ADVERTISEMENT

ಮಹಿಳಾ ಕಾಲೇಜಿನಲ್ಲಿ ಕಾನೂನು ಅರಿವು ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 17 ಜನವರಿ 2022, 14:54 IST
Last Updated 17 ಜನವರಿ 2022, 14:54 IST
ಬೀದರ್‌ನ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಆಯೋಜಿಸಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಬಸವರಾಜ ಎಸ್. ಚಾಗರೆಡ್ಡಿ ಉದ್ಘಾಟಿಸಿದರು. ಮಯೂರಕುಮಾರ ಗೋರಮೆ, ಸಿದ್ರಾಮ ಟಿ.ಪಿ., ಅಶೋಕ ಮಾನೂರೆ,  ಜೈಕುಮಾರ ಸಿಂಧೆ ಇದ್ದರು

ಬೀದರ್: ಇಲ್ಲಿಯ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ರಾಷ್ಟ್ರೀಯ ಯುವ ಸಪ್ತಾಹ ಪ್ರಯುಕ್ತ ಕಾನೂನು ಅರಿವು-ನೆರವು ಕಾರ್ಯಕ್ರಮ ನಡೆಯಿತು.

ಪ್ರತಿಯೊಬ್ಬರೂ ಕಾನೂನು ಅರಿಯಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಬಸವರಾಜ ಎಸ್. ಚಾಗರೆಡ್ಡಿ ಹೇಳಿದರು.

ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿದ್ರಾಮ ಟಿ.ಪಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಅಶೋಕ ಮಾನೂರೆ, ನೆಹರೂ ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಮಯೂರಕುಮಾರ ಗೋರಮೆ, ಎನ್‍ಎಸ್‍ಎಸ್ ನೋಡಲ್ ಅಧಿಕಾರಿ ಡಾ. ಜೈಕುಮಾರ ಸಿಂಧೆ ಮಾತನಾಡಿದರು.

ADVERTISEMENT

ಪ್ರಭಾರ ಪ್ರಾಚಾರ್ಯೆ ಡಾ. ವಿದ್ಯಾ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಎಲಿಷಾ ಡಿ, ಪಾರ್ವತಿ ಮೇತ್ರೆ, ಸಚ್ಚಿದಾನಂದ ರುಮ್ಮಾ, ಡಾ. ಭೀಮಷಾ ಬರಗಾಲಿ ಉಪಸ್ಥಿತರಿದ್ದರು.

ಭಾಗ್ಯವತಿ ನಿರೂಪಿಸಿದರು. ಮನೋಹರ ಮೇತ್ರೆ ಸ್ವಾಗತಿಸಿದರು. ಶ್ರೀನಿವಾಸ ರೆಡ್ಡಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.