ಲೋಕಾಯುಕ್ತ ಪೊಲೀಸರು ಜಪ್ತಿ ಮಾಡಿದ ಚಿನ್ನಾಭರಣ ನಗದು
ಬೀದರ್: ಕಲಬುರಗಿ ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಎಂಜಿನಿಯರಿಂಗ್ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಸುನೀಲ್ ಕುಮಾರ್ ಚಂದ್ರಪ್ರಕಾಶ್ ಪ್ರಭಾ ಅವರಿಗೆ ಸೇರಿದ ನಾಲ್ಕು ಸ್ಥಳಗಳ ಮೇಲೆ ಲೋಕಾಯುಕ್ತ ಪೊಲೀಸರು ಬುಧವಾರ ದಾಳಿ ನಡೆಸಿದ್ದು, ಅಪಾರ ಪ್ರಮಾಣದ ಚಿನ್ನಾಭರಣ, ಸ್ವತ್ತು ಪತ್ತೆ ಹಚ್ಚಿದ್ದಾರೆ.
‘ಸುನೀಲ್ ಕುಮಾರ್ ಅವರು ಮೂರು ನಿವೇಶನ, ಒಂದು ಮನೆ ಹೊಂದಿದ್ದಾರೆ. 1 ಕೆ.ಜಿ 266 ಗ್ರಾಂ ಚಿನ್ನಾಭರಣ, ಎರಡೂವರೆ ಕೆ.ಜಿ ಬೆಳ್ಳಿ, ₹15 ಲಕ್ಷ ನಗದು ಅವರ ಮನೆಯ ಲಾಕರ್‌ನಲ್ಲಿ ಸಿಕ್ಕಿದೆ. ಎಫ್‌ಡಿ ಸೇರಿದಂತೆ ವಿವಿಧ ಬ್ಯಾಂಕ್ ಖಾತೆಗಳಲ್ಲಿ ₹89 ಲಕ್ಷ ಇರಿಸಿರುವುದು ಗೊತ್ತಾಗಿದೆ. ಹೊಂಡಾ ಜಾಜ್ ಕಾರು, ಸ್ಕೂಟರ್ ಹೊಂದಿದ್ದಾರೆ’ ಎಂದು ಲೋಕಾಯುಕ್ತ ಎಸ್ಪಿ ಸಿದ್ದರಾಜು ತಿಳಿಸಿದ್ದಾರೆ.
ಬೀದರ್ ಜಿಲ್ಲೆಯ ಹುಮನಾಬಾದ್ ತಾಲ್ಲೂಕಿನ ಹಳ್ಳಿಖೇಡ್ (ಬಿ) ಗ್ರಾಮದ ನಿವಾಸಿಯಾಗಿರುವ ಸುನೀಲ್ ಅವರ ಹಳ್ಳಿಯಲ್ಲಿರುವ ಮನೆ, ಬೀದರ್‌ನ ಜೈಲ್ ರಸ್ತೆ ಸರ್ದಾರ್ ವಲ್ಲಭಭಾಯ್ ಪಟೇಲ್ ನಗರದ ನಿವಾಸ, ಕಲಬುರಗಿಯಲ್ಲಿ ಅವರು ಕೆಲಸ ನಿರ್ವಹಿಸುತ್ತಿರುವ ಕಚೇರಿ ಮತ್ತು ಬಾಡಿಗೆ ಮನೆ ಮೇಲೆ ಏಕಕಾಲಕ್ಕೆ ದಾಳಿ ನಡೆಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.