ADVERTISEMENT

ಲೋಕ ಅದಾಲತ್: ಎಂಟು ವರ್ಷದ ಬಳಿಕ ಒಂದಾದ ದಂಪತಿ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2023, 13:39 IST
Last Updated 11 ಫೆಬ್ರುವರಿ 2023, 13:39 IST
ಔರಾದ್‌ನಲ್ಲಿ ಶನಿವಾರ ನಡೆದ ಲೋಕ ಅದಾಲತ್‌ನಲ್ಲಿ ದಂಪತಿ ಪರಸ್ಪರ ಹಾರ ಬದಲಾಯಿಸಿಕೊಂಡು ಒಂದಾದರು
ಔರಾದ್‌ನಲ್ಲಿ ಶನಿವಾರ ನಡೆದ ಲೋಕ ಅದಾಲತ್‌ನಲ್ಲಿ ದಂಪತಿ ಪರಸ್ಪರ ಹಾರ ಬದಲಾಯಿಸಿಕೊಂಡು ಒಂದಾದರು   

ಔರಾದ್: ಇಲ್ಲಿಯ ನ್ಯಾಯಾಲಯದಲ್ಲಿ ಶನಿವಾರ ನಡೆದ ಲೋಕ ಅದಾಲತ್‌ನಲ್ಲಿ ಎಂಟು ವರ್ಷಗಳಿಂದ ಪ್ರತ್ಯೇಕವಾಗಿ ವಾಸವಿದ್ದ ಕೊಟಗ್ಯಾಳ ಗ್ರಾಮದ ದಂಪತಿ ಒಂದಾದರು.

ಕಮಲನಗರ ತಾಲ್ಲೂಕಿನ ಕೊಟಗ್ಯಾಳ ಗ್ರಾಮದ ರಾಜೆಂದ್ರಬಾಬು ಸೋಪಾನ (40), ಪೂಜಾ ರಾಜೇಂದ್ರಬಾಬು (35) ಒಂದಾದ ದಂಪತಿ. ಇವರಿಗೆ 12 ಹಾಗೂ 10 ವರ್ಷದ ಇಬ್ಬರು ಗಂಡು ಮಕ್ಕಳಿದ್ದಾರೆ.

ಕಾರಣಾಂತರಗಳಿಂದ ಈ ದಂಪತಿ ಎಂಟು ವರ್ಷಗಳಿಂದ ಪ್ರತ್ಯೇಕವಾಗಿದ್ದರು.

ADVERTISEMENT

‘ಹೆಂಡತಿ ಪೂಜಾ ಏಳು ವರ್ಷಗಳಿಂದ ನನ್ನನ್ನು ಬಿಟ್ಟು ತವರೂರು ಹಂದಿಕೇರಾದಲ್ಲಿ ವಾಸವಾಗಿದ್ದಾರೆ. ಹೀಗಾಗಿ ನನಗೆ ಅವಳಿಂದ ವಿಚ್ಛೇದನ ಕೊಡಿಸಿ’ ಎಂದು ರಾಜೇಂದ್ರ ಕಳೆದ ವರ್ಷ ಇಲ್ಲಿನ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಶನಿವಾರ ಲೋಕ ಅದಾಲತ್‌ನಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ರವಿಬಾಬು ಚವಾಣ್ ಸಮ್ಮುಖದಲ್ಲಿ ರಾಜಿ ಸಂಧಾನದ ಮೂಲಕ ಪ್ರಕರಣ ಇತ್ಯರ್ಥಪಡಿಸಲಾಯಿತು. ದಂಪತಿ ಒಂದಾಗಲು ಒಪ್ಪಿಕೊಂಡು ಪರಸ್ಪರ ಹಾರ ಬದಲಾಯಿಸಿಕೊಂಡರು.

ಈ ರಾಜಿ ಸಂಧಾನದಲ್ಲಿ ವಕೀಲ ಅನಂತ ಹಾಗೂ ಎಂ.ಎಸ್. ಬುಟ್ಟೆ ವಾದಿಸಿದ್ದರು. ವಕೀಲ ವಿ.ಎಸ್.ಜಾಧವ, ಸುರೇಶ, ಎಸ್.ಎಂ.ಬೇಲೂರೆ, ಆರ್.ಪಿ.ಜಾಧವ ಹಾಗೂ ರಾಜಕುಮಾರ ಮಿತ್ರಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.