ADVERTISEMENT

ಲೋಕಸಭಾ ಚುನಾವಣೆ: ಕಾಂಗ್ರೆಸ್‌ ಪಕ್ಷದಿಂದ ಮರಾಠ ಸಮಾಜಕ್ಕೆ ಟಿಕೆಟ್‌ ಆಗ್ರಹ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2023, 16:13 IST
Last Updated 15 ಡಿಸೆಂಬರ್ 2023, 16:13 IST
ಬಾಲಾಜಿ ಬಿರಾದಾರ
ಬಾಲಾಜಿ ಬಿರಾದಾರ   

ಬೀದರ್‌: ‘ಕಾಂಗ್ರೆಸ್‌ ಪಕ್ಷವು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬೀದರ್‌ ಕ್ಷೇತ್ರದಿಂದ ಮರಾಠ ಸಮಾಜಕ್ಕೆ ಟಿಕೆಟ್‌ ನೀಡಿ, ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು’ ಎಂದು ಸಕಾಲ ಮರಾಠ ಸಮಾಜದ ಮುಖಂಡ ಬಾಲಾಜಿ ಬಿರಾದಾರ ಆಗ್ರಹಿಸಿದರು.

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಕೀಲಿ ವೃತ್ತಿ ಮಾಡುತ್ತಿರುವ ಕಾಂಗ್ರೆಸ್‌ ಪಕ್ಷದ ಮುಖಂಡ ನಾರಾಯಣ ಗಣೇಶ ಅವರು ಕಳೆದ 25 ವರ್ಷಗಳಿಂದ ಬೀದರ್‌ ಜಿಲ್ಲೆಯಲ್ಲಿ ಮರಾಠ ಸಮಾಜದ ಸಂಘಟನೆಗೆ ಶ್ರಮಿಸುತ್ತಿದ್ದಾರೆ. 2004ರಲ್ಲಿ ನಡೆದ ಉಪಚುನಾವಣೆ ಮತ್ತು 2009ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಕ್ರಮವಾಗಿ ನರಸಿಂಗರಾವ ಸೂರ್ಯವಂಶಿ, ಮಾಜಿ ಮುಖ್ಯಮಂತ್ರಿ ಎನ್‌. ಧರ್ಮಸಿಂಗ್‌ ಅವರ ಗೆಲುವಿಗೆ ಹಗಲಿರುಳು ಶ್ರಮಿಸಿದ್ದಾರೆ ಎಂದು ತಿಳಿಸಿದರು.

ಇದುವರೆಗೆ ಬೀದರ್‌ ಲೋಕಸಭೆ ಕ್ಷೇತ್ರವು 18 ಚುನಾವಣೆಗಳಿಗೆ ಸಾಕ್ಷಿಯಾಗಿದೆ. ಕಾಂಗ್ರೆಸ್‌ ಪಕ್ಷ ಒಂದು ಸಲವೂ ಮರಾಠ ಸಮಾಜದವರಿಗೆ ಟಿಕೆಟ್‌ ನೀಡಿಲ್ಲ. ಈ ಸಲ ಸಮಾಜದ ಮುಖಂಡ ನಾರಾಯಣ ಗಣೇಶ ಅವರಿಗೆ ಆದ್ಯತೆ ನೀಡಬೇಕೆಂದು ಒತ್ತಾಯಿಸಿದರು.

ADVERTISEMENT

ಪ್ರಮುಖರಾದ ಆಶಾ ಪಾಟೀಲ ಭಾಲ್ಕಿ, ವಿರೇಖಾ ಪಾಟೀಲ, ಮಾರುತಿ ವಾಡಿಕರ್, ವೈಜಿನಾಥ ಹೊನ್ನಿಕೇರಿ, ವಸಂತ ಬಿರಾದಾರ, ಮಹಾದೇವ ಲಾಡೆ, ವಿವೇಕಾನಂದ ಕನಸಾಳೆ, ಪ್ರತಿಕ್ಷಾ ಪಾಟೀಲ ಔರಾದ್‌, ಖಂಡೇರಾವ ರಂದವೇ ಔರಾದ್‌, ಶರದ ಪವಾರ ಔರಾದ್‌, ಸತೀಶ ಸೂರ್ಯವಂಶಿ ಭಾಲ್ಕಿ, ಬಾಬುರಾವ ಜಗತಾಪ ಭಾಲ್ಕಿ, ಶಾಮ ಪವಾರ ಚಿಂಚೋಳಿ, ದೀಪಕ ಘಾವಳಕರ ಆಳಂದ, ನರೇಶ ಬೋಸ್ಲೆ ಆಳಂದ, ಪ್ರಫುಲ್ ಬಾಲಸೂರೆ ಆಳಂದ,  ಸಂಜುಕುಮಾರ ಪಾಟೀಲ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.