ಪ್ರಧಾನಮಂತ್ರಿ ಧನ ಧಾನ್ಯ ಕೃಷಿ ಯೋಜನೆಯನ್ನು ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ ಹಿನ್ನಲೆಯಲ್ಲಿ ಕಮಲನಗರ ಪಟ್ಟಣದ ತಾ.ಪಂ.ಸಭಾಂಗಣದಲ್ಲಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮತ್ತು ಕೌಶಲ ಅಭಿವೃದ್ದಿ ಕಾರ್ಯಕರ್ತೆಯರು ನೇರ ಪ್ರಸಾರವನ್ನು ವೀಕ್ಷಿಸಿದರು.
ಕಮಲನಗರ: ಪ್ರಧಾನಮಂತ್ರಿ ಧನ–ಧಾನ್ಯ ಕೃಷಿ ಯೋಜನೆಗೆ ಶನಿವಾರ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ ಹಿನ್ನೆಲೆಯಲ್ಲಿ ಕಮಲನಗರ ಪಟ್ಟಣದ ತಾ.ಪಂ. ಸಭಾಂಗಣದಲ್ಲಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮತ್ತು ಕೌಶಲ ಅಭಿವೃದ್ಧಿ ಕಾರ್ಯಕರ್ತೆಯರು ನೇರ ಪ್ರಸಾರವನ್ನು ವೀಕ್ಷಿಸಿದರು.
ದೇಶಾದ್ಯಂತ 100 ಜಿಲ್ಲೆಗಳಲ್ಲಿ ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳ ಅಭಿವೃದ್ಧಿ ಈ ಯೋಜನೆ ಉದ್ದೇಶವಾಗಿತ್ತು. ರೈತರ ಆದಾಯವನ್ನು ದ್ವಿಗುಣಗೊಳಿಸುವುದು ಮತ್ತು ಸುಸ್ಥಿರ ಕೃಷಿ ಪದ್ಧತಿಗೆ ಉತ್ತೇಜನ ನೀಡುವುದಾಗಿತ್ತು. ಸುಗ್ಗಿ ನಂತರ ನಷ್ಟವನ್ನು ಕಡಿಮೆ ಮಾಡಲು ಬ್ಲಾಕ್ ಮತ್ತು ಪಂಚಾಯಿತಿ ಮಟ್ಟದಲ್ಲಿ ದಾಸ್ತಾನು ಮಳಿಗೆ, ಶೀತಲ ಘಟಕ ಮತ್ತು ಆಹಾರ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲಾಗುತ್ತದೆ. ಯೋಜನೆ ಉದ್ದೇಶ ಮತ್ತು ಪರಿಣಾಮಗಳ ಕುರಿತು ಕಾರ್ಯಕರ್ತ ಮತ್ತು ಫಲಾನುಭವಿಗಳ ಜತೆ ಸಂವಾದ ನಡೆಸಲಾಯಿತ್ತು.
ತಾಲ್ಲೂಕು ವ್ಯವಸ್ಥಾಪಕಿ ಕವಿತಾ ಬಿರಾದಾರ, ತಾ.ಪಂ. ವಿಷಯ ನಿರ್ವಾಹಕ ಗಣೇಶ ಸ್ವಾಮಿ, ಒಕ್ಕೂಟದ ಪದಾಧಿಕಾರಿ, ಶಾಂತಾಬಾಯಿ, ರೇಣುಕಾ, ಸಂಗೀತಾ, ಅಂಕಿತಾ, ಮಲ್ಲೇಶ, ಪೂಜಾ ಮತ್ತು ಕೃಷಿ ಸಖಿ ಮತ್ತು ಪಶು ಸಖಿಯರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.