ್ಷಾರಸ ಮಂಡಳಿ ಮಾಜಿ ಅಧ್ಯಕ್ಷ ಬಕ್ಕಪ್ಪ ಕೋಟೆ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯೆ ರೇಣುಕಾ ಹರ್ಷಾಂತ್ ಕೋಟೆ, ಸಮಾಜ ಸೇವಕಿ ಶ್ರೀದೇವಿ ಶಿವಕುಮಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಗಜರಾಬಾಯಿ, ಮುಖ್ಯಶಿಕ್ಷಕ ರಾಜಕುಮಾರ ಬೀರಗೆ, ಸಿಆರ್‍ಸಿ ಗುಂಡೇರಾವ್ ಗುಪ್ತಾ, ಪ್ರಾಚಾರ್ಯ ತುಕಾರಾಮ ಯಾತಪ್ಪ, ಸ್ಪರ್ಧೆಯ ಆಯೋಜಕ ನರಸಪ್ಪ ಬಿ. ಜಾನಕನೋರ ಇದ್ದರು.
ಸ್ಪರ್ಧೆಯಲ್ಲಿ ಏಳು ಪ್ರೌಢಶಾಲೆಗಳ 24 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.