ADVERTISEMENT

ಕಮಲನಗರ| ಹಿಂದೂಗಳಿಂದ ಭಾರತದ ರಕ್ಷಣೆ: ಶಂಭುಲಿಂಗ ಶಿವಾಚಾರ್ಯರು

​ಪ್ರಜಾವಾಣಿ ವಾರ್ತೆ
Published 14 ಜನವರಿ 2026, 5:10 IST
Last Updated 14 ಜನವರಿ 2026, 5:10 IST
ಕಮಲನಗರ ತಾಲ್ಲೂಕಿನ ಕೋಟಗ್ಯಾಳ ಗ್ರಾಮದ ಮಹಾದೇವ ಮಂದಿರದ ಆವರಣದಲ್ಲಿ ಭಾನುವಾರ ರಾತ್ರಿ ಹಮ್ಮಿಕೊಂಡ ಹಿಂದೂ ಸಮ್ಮೇಳನ ಕಾರ್ಯಕ್ರಮದಲ್ಲಿ ಡೋಣಗಾಂವ(ಎಂ), ರಂಡ್ಯಾಳ, ಉದಗೀರನ್ ಹಾವಗೀಸ್ವಾಮಿ ಮಠದ ಪೀಠಾಧಿಪತಿ ಶಂಭುಲಿಂಗ ಶಿವಾಚಾರ್ಯರು ಮಾತನಾಡಿದರು
ಕಮಲನಗರ ತಾಲ್ಲೂಕಿನ ಕೋಟಗ್ಯಾಳ ಗ್ರಾಮದ ಮಹಾದೇವ ಮಂದಿರದ ಆವರಣದಲ್ಲಿ ಭಾನುವಾರ ರಾತ್ರಿ ಹಮ್ಮಿಕೊಂಡ ಹಿಂದೂ ಸಮ್ಮೇಳನ ಕಾರ್ಯಕ್ರಮದಲ್ಲಿ ಡೋಣಗಾಂವ(ಎಂ), ರಂಡ್ಯಾಳ, ಉದಗೀರನ್ ಹಾವಗೀಸ್ವಾಮಿ ಮಠದ ಪೀಠಾಧಿಪತಿ ಶಂಭುಲಿಂಗ ಶಿವಾಚಾರ್ಯರು ಮಾತನಾಡಿದರು   

ಕಮಲನಗರ: ‘ಹಿಂದೂಸ್ಥಾನದಲ್ಲಿರುವ ನಾವೆಲ್ಲರೂ ಹಿಂದುಗಳು. ನಾವು ಒಳ್ಳೆಯವರೊಂದಿಗೆ ಸಂಪರ್ಕ ಹೊಂದಬೇಕು. ಹಿಂದೂಗಳಿಂದ ಭಾರತ ರಕ್ಷಣೆಯಾಗುತ್ತದೆ’ ಎಂದು ಡೋಣಗಾಂವ(ಎಂ), ರಂಡ್ಯಾಳ, ಉದಗೀರನ್ ಹಾವಗೀಸ್ವಾಮಿ ಮಠದ ಪೀಠಾಧಿಪತಿ ಶಂಭುಲಿಂಗ ಶಿವಾಚಾರ್ಯರು ಹೇಳಿದರು.

ತಾಲ್ಲೂಕಿನ ಕೋಟಗ್ಯಾಳ ಗ್ರಾಮದ ಮಹಾದೇವ ಮಂದಿರದ ಆವರಣದಲ್ಲಿ ಭಾನುವಾರ ರಾತ್ರಿ ಹಮ್ಮಿಕೊಂಡ ಹಿಂದೂ ಸಮ್ಮೇಳನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹಿಂದೂಗಳಿಂದ ದೇಶದ ಸಂಸ್ಕೃತಿ ಬೆಳೆದಿದೆ. ಭಾರತೀಯ ಸಂಸ್ಕೃತಿ ಜಗತ್ತಿಗೆ ಒಳ್ಳೆಯದನ್ನು ಮಾಡಿದೆ. ಹಿಂದೂ ಸಂಘಟನೆ, ಜಾಗೃತಿಯಿಂದ ಜಗತ್ತಿಗೆ ಒಳ್ಳೆಯದಾಗಿದೆ. ಹಿಂದೂ ಸಮಾಜ ಒಂದಾಗಿ ಸಮಾನತೆಯಿಂದ ಬಾಳಬೇಕು ಎಂದು ಹೇಳಿದರು.

ADVERTISEMENT

ಹಿಂದೂ ಸಂಸ್ಕೃತಿಯು ಬದುಕಿಸುವ ಸಂಸ್ಕೃತಿ, ಧರ್ಮ ಕಾಪಾಡುವುದು ನಮ್ಮೆಲ್ಲರ ಕರ್ತವ್ಯ. ಎಲ್ಲರೂ ಸ್ವಾಭಿಮಾನ, ಭಾಷಾಭಿಮಾನ, ದೇಶಾಭಿಮಾನ, ಧರ್ಮಾಭಿಮಾನ ಹೊಂದಬೇಕು. ಹಿಂದೂಗಳು ನಾವುಲ್ಲ ಒಂದೇ ಎನ್ನುವ ಭಾವ ಮೂಡಬೇಕು ಎಂದರು.

ಉದಗೀರನ್ ವಕ್ತಾರ ಜಿಲ್ಲಾ ಪ್ರಚಾರಕ ರಾಜೇಂದ್ರ ಸಂಗ್ರಾಮ ಬಿರಾದಾರ, ಬಾಲಾಜಿ ಪಾಟೀಲ್, ಪ್ರಮುಖರಾದ ಸಿದ್ದಯ್ಯ ಸ್ವಾಮಿ, ಮಷ್ಣಪ್ಪ ಮೇತ್ರೆ, ರಾಜೇಂದ್ರ ಬಿರಾದಾರ, ಗಣೇಶ ಕಾರೆಗಾವೆ, ಶೈಲೇಶ ಪೇನೆ ಹಾಗೂ ಇನ್ನಿತರರು ಇದ್ದರು.

ಮಹಾದೇವ ಹಜನಾಳೆ ನಿರೂಪಿಸಿ, ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.