ADVERTISEMENT

ಮಾರ್ಕೆಟ್‌ ಪೊಲೀಸ್ ಠಾಣೆಗೆ 22ನೇ ಶ್ರೇಯಾಂಕ

​ಪ್ರಜಾವಾಣಿ ವಾರ್ತೆ
Published 19 ಜನವರಿ 2021, 14:20 IST
Last Updated 19 ಜನವರಿ 2021, 14:20 IST
ಬೀದರ್‌ನ ಮಾರ್ಕೆಟ್‌ ಪೊಲೀಸ್ ಠಾಣೆ
ಬೀದರ್‌ನ ಮಾರ್ಕೆಟ್‌ ಪೊಲೀಸ್ ಠಾಣೆ   

ಬೀದರ್: ನಗರದ ಮಾರ್ಕೆಟ್‌ ಪೊಲೀಸ್‌ ಠಾಣೆಯು ದೇಶದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುವ ಪೊಲೀಸ್‌ ಠಾಣೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಭಾರತದ ಶ್ರೇಯಾಂಕದಲ್ಲಿ ಮಾರ್ಕೆಟ್‌ ಪೊಲೀಸ್ ಠಾಣೆ 22 ನೇ ಸ್ಥಾನ ಪಡೆದಿದೆ. ಠಾಣೆಯಲ್ಲಿ ಸಿಬ್ಬಂದಿಯ ಲಭ್ಯತೆ, ಅಪರಾಧ ತಡೆಗಟ್ಟುವಿಕೆ, ಮಹಿಳೆಯರ ಮೇಲಿನ ಅಪರಾಧ ಮತ್ತು ಹಳೆಯ ಪ್ರಕರಣಗಳ ವಿಲೇವಾರಿ, ಮೂಲಸೌಕರ್ಯ ಮತ್ತು ನಾಗರಿಕರ ಪ್ರತಿಕ್ರಿಯೆ (ಶೇಕಡ 20) ಸೇರಿದಂತೆ 19 ನಿಯತಾಂಕಗಳಲ್ಲಿ ಕಾರ್ಯಕ್ಷಮತೆ ಮಾಪನ (ಶೇಕಡ 80) ಆಧರಿಸಿ ನವೆಂಬರ್‌ನಲ್ಲಿ ಸಮೀಕ್ಷೆ ನಡೆಸಲಾಗಿತ್ತು.

ಮಾರ್ಕೆಟ್ ಠಾಣೆಯಲ್ಲಿ 49 ಸಿಬ್ಬಂದಿ ಇದ್ದಾರೆ. ಲಾಕ್‌ಡೌನ್‌ ಅವಧಿಯಲ್ಲಿ ಇಲ್ಲಿನ ಸಿಬ್ಬಂದಿಯನ್ನು ಕಂಟೇನ್ಮಂಟ್ ಝೋನ್ ಹಾಗೂ ಜಿಲ್ಲೆಯ ಗಡಿಯಲ್ಲಿ ಸ್ಥಾಪಿಸಿದ್ದ ಚೆಕ್‌ಪೋಸ್ಟ್‌ಗಳಿಗೆ ನಿಯೋಜಿಸಲಾಗಿತ್ತು. ಕೆಲಸದ ಒತ್ತಡದ ಮಧ್ಯೆಯೂ ಸಿಬ್ಬಂದಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಕ್ಕೆ ಠಾಣೆ ಕೇಂದ್ರ ಗೃಹ ಸಚಿವಾಲಯ ನೀಡುವ ಶ್ರೇಯಾಂಕದ ಗೌರವಕ್ಕೆ ಪಾತ್ರವಾಗಿದೆ.

ADVERTISEMENT

‘ಬೀದರ್‌ನ ಡಿವೈಎಸ್‌ಪಿ, ಸಿಪಿಐ, ಪಿಎಸ್‌ಐ ