ADVERTISEMENT

‘ಎಚ್‌ಐವಿ ನಿಯಂತ್ರಣಕ್ಕೆ ಜಾಗೃತಿ ಅವಶ್ಯಕ’

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2024, 15:52 IST
Last Updated 13 ಆಗಸ್ಟ್ 2024, 15:52 IST

ಬೀದರ್: ‘ಎಚ್‌ಐವಿ ಸೊಂಕು ನಿಯಂತ್ರಿಸಲು ಪ್ರತಿಯೊಬ್ಬರು ಮುಂಜಾಗೃತೆ ವಹಿಸುವುದು ಅವಶ್ಯ’  ಎಂದು ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ದೀಲಿಪ ಡೊಂಗ್ರೆ ಹೇಳಿದರು.

ಇಲ್ಲಿಯ ನಾನಕ್ ಝೀರಾಸಾಹೇಬ್ ಕಾಲೇಜು ಆಫ್ ನರ್ಸಿಂಗ್ ಕಾಲೇಜಿನಲ್ಲಿ ಆಯೋಜಿಸಿದ್ದ ಅಂತರರಾಷ್ಟ್ರೀಯ ಯುವದಿನಾಚರಣೆ ಮತ್ತು ಎಚ್‌ಐವಿ ಅರಿವು ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಯುವದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಆನ್‌ಲೈನ್ ಕ್ವಿಜ್ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ಮತ್ತು ಪ್ರಮಾಣ ಪತ್ರ ವಿತರಿಸಲಾಯಿತು.

ADVERTISEMENT

ಎಚ್‌ಐವಿ ಮತ್ತು ಸ್ವಯಂ ಪ್ರೇರಿತ ರಕ್ತದಾನದ ಬಗ್ಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.

ನಾನಕ್ ಝಿರಾಸಾಹೇಬ್ ಕಾಲೇಜ್ ಆಫ್ ನರ್ಸಿಂಗ್ ಕಾಲೇಜ್ ಮಹಾಂತೇಶ ಮಿರ್ಜಿ, ಫಾರ್ಮಸಿ ಪ್ರಾಚಾರ್ಯ ಅಮೋಲ ದಮನೆ, ಉಪನ್ಯಾಸಕಿ ಜೈಶ್ರೀ, ಸೂರ್ಯಕಾಂತ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.