ಬೀದರ್: ಜೈ ಭಾರತ ಮಾತಾ ಸೇವಾ ಸಮಿತಿಯಿಂದ ನಗರದ ಬೀದರ್-ಭಾಲ್ಕಿ ರಸ್ತೆಯ ರಿಂಗ್ ರೋಡ್ ಕ್ರಾಸ್ ಬಳಿ ಶುಕ್ರವಾರ ಕಾರ್ಗಿಲ್ ವಿಜಯ್ ದಿವಸ್ ಹಾಗೂ ಮಾಜಿ ಸೈನಿಕರ ಗೌರವ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಮಾಜಿ ಸೈನಿಕರಾದ ನಾಗನಾಥ ಮೇತ್ರೆ, ಅಶೋಕರಾವ ಮದಕಟ್ಟಿ, ಶಂಕರರಾವ ತೇಲಂಗ, ಅನಿಲ್ ಮೇತ್ರೆ, ಸುಧಾಕರ ಕುಲಕರ್ಣಿ, ಚಂದ್ರಕಾಂತ ಚಂದನಕೇರೆ, ಅಮೋಲ್ ಕುಲಕರ್ಣಿ, ಷಣ್ಮುಖಯ್ಯ ಸ್ವಾಮಿ, ಮಲ್ಲಿಕಾರ್ಜುನ ಭರಶೆಟ್ಟಿ ಅವರನ್ನು ಸಮಿತಿ ರಾಷ್ಟ್ರೀಯ ಸಂಸ್ಥಾಪಕ ಅಧ್ಯಕ್ಷ ಹವಾ ಮಲ್ಲಿನಾಥ ಮಹಾರಾಜ (ನೀರಗುಡಿ ಮುತ್ಯಾ) ಸನ್ಮಾನಿಸಿದರು.
ಇದಕ್ಕೂ ಮುನ್ನ ಸಿಕ್ಕಿಂನಲ್ಲಿ ಹುತಾತ್ಮರಾದ ಕಮಲನಗರ ತಾಲ್ಲೂಕಿನ ಕರ‍್ಯಾಳ ಗ್ರಾಮದ ಯೋಧ ಅನಿಲ್ ಅವರಿಗೆ ಆತ್ಮಕ್ಕೆ ಶಾಂತಿ ಕೋರಿ ಮೌನ ಆಚರಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಜಾತಿ, ಧರ್ಮ, ಪಕ್ಷ, ಪರಿವಾರಕ್ಕೆ ತೋರಿಸುವ ಪ್ರೀತಿ, ಕಾಳಜಿ, ಉತ್ಸಾಹವನ್ನು ಪ್ರತಿಯೊಬ್ಬರೂ ದೇಶದ ಏಕತೆ ಮತ್ತು ಅಖಂಡತೆಗೆ ತೋರಿಸಬೇಕು. ದೇಶದ ಹಿತ ಮತ್ತು ರಕ್ಷಣೆಗೆ ಸಂಕಲ್ಪ ಮಾಡಬೇಕು ಎಂದು ಹವಾ ಮಲ್ಲಿನಾಥ ಮಹಾರಾಜ (ನಿರಗುಡಿ ಮುತ್ತ್ಯಾ) ಹೇಳಿದರು.
ಸಮಿತಿ ಹಿರಿಯರಾದ ಗುರುಸಿದ್ದಪ್ಪ ಬೆನಕನಳ್ಳಿ, ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷರೆಡ್ಡಿ ಆಣದೂರ, ಜೆಡಿಎಸ್ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಜಾಫೆಟ್ ರಾಜ್ ಕಡ್ಯಾಳ್, ಪ್ರಮುಖರಾದ ವೀರೇಶ ಸ್ವಾಮಿ, ವಿಷ್ಣು, ಶರಣು ಪಾಟೀಲ, ಪುಷ್ಪಕ್ ಜಾಧವ್ , ಸಮಿತಿ ಭಾಲ್ಕಿ ತಾಲ್ಲೂಕು ಅಧ್ಯಕ್ಷ ಪಪ್ಪು ಪಾಟೀಲ ಖಾನಾಪುರ, ಪತ್ರಕರ್ತ ಸದಾನಂದ ಜೋಶಿ, ಸಮಿತಿ ವಕ್ತಾರ ವೈಜಿನಾಥ ಝಳಕಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.