ADVERTISEMENT

ಕಾಯಕ ಉತ್ಸವ; ಸ್ಥಳೀಯ ಉತ್ಪನ್ನ ಪ್ರದರ್ಶನ

ಹಾರಕೂಡ ಹಿರೇಮಠ ಮತ್ತು ಕ್ಷೇತ್ರ ಸಮಿತಿಯಿಂದ ಆಯೋಜನೆ, ಚನ್ನವೀರ ಶಿವಾಚಾರ್ಯರಿಂದ ಮಾಹಿತಿ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2026, 5:37 IST
Last Updated 1 ಫೆಬ್ರುವರಿ 2026, 5:37 IST
ಚಂದ್ರಶೇಖರ ಸೋಮಶೆಟ್ಟಿ
ಚಂದ್ರಶೇಖರ ಸೋಮಶೆಟ್ಟಿ   

ಬಸವಕಲ್ಯಾಣ: ‘ನಗರದ ತೇರು ಮೈದಾನದಲ್ಲಿ ಫೆಬ್ರುವರಿ 7 ಮತ್ತು 8 ರಂದು ಕಾಯಕ ಉತ್ಸವ ನಡೆಯಲಿದ್ದು ಸ್ಥಳೀಯ ಉತ್ಪನ್ನಗಳ ಪ್ರದರ್ಶನ ಮತ್ತು ಕಾಯಕದ ಮಹತ್ವ ನೀಡುವ ಚಿಂತನಗೋಷ್ಠಿ ಆಯೋಜಿಸಲಾಗುತ್ತದೆ’ ಎಂದು ಹಾರಕೂಡ ಚನ್ನವೀರ ಶಿವಾಚಾರ್ಯರು ತಿಳಿಸಿದ್ದಾರೆ.

ತಾಲ್ಲೂಕಿನ ಹಾರಕೂಡದಲ್ಲಿ ಶನಿವಾರ ಕಾರ್ಯಕ್ರಮದ ಆಮಂತ್ರಣ ಪತ್ರಗಳನ್ನು ಬಿಡುಗಡೆಗೊಳಿಸಿ ಅವರು ಮಾಹಿತಿ ನೀಡಿದ್ದಾರೆ.

‘ಫೆಬ್ರುವರಿ 7 ರಂದು ಸ್ಥಳೀಯ ಉತ್ಪನ್ನಗಳ ಮಳಿಗೆಗಳ ಉದ್ಘಾಟನೆ ನಡೆಯಲಿದ್ದು ಭಾಲ್ಕಿ ಬಸವಲಿಂಗ ಪಟ್ಟದ್ದೇವರು ಸಾನ್ನಿಧ್ಯ ವಹಿಸುವರು. ಅಕ್ಕ ಗಂಗಾಂಬಿಕಾ ಅಧ್ಯಕ್ಷತೆ ವಹಿಸುವರು. ಆಯೋಜಕ ಬಸವರಾಜ ಪಾಟೀಲ ಸೇಡಂ ಆಶಯನುಡಿ ನುಡಿಯುವರು. ಶಾಸಕ ಶರಣು ಸಲಗರ ಉದ್ಘಾಟಿಸುವರು. ಬೀದರ್ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಎಸ್.ಬಿರಾದಾರ, ಉಪ ವಿಭಾಗಾಧಿಕಾರಿ ಪ್ರಕಾಶ ಕುದರಿ ಅತಿಥಿಗಳಾಗಿ ಪಾಲ್ಗೊಳ್ಳುವರು. ಮುಖ್ಯಶಿಕ್ಷಕ ರಮೇಶ ರಾಜೋಳೆ ವಿಶೇಷ ಉಪನ್ಯಾಸ ನೀಡುವರು.

