ADVERTISEMENT

ಉಡಬಾಳ: ನ.26ರಂದು ಲಕ್ಷ ದೀಪೋತ್ಸವ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2023, 15:55 IST
Last Updated 24 ನವೆಂಬರ್ 2023, 15:55 IST
ಚಿಟಗುಪ್ಪ ತಾಲ್ಲೂಕಿನ ಉಡಬಾಳ ಗ್ರಾಮದ ಬೆಟ್ಟದ ಮೇಲಿನ ಯಲ್ಲಮ್ಮ ದೇವಿ ದೇಗುಲ
ಚಿಟಗುಪ್ಪ ತಾಲ್ಲೂಕಿನ ಉಡಬಾಳ ಗ್ರಾಮದ ಬೆಟ್ಟದ ಮೇಲಿನ ಯಲ್ಲಮ್ಮ ದೇವಿ ದೇಗುಲ   

ಚಿಟಗುಪ್ಪ: ತಾಲ್ಲೂಕಿನ ಉಡಬಾಳ ಗ್ರಾಮದ ಬೆಟ್ಟದ ಮೇಲಿರುವ ಐತಿಹಾಸಿಕ ಯಲ್ಲಮ್ಮ ದೇವಿ ದೇಗುಲದಲ್ಲಿ ದೇಗುಲದ ಭವ್ಯ ಗೋಪುರ ಉದ್ಘಾಟನೆ ನಿಮಿತ್ತ ನ.26ರಂದು ಲಕ್ಷ ದೀಪೋತ್ಸವ ಕಾರ್ಯಕ್ರಮ ನಡೆಯಲಿದೆ.

ಮೂರು ದಿನಗಳ ವರೆಗೆ ದೇಗುಲದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ನ.25ರಂದು ಗುರುಲಿಂಗ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ದೇಗುಲದಲ್ಲಿ ಚಂಡಿಕಾ ಹೋಮ, ಮಧ್ಯಾಹ್ನ ಗೋಪುರಕ್ಕೆ ಕಳಸಾರೋಹಣ ನೆರವೇರಲಿದೆ. ಸಂಜೆ ವಿವಿಧ ಸಂಗೀತ ಕಲಾವಿದರಿಂದ ಪುರಾಣ ಪ್ರವಚನ, ಸಂಗೀತ ಭಜನಾ ಕಾರ್ಯಕ್ರಮಗಳು ನಡೆಯಲಿವೆ.

ನ.27 ಸಂಜೆ 6ಗಂಟೆಗೆ ಹಾರಕೂಡದ ಚನ್ನವೀರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಲಕ್ಷ ದೀಪೋತ್ಸವ ಹಾಗೂ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ರೇಣುಕಾ ಯಲ್ಲಮ್ಮ ದೇಗುಲ ಸಮಿತಿ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.