ADVERTISEMENT

‘ಕಾನೂನಿನ ಅರಿವಿನ ಜತೆಗೆ ಪಾಲನೆ ಅಗತ್ಯ’

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2021, 3:55 IST
Last Updated 25 ಅಕ್ಟೋಬರ್ 2021, 3:55 IST
ಬಸವಕಲ್ಯಾಣದಲ್ಲಿ ಭಾನುವಾರ ನಡೆದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ಕಡ್ಲೂರು ಸತ್ಯನಾರಾಯಣ ಆಚಾರ್ಯ ದೀಪ ಬೆಳಗಿಸಿದರು. ನ್ಯಾಯಾಧೀಶರಾದ ಮಂಜುನಾಥ, ಕೆ.ಬಿ.ಪಾಟೀಲ, ಎಂ.ಎ.ಎಚ್.ಮೊಗಲಾನಿ, ತಹಶೀಲ್ದಾರ್ ಸಾವಿತ್ರಿ ಸಲಗರ ಪಾಲ್ಗೊಂಡಿದ್ದರು
ಬಸವಕಲ್ಯಾಣದಲ್ಲಿ ಭಾನುವಾರ ನಡೆದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ಕಡ್ಲೂರು ಸತ್ಯನಾರಾಯಣ ಆಚಾರ್ಯ ದೀಪ ಬೆಳಗಿಸಿದರು. ನ್ಯಾಯಾಧೀಶರಾದ ಮಂಜುನಾಥ, ಕೆ.ಬಿ.ಪಾಟೀಲ, ಎಂ.ಎ.ಎಚ್.ಮೊಗಲಾನಿ, ತಹಶೀಲ್ದಾರ್ ಸಾವಿತ್ರಿ ಸಲಗರ ಪಾಲ್ಗೊಂಡಿದ್ದರು   

ಬಸವಕಲ್ಯಾಣ: ‘ಕಾನೂನಿನ ಅರಿವು ಎಲ್ಲರಿಗೂ ಇರುವ ಜತೆಗೆ ಕಾನೂನಿನ ಪಾಲನೆಯೂ ಅಗತ್ಯವಾಗಿದೆ' ಎಂದು ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ಕಡ್ಲೂರು ಸತ್ಯನಾರಾಯಣ ಆಚಾರ್ಯ ಹೇಳಿದ್ದಾರೆ.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ತಾಲ್ಲೂಕು ವಕೀಲರ ಸಂಘದಿಂದ ಭಾನುವಾರ ಇಲ್ಲಿ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಬಡವರಿಗೆ ಹಾಗೂ ನಿರ್ಗತಿಕರಿಗೆ ಉಚಿತವಾಗಿ ಕಾನೂನಿನ ನೆರವು ನೀಡುವ ಅವಕಾಶವೂ ಇದೆ. ಆದ್ದರಿಂದ ಅದರ ಪ್ರಯೋಜನ ಪಡೆದುಕೊಳ್ಳಬೇಕು’ ಎಂದರು.

ADVERTISEMENT

ಜಿಲ್ಲಾ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಕೆ.ಬಿ.ಪಾಟೀಲ, ಸಿವಿಲ್ ನ್ಯಾಯಾಧೀಶ ಎಂ.ಎ.ಎಚ್.ಮೊಗಲಾನಿ, ಸಿದ್ರಾಮ ಟಿ.ಪಿ. ಗಂಗವ್ವ ಆಯಟ್ಟಿ, ಭರತ ಯೋಗೇಶ ಕರಗುದರಿ, ವಕೀಲರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಸಂಜೀವರೆಡ್ಡಿ ಯರಬಾಗ, ತಹಶೀಲ್ದಾರ್ ಸಾವಿತ್ರಿ ಸಲಗರ, ವಕೀಲರಾದ ಎಂ.ಜಿ.ಮಹಾಜನ, ಎಸ್.ಬಿ.ಮಾಶಾಳಕರ ಮಾತನಾಡಿದರು.

ಕಾರ್ಮಿಕ ಇಲಾಖೆಯಿಂದ ಕಾರ್ಮಿಕರಿಗೆ ಗುರುತಿನ ಚೀಟಿ ಹಾಗೂ ಸಾರಿಗೆ ಇಲಾಖೆಯಿಂದ ಚಾಲಕರ ಪರವಾನಿಗೆ ಪತ್ರ ವಿತರಿಸಲಾಯಿತು. ಎಸ್‌ಐ ಅಮರ ಕುಲಕರ್ಣಿ, ಸುರೇಶ ಕಾಟೆ, ಜಿ.ಎಂ.ಸಾಗರ ಪಾಲ್ಗೊಂಡಿದ್ದರು. ರೂಪಾ ಪಂಚಾಳ ನಿರೂಪಿಸಿದರು. ಪಂಡಿತ ನಾಗರಾಳೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.