ಕಮಲನಗರ: ‘ಸಾತ್ವಿಕ ಆಹಾರ, ಸಕಾರಾತ್ಮಕ ವಿಚಾರ, ಸಕಲರಲ್ಲಿಯೂ ಒಳ್ಳೆಯತನ ಗುರುತಿಸುವುದು ಮತ್ತು ಪ್ರತಿನಿತ್ಯ ಶಿವನಾಮ ಧ್ಯಾನಿಸಿದರೆ ಒತ್ತಡದಿಂದ ಮುಕ್ತಿ ಪಡೆಯುವಿರಿ’ ಎಂದು ಹುಬ್ಬಳ್ಳಿಯ ಬಿ.ಕೆ ವೀಣಾ ಬಹೇನಜಿ ಹೇಳಿದರು.
ಪಟ್ಟಣದ ಶರಣಬಸಪ್ಪ ಪಬ್ಲಿಕ್ ಶಾಲೆಯ ಆವರಣದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಶಾಖೆ ವತಿಯಿಂದ ಆಯೋಜಿಸಿದ್ದ ‘ಶರಣರು ಕಂಡ ಶಿವ’ ಮೂರನೇ ದಿವಸದ ರಾಜಯೋಗ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಮಾನಸಿಕ ಶಾಂತಿ ಪಡೆಯಲು ಯೋಗ, ಧ್ಯಾನ ಅತ್ಯವಶ್ಯಕ. ಎಷ್ಟೇ ಕೆಲಸದ ಒತ್ತಡವಿದ್ದರೂ ಧ್ಯಾನಕ್ಕೆ ಸಮಯ ಕೊಟ್ಟಾಗ ಆರೋಗ್ಯವಂತ ಜೀವನ ನಡೆಸಲು ಸಾಧ್ಯ’ ಎಂದರು.
ಬಿಕೆ ಸುನಂದಾ ಬಹೇನಜಿ ಮಾತನಾಡಿ, ‘ವರ್ತಮಾನ ಸಮಯದಲ್ಲಿ ವಿಶ್ವಕ್ಕೆ ಬೇಕಾಗಿರುವುದು ಶಾಂತಿ. ಈ ಶಾಂತಿ ಜಗತ್ತಿನಲ್ಲಿ ನೆಲೆಸುವುದು ಧ್ಯಾನದಿಂದ ಮಾತ್ರ’ ಎಂದರು.
ಬಿಕೆ ಜಯಶ್ರೀ ಬಹೇನಜಿ, ಬಿಕೆ ಲಕ್ಷ್ಮೀ ಬಹೇನಜಿ, ಪಿಎನ್ ಮಾನಕರಿ, ಚನ್ನಬಸವ ಘಾಳೆ, ಮಹಾದೇವ ಮಡಿವಾಳ, ದಯಾನಂದ, ಪತ್ರಕರ್ತರಾದ ಎಸ್.ಎಸ್.ಮೈನಾಳೆ, ಭಾವುರಾವ ಹೇಡೆ, ರಾಜಶೇಖರ ಅಜ್ಜಾ, ಸಿಎಂ ಗಳಗೆ, ಶಿವಕುಮಾರ ಎಕಲಾರೆ, ಸಂಗಮೇಶ ಮುರ್ಕೆ, ಮೋಯಿನ್ ಅತನೂರೆ, ಮನೋಜ ಹಿರೇಮಠ, ಪರಮೇಶ ರಾಂಪೂರೆ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.