ADVERTISEMENT

ಮೂಲ ಸೌಕರ್ಯ ಒದಗಿಸಲು ಆದ್ಯತೆ: ಅಶೋಕ ಖೇಣಿ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2023, 14:04 IST
Last Updated 17 ಏಪ್ರಿಲ್ 2023, 14:04 IST
ಚಿಟಗುಪ್ಪ ತಾಲ್ಲೂಕಿನ ಮಿನಕೇರಾ ಗ್ರಾಮದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಅಶೋಕ ಖೇಣಿ ಮಾತನಾಡಿದರು
ಚಿಟಗುಪ್ಪ ತಾಲ್ಲೂಕಿನ ಮಿನಕೇರಾ ಗ್ರಾಮದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಅಶೋಕ ಖೇಣಿ ಮಾತನಾಡಿದರು   

ಚಿಟಗುಪ್ಪ: ‘ಕ್ಷೇತ್ರದ ಎಲ್ಲ ಗ್ರಾಮಗಳಿಗೆ ಶಿಕ್ಷಣ, ಆರೋಗ್ಯ, ಸಾರಿಗೆ ಸೌಲಭ್ಯ ಒದಗಿಸಲು ಕಾಂಗ್ರೆಸ್‌ ಪ್ರಥಮ ಆದ್ಯತೆ ನೀಡಲಿದೆ’ ಎಂದು ಅಭ್ಯರ್ಥಿ ಅಶೋಕ ಖೇಣಿ ಹೇಳಿದರು.

ತಾಲ್ಲೂಕಿನ ಮಿನಕೇರಾ ಗ್ರಾಮದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದರು.

‘ಹಿಂದಿನ ಅವಧಿಯಲ್ಲಿ ಕ್ಷೇತ್ರಕ್ಕೆ ₹2,231 ಕೋಟಿ ಅನುದಾನ ತರಲಾಗಿತ್ತು. ಸಮಗ್ರ ಪ್ರಗತಿಗಾಗಿ ಶ್ರಮಿಸಲಾಗಿತ್ತು. ಈ ಬಾರಿ ಕ್ಷೇತ್ರದಲ್ಲಿ ವೈದ್ಯಕೀಯ ಕಾಲೇಜು ಆರಂಭಕ್ಕೆ ಒತ್ತು ಕೊಡಲಾಗುವುದು. ಮತದಾರರು ಬಹುಮತದಿಂದ ಆಯ್ಕೆ ಮಾಡಬೇಕು’ ಎಂದು ಮನವಿ ಮಾಡಿದರು.

ADVERTISEMENT

ಮುಖಂಡರಾದ ಮೀನಾಕ್ಷಿ ಸಂಗ್ರಾಮ ಹಾಗೂ ಅಬ್ದುಲ್‌ ಸತ್ತರ್‌ ಮಾತನಾಡಿದರು.

ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಚಂದ್ರಶೇಖರ್‌ ಚನ್ನಶೆಟ್ಟಿ, ಲೋಕೇಶ್‌ ಮಂಗಲಗಿ, ಪಕ್ಷದ ಅಲ್ಪ ಸಂಖ್ಯಾತರ ಘಟಕದ ರಾಜ್ಯ ವೀಕ್ಷಕ ರಾಜಕುಮಾರ ತರಿ, ಶಿವಕುಮಾರ ಜುನ್ನಾ, ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗಶೆಟ್ಟಿ ಅರಕಿ, ಸದಸ್ಯ ಸಂತೋಷ, ಜೀವನ್‌, ಬಸವರಾಜ್‌, ಶಂಕರ್.ಮೋಸಿನ್‌, ಅಯೂಬ್‌, ತುಕಾರಾಮ, ರಾಜದೀಪ್‌, ಸುನೀಲ, ಬಾಭುರಾವ್‌, ಸಂತೋಷ ಕಮಲಪುರ್‌ ಹಾಗೂ ಶಿವರಾಜ್‌ ಹಾವಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.