ADVERTISEMENT

ಸ್ವತಂತ್ರರಾಗಿ ಬದುಕಲು ಸ್ವತಂತ್ರ ಅಭ್ಯರ್ಥಿ ಬೆಂಬಲಿಸಿ: ಕೆ. ಬುಕ್ಕಾ ಮನವಿ

​ಪ್ರಜಾವಾಣಿ ವಾರ್ತೆ
Published 5 ಮೇ 2024, 15:32 IST
Last Updated 5 ಮೇ 2024, 15:32 IST
ಜೈರಾಜ ಬುಕ್ಕಾ
ಜೈರಾಜ ಬುಕ್ಕಾ   

ಬೀದರ್: ಜಿಲ್ಲೆಯ ಜ‌ನ ಸ್ವತಂತ್ರರಾಗಿ ಬದುಕಬೇಕಾದರೆ‌ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ನನಗೆ ಬೆಂಬಲಿಸಿ ಮತ ಹಾಕಬೇಕೆಂದು ಪಕ್ಷೇತರ ಅಭ್ಯರ್ಥಿ ಜೈರಾಜ ಕೆ. ಬುಕ್ಕಾ ಮನವಿ ಮಾಡಿದರು.

ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂವತ್ತು ವರ್ಷಗಳಿಂದ ವಕೀಲನಾಗಿ, ಜನರ ನಡುವೆ ಇದ್ದೇನೆ. ಅವರ ಸಮಸ್ಯೆಗಳ ಅರಿವಿದೆ. ಎರಡೂ ರಾಷ್ಟ್ರೀಯ ಪಕ್ಷಗಳ ವಿರುದ್ಧ ಸ್ಪರ್ಧಿಸುತ್ತಿದ್ದೇನೆ.ಪಕ್ಷಗಳನ್ನು ನೋಡದೆ ಸಮರ್ಥರನ್ನು ಆಯ್ಕೆ ಮಾಡಬೇಕು ಎಂದು ಹೇಳಿದರು.

ಯಾರು ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ ಅಂತಹವರನ್ನು ಬೆಂಬಲಿಸಬೇಕು. ಸುದೀರ್ಘ ಅವಧಿಯಿಂದ ಈ ಕೆಲಸ ಮಾಡುತ್ತಿರುವೆ.ಜಿಲ್ಲೆಯನ್ನು ಭ್ರಷ್ಟಾಚಾರದಿಂದ ಮುಕ್ತಗೊಳಿಸುವುದು, ಜಿಲ್ಲೆಯ ರೈತರ ಸಾಲ ಮನ್ನಾ, ಮುಚ್ಚಿರುವ ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ ಆರಂಭಿಸಲು ಶ್ರಮಿಸುವೆ. ಚುನಾವಣಾ ಪದ್ಧತಿಯಲ್ಲಿ‌ ಬದಲಾವಣೆಗೆ ಧ್ವನಿ ಎತ್ತುವೆ. ಕಬ್ಬು, ತೊಗರಿ, ಸೋಯಾಬೀನ್ ಗೆ ಬೆಂಬಲ ಬೆಲೆ ಕೊಡಿಸುವೆ. ಕಾರಂಜಾ ಸಂತ್ರಸ್ತರ ಮಕ್ಕಳಿಗೆ ನೌಕರಿ ಕೊಡಿಸಲು ಶ್ರಮಿಸುವೆ ಎಂದು ತಿಳಿಸಿದರು.

ADVERTISEMENT

ಮಹಮ್ಮದ್ ವಿಕಾರುದ್ದಿನ್, ಮಹಮ್ಮದ್ ಫಾರೂಕ್, ಪೀರ್ ಬಾಬಾ ಮೈನುದ್ದಿನ್, ಸಿದ್ದಗೊಂಡ,‌ ಶನೇಶ್ವರ, ವೆಂಕಟ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.