ADVERTISEMENT

ಜನವಾಡ| ಮರಗೆಮ್ಮ ದೇವಿ ಜಾತ್ರಾ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2023, 7:07 IST
Last Updated 10 ಆಗಸ್ಟ್ 2023, 7:07 IST
ಬೀದರ್ ತಾಲ್ಲೂಕಿನ ಕಾಶೆಂಪುರ(ಪಿ) ಗ್ರಾಮದಲ್ಲಿ ಜಾತ್ರಾ ಮಹೋತ್ಸವ ಪ್ರಯುಕ್ತ ಮರಗೆಮ್ಮ ದೇವಿ ಮೂರ್ತಿಯ ಮೆರವಣಿಗೆ ನಡೆಯಿತು
ಬೀದರ್ ತಾಲ್ಲೂಕಿನ ಕಾಶೆಂಪುರ(ಪಿ) ಗ್ರಾಮದಲ್ಲಿ ಜಾತ್ರಾ ಮಹೋತ್ಸವ ಪ್ರಯುಕ್ತ ಮರಗೆಮ್ಮ ದೇವಿ ಮೂರ್ತಿಯ ಮೆರವಣಿಗೆ ನಡೆಯಿತು   

ಜನವಾಡ(ಬೀದರ್ ತಾಲ್ಲೂಕು): ಬೀದರ್ ತಾಲ್ಲೂಕಿನ ಕಾಶೆಂಪುರ(ಪಿ) ಗ್ರಾಮದಲ್ಲಿ ಶ್ರದ್ಧೆ, ಭಕ್ತಿಯೊಂದಿಗೆ ಮಂಗಳವಾರ ಮರಗೆಮ್ಮ ದೇವಿ ಜಾತ್ರಾ ಮಹೋತ್ಸವ ಜರುಗಿತು.

ಗ್ರಾಮಸ್ಥರು ಮರಗೆಮ್ಮ ದೇವಿಯ ಮೂರ್ತಿ ತಯಾರಿಸಿ, ಮಂದಿರದಲ್ಲಿ ಪ್ರತಿಷ್ಠಾಪಿಸಿ, ಪೂಜೆ, ಪ್ರಾರ್ಥನೆ ಸಲ್ಲಿಸಿದರು. ಗ್ರಾಮಸ್ಥರು ಜಾತ್ರಾ ಮಹೋತ್ಸವ ದಿನದಂದೇ ಮರಗೆಮ್ಮ ದೇವಿ ಮೂರ್ತಿ ತಯಾರಿಸಿ, ಮಂದಿರದಲ್ಲಿ ಪ್ರತಿಷ್ಠಾಪಿಸುವುದು ವಿಶೇಷವಾಗಿದೆ.

ಸಂಪ್ರದಾಯದಂತೆ ಈ ಬಾರಿಯೂ ಗ್ರಾಮಸ್ಥರು ಮರದ ತುಂಡುಗಳನ್ನು ಬಡಿಗತನ ವೃತ್ತಿಯಲ್ಲಿ ತೊಡಗಿಸಿಕೊಂಡವರಿಗೆ ನೀಡಿದರು. ಅವರು ಅದರೊಳಗೆ ಮೂರ್ತಿ ಕೆತ್ತನೆ ಮಾಡಿದರು. ಬಳಿಕ ಸಂಜೆ ಮೂರ್ತಿಯನ್ನು ಬಾಜಾ ಬಜಂತ್ರಿಯೊಂದಿಗೆ ಮೆರವಣಿಗೆಯಲ್ಲಿ ಮರಿಗೆಮ್ಮ ಮಂದಿರಕ್ಕೆ ತಂದು, ಪ್ರತಿಷ್ಠಾಪಿಸಲಾಯಿತು.

ADVERTISEMENT

ಗ್ರಾಮದವರೇ ಆದ ಮಾಜಿ ಸಚಿವ ಬಂಡೆಪ್ಪ ಕಾಶೆಂಪುರ, ಮುಖಂಡರಾದ ವಿಜಯಕುಮಾರ ಕಾಶೆಂಪುರ, ಬಾಬು ಮಾರುತಿ ಕಾಶೆಂಪುರ, ಮಾರುತಿ ವಗ್ಗೆ, ಶರಣಪ್ಪ ಕಾಶೆಂಪುರ, ಬಜರಂಗ ತಮಗೊಂಡ, ಮಾರುತಿ ಬಸಗೊಂಡ, ಶರಣಪ್ಪ ಚಿಂಚೋಳಿ, ಲಕ್ಷ್ಮಣ ಹೊಸಳ್ಳಿ, ಸುನೀಲ್ ಗುಮಾಸ್ತಿ, ಸಂಜುಕುಮಾರ ಗುಮಾಸ್ತಿ, ಅಶೋಕ ಶರಗಾರ, ಆನಂದ ಕಾಶೆಂಪುರ, ವಿಶ್ವನಾಥ ಬಾಲೆಬಾಯಿ, ಅಶೋಕ ವಗ್ಗೆ, ಶಿವಕುಮಾರ, ಬಾಲೆಬಾಯಿ ಮೊದಲಾದವರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.