
ಪ್ರಜಾವಾಣಿ ವಾರ್ತೆ
ಕಮಲನಗರ: ಸಮೃದ್ಧಿಯ ಸಂಕೇತ, ಸುಗ್ಗಿ ಹಬ್ಬ ಎಂದೆಲ್ಲ ಕರೆಸಿಕೊಳ್ಳುವ ವರ್ಷದ ಮೊದಲ ಹಬ್ಬ ಸಂಕ್ರಾಂತಿಯನ್ನು ತಾಲ್ಲೂಕಿನಾದ್ಯಂತ ಬುಧವಾರ ಸಾರ್ವಜನಿಕರು ಸಡಗರ ಸಂಭ್ರಮದಿಂದ ಆಚರಿಸಿದರು.
ಹಬ್ಬದ ನಿಮಿತ್ತ ಸಾರ್ವಜನಿಕರು ದೇವರ ಪೂಜೆ ಸಲ್ಲಿಸಿದ ಬಳಿಕ ವರ್ಷ ಪೂರ್ತಿ ಸುಖ, ಶಾಂತಿ, ನೆಮ್ಮದಿ ಕರುಣಿಸುವಂತೆ ಪ್ರಾರ್ಥಿಸಿದರು. ಬಳಿಕ ಸಾರ್ವಜನಿಕರು, ಮಕ್ಕಳು, ಮಹಿಳೆಯರು ಎಳ್ಳು, ಬೆಲ್ಲವನ್ನು ವಿನಿಮಯ ಮಾಡಿಕೊಂಡು ಈ ವರ್ಷದ ಜೀವನ ಸಿಹಿಯಾಗಿರಲಿ ಎಂದು ಪರಸ್ಟರ ಶುಭಾಶಯ ಕೋರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.