ಭಾಲ್ಕಿ: ಪಟ್ಟಣದ ಚನ್ನಬಸವಾಶ್ರಮದಲ್ಲಿ ಹಿರೇಮಠ ಸಂಸ್ಥಾನದ ಆಶ್ರಯದಲ್ಲಿ ಸೆ.22ರಿಂದ ಅಕ್ಟೋಬರ್ 2 ರವರೆಗೆ ಸಂಜೆ 5.30ಕ್ಕೆ ಗಂಟೆಗೆ ಮರಣವೇ ಮಹಾನವಮಿ ಹಾಗೂ ಕಲ್ಯಾಣ ಕ್ರಾಂತಿ ವಿಜಯೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದು ಮಹಾಲಿಂಗ ಸ್ವಾಮೀಜಿ ತಿಳಿಸಿದರು.
ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಕಲ್ಯಾಣ ಕರ್ನಾಟಕ ವಿಜಯೋತ್ಸವದ ಕರಪತ್ರಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಒಂಬತ್ತು ದಿನ ವಚನ ಭಜನೆ, ಶರಣೆಯರಾದ ವೈರಾಗ್ಯನಿಧಿ ಅಕ್ಕಮಹಾದೇವಿ, ಅಮುಗಿ ರಾಯಮ್ಮ, ಮುಕ್ತಾಯಕ್ಕ, ಸತ್ಯಕ್ಕ, ಮೋಳಿಗೆ ಮಹಾದೇವಿ, ಅಕ್ಕಮ್ಮ, ವೀರಮ್ಮ, ದುಗ್ಗಳೆ, ಧೂಪದ ಗೊಗ್ಗವ್ವೆ ಅವರು ಕುರಿತು ವಿಶೇಷ ಅನುಭಾವ, ಧರ್ಮಗ್ರಂಥ ಪಠಣ, ವಿದ್ಯಾರ್ಥಿ ಭಾಷಣ, ಶರಣೆಯರ ವೇಷಭೂಷಣ ಸ್ಪರ್ಧೆ ನಡೆಯಲಿವೆ ಎಂದರು.
ಚನ್ನಬಸವಾಶ್ರಮದಲ್ಲಿ ಮಲ್ಲಮ್ಮ ನಾಗನಕೇರೆ ಅವರಿಂದ ಪ್ರತಿದಿನ ಬೆಳಿಗ್ಗೆ 5 ಗಂಟೆಗೆ ಶಿವಯೋಗ ನಡೆಯಲಿದೆ. ಒಂಬತ್ತು ದಿನಗಳ ಕಾರ್ಯಕ್ರಮಗಳಲ್ಲಿ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಹೇಳಿದರು.
ಪ್ರಭುಲಿಂಗ ಸ್ವಾಮೀಜಿ, ಸೇವಾ ಸಮಿತಿ ಅಧ್ಯಕ್ಷೆ ಪಾರ್ವತಿ ಜಗನ್ನಾಥ ಧೂಮ್ಮನಸೂರೆ, ಮಲ್ಲಮ್ಮ ನಾಗನಕೇರೆ, ಮಲ್ಲಮ್ಮ ಆರ್.ಪಾಟೀಲ, ಪಾರ್ವತಿ ಡೋಣಗಾಪೂರೆ, ರೇಖಾ ಮಹಾಜನ, ರೇಖಾ ಪಾಟೀಲ, ಬಸವರಾಜ ಮರೆ ಹಾಗೂ ಸಂತೋಷ ಹಡಪದ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.