ADVERTISEMENT

ಶಾಸಕ ಕಾಶೆಂಪೂರ ಬೃಹತ್ ಪಾದಯಾತ್ರೆ

ಬೀದರ್ ದಕ್ಷಿಣ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2023, 14:50 IST
Last Updated 18 ಏಪ್ರಿಲ್ 2023, 14:50 IST
ಬೀದರ್‌ನಲ್ಲಿ ನಾಮಪತ್ರ ಸಲ್ಲಿಕೆಗೆ ಮುನ್ನ ಬೀದರ್ ದಕ್ಷಿಣ ಜೆಡಿಎಸ್ ಅಭ್ಯರ್ಥಿ ಬಂಡೆಪ್ಪ ಕಾಶೆಂಪೂರ ಅವರು ಜೆಡಿಎಸ್ ಕಾರ್ಯಕರ್ತರು ಹಾಗೂ ಬೆಂಬಲಿಗರೊಂದಿಗೆ ಬೃಹತ್ ಪಾದಯಾತ್ರೆ ನಡೆಸಿದರು
ಬೀದರ್‌ನಲ್ಲಿ ನಾಮಪತ್ರ ಸಲ್ಲಿಕೆಗೆ ಮುನ್ನ ಬೀದರ್ ದಕ್ಷಿಣ ಜೆಡಿಎಸ್ ಅಭ್ಯರ್ಥಿ ಬಂಡೆಪ್ಪ ಕಾಶೆಂಪೂರ ಅವರು ಜೆಡಿಎಸ್ ಕಾರ್ಯಕರ್ತರು ಹಾಗೂ ಬೆಂಬಲಿಗರೊಂದಿಗೆ ಬೃಹತ್ ಪಾದಯಾತ್ರೆ ನಡೆಸಿದರು   

ಬೀದರ್: ನಾಮಪತ್ರ ಸಲ್ಲಿಕೆಗಾಗಿ ಬೀದರ್ ದಕ್ಷಿಣ ಜೆಡಿಎಸ್ ಅಭ್ಯರ್ಥಿ, ಶಾಸಕ ಬಂಡೆಪ್ಪ ಕಾಶೆಂಪೂರ ನಗರದಲ್ಲಿ ಮಂಗಳವಾರ ಬೃಹತ್ ಪಾದಯಾತ್ರೆ ನಡೆಸಿದರು.

ನಗರದ ಓಲ್ಡ್ ಸಿಟಿಯಲ್ಲಿ ಇರುವ ತಮ್ಮ ನಿವಾಸದಿಂದ ಅಪಾರ ಕಾರ್ಯಕರ್ತರು, ಬೆಂಬಲಿಗರು ಹಾಗೂ ಅಭಿಮಾನಿಗಳೊಂದಿಗೆ ಪಾದಯಾತ್ರೆಯಲ್ಲಿ ತಹಶೀಲ್ದಾರ್ ಕಚೇರಿಗೆ ಬಂದು ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದರು.
ಪಾದಯಾತ್ರೆ ಮಾರ್ಗದಲ್ಲಿ ಕಾಶೆಂಪೂರ ಅವರು ಓಲ್ಡ್‍ಸಿಟಿಯ ರಾಮ ಮಂದಿರ, ಭವಾನಿ ಮಂದಿರಕ್ಕೆ ಭೇಟಿ ಕೊಟ್ಟು ದರ್ಶನ ಪಡೆದರು. ದರ್ಗಾ ಮುಲ್ತಾನಿ ಬಾದಷಾದಲ್ಲಿ ಪಾರ್ಥನೆ ಸಲ್ಲಿಸಿದರು.

ಡೊಳ್ಳು, ಹಲಗೆ, ಬಾಜಾ ಭಜಂತ್ರಿ, ವಾದ್ಯ ಮೇಳಗಳು ಪಾದಯಾತ್ರೆಯಲ್ಲಿ ಸದ್ದು ಮಾಡಿದವು. ಪಾದಯಾತ್ರೆ ಓಲ್ಡ್ ಸಿಟಿ, ಅಂಬೇಡ್ಕರ್ ವೃತ್ತ, ಭಗತ್‍ಸಿಂಗ್ ವೃತ್ತದ ಮಾರ್ಗವಾಗಿ ಸಾಗಿ ತಹಶೀಲ್ದಾರ್ ಕಚೇರಿ ಬಂದು ಮುಕ್ತಾಯಗೊಂಡಿತು. ಬಂಡೆಪ್ಪ ಕಾಶೆಂಪುರ ಅವರು ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದರು. ಬೀದರ್ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸೂರ್ಯಕಾಂತ ನಾಗಮಾರಪಳ್ಳಿ, ಪ್ರಮುಖರಾದ ಕಿರಣ ಚಂದಾ, ರಾಜು ಕಡ್ಯಾಳ್ ಇದ್ದರು.

ADVERTISEMENT

ವಿಶೇಷ ಪೂಜೆ:

ನಾಮಪತ್ರ ಸಲ್ಲಿಕೆಗೆ ಮುನ್ನ ಶಾಸಕರು ಕಾಶೆಂಪೂರ (ಪಿ) ಗ್ರಾಮದ ಮರಿಗೆಮ್ಮ ಮಂದಿರ, ಖಾನಾಪುರದ ಮೈಲಾರ ಮಲ್ಲಣ್ಣ ದೇವಸ್ಥಾನ, ಘೃತಮಾರಿ ಮಂದಿರ, ಹನುಮಾನ ಮಂದಿರ, ರೇಜಂತಲ್‍ನ ಸಿದ್ಧಿ ವಿನಾಯಕ ಮಂದಿರ, ಬೀದರ್‌ನ ಹನುಮಾನ ಮಂದಿರ, ಮಂಗಲಪೇಟೆಯ ಭವಾನಿ ಮಾತೆ ಮಂದಿರದಲ್ಲಿ ಕುಟುಂಬ ಸಮೇತ ವಿಶೇಷ ಪೂಜೆ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.