ಹುಲಸೂರ: ತನ್ನ ಮಗ ಹಲ್ಲೆ ನಡೆಸಿದ್ದಾನೆ ಎಂದು ಸಮೀಪದ ಭಾಲ್ಕಿ ತಾಲ್ಲೂಕಿನ ಕೆಸರ ಜವಳಗಾ ಗ್ರಾಮದ ವಿಶ್ವನಾಥ ಮೇತ್ರೆ ಅವರು ಮಗ ಹಾಗೂ ಕೀರ್ತನಕಾರ ಕೃಷ್ಣ ಮಹಾರಾಜ ರಾಮಯಣಿ (ಕೃಷ್ಣ ವಿಶ್ವನಾಥ ಮೇತ್ರೆ) ವಿರುದ್ಧ ಧನ್ನೂರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
‘ನನ್ನ ಎರಡನೇ ಮಗನಾದ ಕೃಷ್ಣ ಪ್ರಸಿದ್ಧ ಕೀರ್ತನಕಾರ ಆಗಿದ್ದು, ಕುಟುಂಬದಲ್ಲಿ ನಡೆದ ಸಣ್ಣ ಘಟನೆಗೆ ಆಕ್ರೋಶಗೊಂಡು ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾನೆ’ ಎಂದು ವಿಶ್ವನಾಥ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.