ADVERTISEMENT

ಅಂದು ಸಂಜೆ 5.30 ಗಂಟೆಗೆ ಕಾಯಕಚಿಂತನಗೋಷ್ಠಿ ನಡೆಯುವುದು. ತ್ರಿಪುರಾಂತ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು, ಮಂಠಾಳ ಅಭಿನವ ಚನ್ನಬಸವ ಸ್ವಾಮೀಜಿ, ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತ ಮಹೇಶ ಪಾಟೀಲ, ತಹಶೀಲ್ದಾರ್ ದತ್ತಾತ್ರೇಯ ಗಾದಾ ಉಪಸ್ಥಿತರಿರುವರು. ಶಿಕ್ಷಕ ಅಂಬಾರಾಯ ಉಗಾಜಿ ವಿಶೇಷ ಉಪನ್ಯಾಸ ನೀಡುವರು. ಸಂಗೀತಗಾರ ಶಿವಕುಮಾರ ಪಂಚಾಳ ಸಂಗೀತ ಪ್ರಸ್ತುತಪಡಿಸುವರು.

ಫೆಬ್ರುವರಿ 8 ರಂದು ಚಂದ್ರಶೇಖರ ಸೋಮಶೆಟ್ಟಿ ಅವರಿಗೆ ‘ಶ್ರೀ ಚನ್ನಬಸವ ಕಾಯಕರತ್ನ ಪ್ರಶಸ್ತಿ'ಯನ್ನು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಪ್ರದಾನ ಮಾಡುವರು. ಚಿತ್ಕಳಾ ಮಠಪತಿ ವಿಶೇಷ ಉಪನ್ಯಾಸ ನೀಡುವರು. ಯೋಗ ನೃತ್ಯ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದ್ದಾರೆ. ಪ್ರಮುಖರಾದ ಸೂರ್ಯಕಾಂತ ಮಠ, ಸಿದ್ರಾಮಪ್ಪ ಗುದಗೆ, ಪೃಥ್ವಿರಾಜ ದೇಗಾಂವ, ರಾಮಲಿಂಗರೆಡ್ಡಿ ಗದ್ಲೇಗಾಂವ, ಬಸವರಾಜ ಪಾಟೀಲ ಉಪಸ್ಥಿತರಿದ್ದರು.

ಬಸವಕಲ್ಯಾಣ ತಾಲ್ಲೂಕಿನ ಹಾರಕೂಡದಲ್ಲಿ ಶನಿವಾರ ಚನ್ನವೀರ ಶಿವಾಚಾರ್ಯರು ಕಾಯಕ ಉತ್ಸವದ ಆಮಂತ್ರಣ ಪತ್ರಗಳನ್ನು ಬಿಡುಗಡೆಗೊಳಿಸಿದರು

ಚಂದ್ರಶೇಖರ ಸೋಮಶೆಟ್ಟಿಗೆ ಪ್ರಶಸ್ತಿ

ಬೀದರ್‌ನ ಚಿತ್ರಕಲಾವಿದ ಚಂದ್ರಶೇಖರ ಸೋಮಶೆಟ್ಟಿ ಅವರಿಗೆ ಫೆಬ್ರುವರಿ 8 ರಂದು ಸಂಜೆ 8.30 ಗಂಟೆಗೆ ಶ್ರೀ ಚನ್ನಬಸವ ಕಾಯಕರತ್ನ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ₹ 25000 ನಗದು ಮತ್ತು ಫಲಕ ಒಳಗೊಂಡಿದೆ. ಇದಲ್ಲದೆ ಸ್ಥಳೀಯ ಉತ್ಪನ್ನಗಳ ಪ್ರದರ್ಶನದಲ್ಲಿ 50 ಮಳಿಗೆಗಳು ಇರಲಿದ್ದು ಉತ್ತಮವಾದುದನ್ನು ಆಯ್ಕೆ ಮಾಡಿ 5 ಜನರಿಗೆ ವಿಶೇಷ ಬಹುಮಾನ ನೀಡಲಾಗುತ್ತದೆ. ವಿವಿಧ ಸಮಾಜದ 36 ಪ್ರಮುಖರ ವಿಶೇಷ ಸನ್ಮಾನವೂ ನಡೆಯಲಿದೆ. ಎರಡು ದಿನ ದಾಸೋಹವಿದ್ದು ಕಲಬುರಗಿಯ ರಾಜಕುಮಾರ ಪಾಟೀಲ ಅವರು ಇದಕ್ಕಾಗಿ ₹ 3 ಲಕ್ಷ ದೇಣಿಗೆ ನೀಡಿದ್ದಾರೆ ಎಂದು ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.