ADVERTISEMENT

ಮನುಕುಲದ ಕಲ್ಯಾಣ ಬಯಸಿದ ಕನಕದಾಸರು: ಶಾಸಕ ಬಂಡೆಪ್ಪ ಕಾಶೆಂಪುರ

ನೌಕರರ ಭವನದಲ್ಲಿ ಕನಕದಾಸ ಜಯಂತ್ಯುತ್ಸವ: ಶಾಸಕ ಬಂಡೆಪ್ಪ ಕಾಶೆಂಪುರ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2022, 15:04 IST
Last Updated 7 ಡಿಸೆಂಬರ್ 2022, 15:04 IST
ಬೀದರ್‌ನ ರಾಜ್ಯ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ನಡೆದ ಕನಕದಾಸ ಜಯಂತಿ ಕಾರ್ಯಕ್ರಮವನ್ನು ಶಾಸಕ ಬಂಡೆಪ್ಪ ಕಾಶೆಂಪುರ ಉದ್ಘಾಟಿಸಿದರು
ಬೀದರ್‌ನ ರಾಜ್ಯ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ನಡೆದ ಕನಕದಾಸ ಜಯಂತಿ ಕಾರ್ಯಕ್ರಮವನ್ನು ಶಾಸಕ ಬಂಡೆಪ್ಪ ಕಾಶೆಂಪುರ ಉದ್ಘಾಟಿಸಿದರು   

ಬೀದರ್: ‘ಕನಕದಾಸರು ಮನುಕುಲದ ಕಲ್ಯಾಣ ಬಯಸಿದ್ದರು’ ಎಂದು ಶಾಸಕ ಬಂಡೆಪ್ಪ ಕಾಶೆಂಪುರ ಹೇಳಿದರು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ವತಿಯಿಂದ ಇಲ್ಲಿಯ ಪ್ರತಾಪನಗರದ ರಾಜ್ಯ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ನಡೆದ ಕನಕದಾಸ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜಾತಿ, ಧರ್ಮದ ಹೆಸರಲ್ಲಿ ಹೊಡೆದಾಡದಿರಿ. ಇಡೀ ಮಾನವ ಕುಲ ಒಂದೇ ಎಂದು ಸಾರಿದ್ದರು. ಅವರ ತತ್ವಗಳ ಪಾಲನೆಯಿಂದ ಸಮಾಜದಲ್ಲಿ ಸಾಮರಸ್ಯ, ಸುಖ, ಶಾಂತಿ ಹಾಗೂ ನೆಮ್ಮದಿ ಸಾಧ್ಯವಿದೆ ಎಂದು ಹೇಳಿದರು.

ADVERTISEMENT

ರಾಜ್ಯ ಸರ್ಕಾರಿ ನೌಕರರಿಗೆ ಏಳನೇ ವೇತನ ಆಯೋಗ ರಚಿಸಲು ವಿಧಾನಸಭೆಯಲ್ಲಿ ಧ್ವನಿ ಎತ್ತಿದ್ದೆ. ಸರ್ಕಾರ ಇದೀಗ ಆಯೋಗ ರಚಿಸಿದೆ. ಕೂಡಲೇ ಅದನ್ನು ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿದರು.

ನೌಕರರ ಸಂಘ ಎಲ್ಲ ಜಾತಿ, ಧರ್ಮಗಳ ನೌಕರರನ್ನು ಒಂದೇ ವೇದಿಕೆಯಲ್ಲಿ ತೆಗೆದುಕೊಂಡು ಹೋಗುತ್ತಿದೆ. ನೌಕರರ ಹಿತರಕ್ಷಣೆಗೆ ಶ್ರಮಿಸುತ್ತಿದೆ. ರಾಜ್ಯದಲ್ಲೇ ಮಾದರಿಯಾಗಿ ಕೆಲಸ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಂಘದ ಚಟುವಟಿಕೆಗಳಿಗೆ ತಮ್ಮ ಸಹಾಯ ಹಾಗೂ ಸಹಕಾರ ಸದಾ ಇರಲಿದೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಮಾತನಾಡಿ,‘ಬೀದರ್ ಶರಣರು ನಡೆದಾಡಿದ ಪುಣ್ಯಭೂಮಿಯಾಗಿದೆ. ಸರ್ವ ಧರ್ಮ ಸಮನ್ವಯದ ಬೀಡು ಕೂಡ ಹೌದು. ಎಲ್ಲ ಜಾತಿ, ಧರ್ಮಗಳ ಜನ ಸಾಮರಸ್ಯದಿಂದ ಬದುಕು ಸಾಗಿಸುತ್ತಿರುವುದು ಜಿಲ್ಲೆಯ ವಿಶೇಷ’ ಎಂದು ಹೇಳಿದರು.

