ADVERTISEMENT

ಸಂತರ ಉ‍ಪದೇಶ ಆಲಿಸಿ ಬದುಕು ರೂಪಿಸಿಕೊಳ್ಳಿ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2021, 15:37 IST
Last Updated 10 ಆಗಸ್ಟ್ 2021, 15:37 IST
ಬೀದರ್‌ನ ಡಾ.ಚನ್ನಬಸವ ಪಟ್ಟದ್ದೇವರ ಪ್ರಸಾದ ನಿಲಯದಲ್ಲಿ ಶ್ರಾವಣ ಪ್ರಯುಕ್ತ ಆರಂಭವಾದ ಬಸವ ದರ್ಶನ ಪ್ರವಚನ ಕಾರ್ಯಕ್ರಮವನ್ನು ನಗರಸಭೆ ಆಯುಕ್ತ ರವೀಂದ್ರನಾಥ ಅಂಗಡಿ ಉದ್ಘಾಟಿಸಿದರು. ಮಹಾಲಿಂಗ ಸ್ವಾಮೀಜಿ, ಪ್ರೊ.ಎಸ್.ಬಿ. ಬಿರಾದಾರ, ಜೈರಾಜ್ ಖಂಡ್ರೆ ಇದ್ದಾರೆ
ಬೀದರ್‌ನ ಡಾ.ಚನ್ನಬಸವ ಪಟ್ಟದ್ದೇವರ ಪ್ರಸಾದ ನಿಲಯದಲ್ಲಿ ಶ್ರಾವಣ ಪ್ರಯುಕ್ತ ಆರಂಭವಾದ ಬಸವ ದರ್ಶನ ಪ್ರವಚನ ಕಾರ್ಯಕ್ರಮವನ್ನು ನಗರಸಭೆ ಆಯುಕ್ತ ರವೀಂದ್ರನಾಥ ಅಂಗಡಿ ಉದ್ಘಾಟಿಸಿದರು. ಮಹಾಲಿಂಗ ಸ್ವಾಮೀಜಿ, ಪ್ರೊ.ಎಸ್.ಬಿ. ಬಿರಾದಾರ, ಜೈರಾಜ್ ಖಂಡ್ರೆ ಇದ್ದಾರೆ   

ಬೀದರ್‌: ‘ಶ್ರಾವಣ ಮಾಸದಲ್ಲಿ ಶರಣ ಸಂತರ ತತ್ವ, ಉ‍ಪದೇಶ ಆಲಿಸಿ ಬದುಕು ರೂಪಿಸಿಕೊಳ್ಳಬೇಕು’ ಎಂದು ನಗರಸಭೆ ಆಯುಕ್ತ ರವೀಂದ್ರನಾಥ ಅಂಗಡಿ ಹೇಳಿದರು.

ಇಲ್ಲಿಯ ಡಾ.ಚನ್ನಬಸವ ಪಟ್ಟದ್ದೇವರ ಪ್ರಸಾದ ನಿಲಯದಲ್ಲಿ ಶ್ರಾವಣ ಪ್ರಯುಕ್ತ ಆರಂಭವಾದ ಬಸವ ದರ್ಶನ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಹಾಲಿಂಗ ಸ್ವಾಮೀಜಿ ಆರ್ಶೀವಚನ ನೀಡಿ, ‘ಶರಣರ ವಚನಗಳು ಸುಂದರ ಬದುಕು ರೂಪಿಸಿಕೊಳ್ಳಲು ಪ್ರೇರಣೆ ನೀಡುತ್ತವೆ’ ಎಂದು ಹೇಳಿದರು.
‘ಶರಣರು ಶ್ರಾವಣದಲ್ಲಿ ಶರಣರ, ಸಂತರ ಅನುಭಾವಗಳನ್ನು ಕೇಳಲು ಸಂಸಾರ ಬಂಧನದಿಂದ ಹೊರಬಂದು ಸತ್ಸಂಗದಲ್ಲಿ ಪಾಲ್ಗೊಳ್ಳಬೇಕು’ ಎಂದು ಮನವಿ ಮಾಡಿದರು.

ADVERTISEMENT

ಉದ್ಯಮಿ ಜೈರಾಜ್ ಖಂಡ್ರೆ ಹಾಗೂ ಪ್ರಸಾದ ನಿಲಯದ ಕಾರ್ಯದರ್ಶಿ ಪ್ರೊ.ಎಸ್.ಬಿ.ಬಿರಾದಾರ ಮಾತನಾಡಿದರು.

ಪ್ರವಚನ ಸಮಿತಿಯ ಅಧ್ಯಕ್ಷ ನೀಲಕಂಠ ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. ಪಿ.ಸಂಗಪ್ಪ, ವೈಜಿನಾಥ ಬಿರಾದಾರ, ಶ್ರೀಕಾಂತ ಬಿರಾದಾರ, ಚಂದ್ರಶೇಖರ ಹೆಬ್ಬಾಳೆ, ರಾಜಶೇಖರ ಮಠ ಇದ್ದರು.

ಇಂದುಮತಿ ನೀಲಕಂಠ ಬಿರಾದಾರ ಅವರು ಬಸವಣ್ಣ ಹಾಗೂ ಚನ್ನಬಸವ ಪಟ್ಟದ್ದೇವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಸಂಜೀವಕುಮಾರ ಸ್ವಾಮಿ, ವಚನಶ್ರೀ ಹಾಗೂ ಚನ್ನಬಸಪ್ಪ ನೌಬಾದೆ ವಚನ ಸಂಗೀತ ನಡೆಸಿಕೊಟ್ಟರು. ‌

ಯೋಗೇಂದ್ರ ಯದಲಾಪೂರೆ ಸ್ವಾಗತಿಸಿದರು. ಉಮಾಕಾಂತ ಮೀಸೆ ನಿರೂಪಿಸಿದರು. ಕಸ್ತೂರಿಬಾಯಿ ಬಿರಾದಾರ ವಂದಿಸಿದರು. .

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.