ಬೀದರ್: ಇಲ್ಲಿಯ ಗುರುನಾನಕ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿ ಸಚಿನ್ ನಾರಾಯಣ ಜಾಧವ ಅವರು ಜೆಇಇ ಅಡ್ವಾನ್ಸ್‍ನಲ್ಲಿ ರಾಷ್ಟ್ರಕ್ಕೆ 1741ನೇ ರ್‍ಯಾಂಕ್ ಹಾಗೂ ಜೆಇಇ ಮೇನ್‌ನಲ್ಲಿ ಪಾವನಿ ಹಮಿಲಾಪೂರೆ ಅವರು ಆರ್ಕಿಟೆಕ್ಟ್‌ನಲ್ಲಿ 67ನೇ ರ್‍ಯಾಂಕ್ ಪಡೆದಿದ್ದಾರೆ.
ಕಾಲೇಜಿನಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಗುರುನಾನಕ ಸಮೂಹ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷೆ ರೇಷ್ಮಾ ಕೌರ್ ಅವರು ಸಚಿನ್ ಹಾಗೂ ಪಾವನಿ ಅವರಿಗೆ ಪುಷ್ಪಗುಚ್ಛ ನೀಡಿ ಅಭಿನಂದಿಸಿದರು.
ಪ್ರಾಚಾರ್ಯೆ ಆಶಾ ಲಕ್ಕಿ, ಆಡಳಿತಾಧಿಕಾರಿ ಜಯಪ್ರಕಾಶ ಸ್ಯಾಮುವೆಲ್ ಮತ್ತು ಸಿಬ್ಬಂದಿ ವರ್ಗದವರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.