ADVERTISEMENT

ವಿವಿಧೆಡೆ ಪಟ್ಟದ್ದೇವರ ಜಯಂತಿ ಆಚರಣೆ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2025, 4:48 IST
Last Updated 24 ಡಿಸೆಂಬರ್ 2025, 4:48 IST
ಕಮಲನಗರ ಪಟ್ಟಣದ ಚನ್ನಬಸವ ಪಟ್ಟದ್ದೇವರು ಪ್ರೌಢಶಾಲೆ, ಗುರಪ್ಪಾ ಟೊಣ್ಣೆ ಪ್ರಾಥಮಿಕ ಶಾಲೆ ಹಾಗೂ ಗುರುಕಾರುಣ್ಯ ಪಬ್ಲಿಕ್ ಸ್ಕೂಲ್‌ನಲ್ಲಿ ಚನ್ನಬಸವ ಪಟ್ಟದ್ದೇವರ ಜಯಂತಿ ಆಚರಿಸಲಾಯಿತು
ಕಮಲನಗರ ಪಟ್ಟಣದ ಚನ್ನಬಸವ ಪಟ್ಟದ್ದೇವರು ಪ್ರೌಢಶಾಲೆ, ಗುರಪ್ಪಾ ಟೊಣ್ಣೆ ಪ್ರಾಥಮಿಕ ಶಾಲೆ ಹಾಗೂ ಗುರುಕಾರುಣ್ಯ ಪಬ್ಲಿಕ್ ಸ್ಕೂಲ್‌ನಲ್ಲಿ ಚನ್ನಬಸವ ಪಟ್ಟದ್ದೇವರ ಜಯಂತಿ ಆಚರಿಸಲಾಯಿತು   

ಕಮಲನಗರ: ಪಟ್ಟಣದ ಚನ್ನಬಸವ ಪಟ್ಟದ್ದೇವರು ಪ್ರೌಢಶಾಲೆ, ಗುರಪ್ಪಾ ಟೊಣ್ಣೆ ಪ್ರಾಥಮಿಕ ಶಾಲೆ ಹಾಗೂ ಗುರುಕಾರುಣ್ಯ ಪಬ್ಲಿಕ್ ಸ್ಕೂಲ್ ನಲ್ಲಿ ಸೋಮವಾರ ಚನ್ನಬಸವ ಪಟ್ಟದ್ದೇವರ 136ನೇ ಜಯಂತಿ ಆಚರಿಸಲಾಯಿತು.

ಶಾಲೆಯ ಆಡಳಿತಾಧಿಕಾರಿ ಚನ್ನಬಸವ ಘಾಳೆ ಮಾತನಾಡಿ, ‘ಚನ್ನಬಸವ ಪಟ್ಟದ್ದೇವರು ಈ ಭಾಗದಲ್ಲಿ ವಚನ ಸಾಹಿತ್ಯ ಮತ್ತು ಕನ್ನಡ ಭಾಷೆಯನ್ನು ಗಟ್ಟಿಯಾಗಿ ಕಟ್ಟುವ ಕೆಲಸ ಮಾಡಿದ್ದಾರೆ’ ಎಂದರು.

ಸಂಜುಕುಮಾರ ಹಕ್ಯಾಳಕರ್, ಗುರುಕಾರುಣ್ಯ ಪಬ್ಲಿಕ್ ಶಾಲೆಯ ಪ್ರಾಂಶುಪಾಲ ನಿಲಕಂಠ ಪಾಂಡ್ರೆ ಮತ್ತು ಶಾಲೆಯ ಎಲ್ಲ ಸಿಬ್ಬಂದಿ ಉಪಸ್ಥಿತರಿದ್ದರು

ADVERTISEMENT

ಶಾಲೆಯ ವಿದ್ಯಾರ್ಥಿಗಳಾದ ಮೇಘನಾ ಸುತಾರ ಮತ್ತು ಮಹೇಶ್ವರಿ ಅವಿನಾಶ ಮಾತನಾಡಿದರು. ಭರತ ನಂದನ ನಿರೂಪಿಸಿ ವಂದಿಸಿದರು.

ಚನ್ನಬಸವ ಹಿರಿಯ ಪ್ರಾಥಮಿಕ ಶಾಲೆ: ಪಟ್ಟಣದ ಚನ್ನಬಸವ ಪಟ್ಟದ್ದೇವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಚನ್ನಬಸವ ಪಟ್ಟದ್ದೇವರ 136ನೇ ಜಯಂತಿ ಆಚರಿಸಲಾಯಿತು.

ಶಾಲೆಯ ಮುಖ್ಯಶಿಕ್ಷಕ ಜ್ಞಾನೇಶ್ವರ ಚ್ಯಾಂಡೇಶ್ವರೆ ಚನ್ನಬಸವ ಪಟ್ಟದ್ದೇವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.
ಸಂಯೋಜಕ ಸಂಜುಕುಮಾರ ಚನ್ನಾಳೆ, ಸಿಬ್ಬಂದಿ ಅಜಯ ರಾಂಪೂರೆ, ಸವೀತಾ ಪಾಟೀಲ, ಯುವರಾಜ ಬಿರಾದಾರ, ಶ್ರಾವಣ ಕಾರಬಾರಿ ಹಾಗೂ ವಿದ್ಯಾರ್ಥಿಗಳು ಇದ್ದರು.

ಕಮಲನಗರ ಪಟ್ಟಣದ ಚನ್ನಬಸವ ಪಟ್ಟದ್ದೇವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಚನ್ನಬಸವ ಪಟ್ಟದ್ದೇವರ  ಜಯಂತಿ ಆಚರಿಸಲಾಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.