ಮಹಾತ್ಮರ ಜಯಂತಿ ಆಚರಣೆಯಿಂದ ಭ್ರಾತೃತ್ವದ ಭಾವನೆ ನೆಲೆಗೊಳ್ಳುತ್ತದೆ. ಹೀಗಾಗಿ ಸಂಘದಿಂದ ಮಹಾ ಪುರುಷರ ಜಯಂತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಅವರ ತತ್ವಾದರ್ಶಗಳನ್ನು ಪರಿಚಯಿಸಲಾಗುತ್ತಿದೆ ಎಂದು ತಿಳಿಸಿದರು.

ರಾಷ್ಟ್ರಮಟ್ಟದ ನೈಟಿಂಗೇಲ್ ಪ್ರಶಸ್ತಿ ಪುರಸ್ಕೃತ ಲಕ್ಷ್ಮಿ ಮೇತ್ರೆ ಅವರನ್ನು ಸನ್ಮಾನಿಸಲಾಯಿತು. ಉಪನ್ಯಾಸಕಿ ಡಾ. ಸುನೀತಾ ಕೂಡ್ಲಿಕರ್ ವಿಶೇಷ ಉಪನ್ಯಾಸ ನೀಡಿದರು.

ಮಹಾತ್ಮ ಬೋಮಗೊಂಡೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅಮೃತರಾವ್ ಚಿಮಕೋಡೆ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಗೀತಾ ಚಿದ್ರಿ, ನಗರಸಭೆ ಸದಸ್ಯ ಹಣಮಂತ ಮಲ್ಕಾಪುರ, ವಿವಿಧ ಇಲಾಖೆಗಳ ಅಧಿಕಾರಿಗಳಾದ ನರಸಪ್ಪ ದೇವಗೊಂಡ, ಶಿವಾಜಿ ಡೋಣೆ, ಮಲ್ಲಿಕಾರ್ಜುನ ಬಾವಗೆ, ನಿವೃತ್ತ ಅಧಿಕಾರಿ ಎಂ.ಎಸ್. ಕಟಗಿ, ಮಾಳಪ್ಪ ಅಡಸಾರೆ, ಸಂತೋಷ ಜೋಳದಾಪಕೆ, ಪಿ.ಎಸ್. ಇಟಕಂಪಳ್ಳಿ, ಸಂಜೀವಕುಮಾರ ಅತಿವಾಳೆ, ರವಿಂದ್ರ ಲಂಜವಾಡಕರ್, ಡಾ. ಶರಣಪ್ಪ ಮಲಗೊಂಡ, ಹಣ್ಮು ಪಾಜಿ, ಶಂಕರ ಬಾಪುರೆ, ಶ್ರೀಪತಿ ಮೇತ್ರೆ, ವಿಜಯಕುಮಾರ ಡುಮ್ಮೆ, ಸಂಘದ ಜಿಲ್ಲಾ ಘಟಕದ ಗೌರವಾಧ್ಯಕ್ಷ ಬಸವರಾಜ ಜಕ್ಕಾ, ಉಪಾಧ್ಯಕ್ಷರಾದ ಬಕ್ಕಪ್ಪ ನಿರ್ಣಾಕರ್, ಸಿದ್ದಮ್ಮ, ಓಂಕಾರ ಮಲ್ಲಿಗೆ, ಪಾಂಡುರಂಗ ಬೆಲ್ದಾರ್, ಹಿರಿಯ ಸಲಹೆಗಾರರಾದ ಶಿವಶಂಕರ ಟೋಕರೆ, ಶಿವರಾಜ ಕಪಲಾಪುರೆ, ತಾಲ್ಲೂಕು ಘಟಕಗಳ ಅಧ್ಯಕ್ಷರಾದ ಶಿವಕುಮಾರ ಘಾಟೆ, ರಾಜಕುಮಾರ ಬೇಲೂರೆ, ಮಲ್ಲಿಕಾರ್ಜುನ ಮೇತ್ರೆ, ಗಣಪತಿ ಜಮಾದಾರ್, ಸಂತೋಷ ಮುದ್ದಾ, ಗಜರಾಬಾಯಿ ಇದ್ದರು.

ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ರಾಜಶೇಖರ ಮಂಗಲಗಿ ಸ್ವಾಗತಿಸಿದರು. ಕಾರ್ಯಾಧ್ಯಕ್ಷ ಡಾ.ರಾಜಕುಮಾರ ಹೊಸದೊಡ್ಡೆ ನಿರೂಪಿಸಿದರು. ಸಹ ಕಾರ್ಯದರ್ಶಿ ಮನೋಹರ ಕಾಶಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.