ADVERTISEMENT

ಸಾಹಿತ್ಯಿಕ ಚಟುವಟಿಕೆಗೆ ಕಸಾಪ ಉತ್ತೇಜನ

ಜಿಲಾ ಉಸ್ತುವಾರಿ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಶಿವಕುಮಾರ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2020, 15:05 IST
Last Updated 20 ಸೆಪ್ಟೆಂಬರ್ 2020, 15:05 IST
ಬೀದರ್‌ನಲ್ಲಿ ಆಯೋಜಿಸಿದ್ದ ಮನೆಯಂಗಳದಲ್ಲಿ ಮಾತು ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಮಾನಶೆಟ್ಟಿ ಬೆಳಕೇರಿ ದಂಪತಿಯನ್ನು ಸನ್ಮಾನಿಸಲಾಯಿತು
ಬೀದರ್‌ನಲ್ಲಿ ಆಯೋಜಿಸಿದ್ದ ಮನೆಯಂಗಳದಲ್ಲಿ ಮಾತು ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಮಾನಶೆಟ್ಟಿ ಬೆಳಕೇರಿ ದಂಪತಿಯನ್ನು ಸನ್ಮಾನಿಸಲಾಯಿತು   

ಬೀದರ್‌: ‘ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಹಾಗೂ ತಾಲ್ಲೂಕು ಘಟಕಗಳು ಕೋವಿಡ್‌ ಸೋಂಕು ಹರಡುವಿಕೆ ಭಯದ ಮಧ್ಯೆಯೂ ಫೇಸ್‌ಬುಕ್‌ ಮೂಲಕ ಕಾರ್ಯಕ್ರಮ ಆಯೋಜಿಸಿ ಸಾಹಿತ್ಯಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುತ್ತಿದೆ’ ಎಂದು ಜಿಲಾ ಉಸ್ತುವಾರಿ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಶಿವಕುಮಾರ ಕಟ್ಟೆ ಹೇಳಿದರು.

ಹಿರಿಯ ಸಾಹಿತಿ ಮಾನಶೆಟ್ಟಿ ಬೆಳಕೇರಿ ನಿವಾಸದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಆಯೋಜಿಸಿದ್ದ
ಮನೆಯಂಗಳದಲ್ಲಿ ಮಾತು 20ನೇ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಫೇಸ್‍ಬುಕ್ ಲೈವ್ ಮೂಲಕ ಕಾರ್ಯಕ್ರಮ ಏರ್ಪಡಿಸುತ್ತಿರುವುದು ಅಭಿನಂದನಾರ್ಹವಾಗಿದೆ’ ಎಂದು ಹೇಳಿದರು.

ADVERTISEMENT

‘ಹಿರಿಯ ಸಾಹಿತಿ ಮಾನಶೆಟ್ಟಿ ಬೆಳಕೇರಿ ಅವರಿಗೆ ಯುವ ಮಕ್ಕಳ ಸಾಹಿತಿ ಪ್ರಶಸ್ತಿ, ವಿಕಾಸ ಅಕಾಡೆಮಿ ವತಿಯಿಂದ ಡಾ.ಅಬ್ದುಲ್ ಕಲಾಂ ವಿಸನ್ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಶಸ್ತಿಗಳು ದೊರಕಿವೆ’ ಎಂದು ತಿಳಿಸಿದರು.

ಹಿರಿಯ ಸಾಹಿತಿ ಮಾನಶೆಟ್ಟಿ ಬೆಳಕೇರಿ ಮಾತನಾಡಿ, ‘ನನಗೆ ಪ್ರಾಥಮಿಕ ಹಂತದಲ್ಲಿಯೇ ಕವನ ಬರೆಯುವ ಆಸಕ್ತಿ ಬೆಳೆಯಿತು. ಆ ಕಾರಣಕ್ಕಾಗಿಯೇ 16ನೇ ವಯಸ್ಸಿನಲ್ಲಿ ಹೂಗೊಂಚಲು ಎಂಬ ಕವನ ಸಂಕಲನ 1965 ರಲ್ಲಿ ಪ್ರಕಟವಾಗಿದೆ. ಇಲ್ಲಿಯವರೆಗೆ ಸುಮಾರು 12 ಕೃತಿಗಳು ಸಾಹಿತ್ಯಲೋಕದಲ್ಲಿ ಸಮರ್ಪಿತಗೊಂಡಿವೆ’ ಎಂದರು.

‘ಜಿಲ್ಲೆಯಲ್ಲಿ ಯುವ ಸಾಹಿತಿಗಳು ಹೆಚ್ಚು ಹೊರ ಹೊಮ್ಮುತಿರುವುದು ಸಂತೋಷದ ವಿಷಯವಾಗಿದೆ. ಆದರೆ ಹೆಚ್ಚು ಅಧ್ಯಯನಶೀಲರಾದಾಗ ಮಾತ್ರ ಉತ್ತಮ ಸಾಹಿತ್ಯ ಹೊರಬರಲು ಸಾಧ್ಯ’ ಎಂದು ಅಭಿಪ್ರಾಯಪಟ್ಟರು.

ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಸ್‌.ಮನೋಹರ್ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚೆನಶೆಟ್ಟಿ ಇದ್ದರು. ಓಂಪ್ರಕಾಶ ದೆಡ್ಡೆ ಸಂವಾದ ನಡೆಸಿಕೊಟ್ಟರು. ಸಿದ್ಧಾರೂಢ ಭಾಲ್ಕೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.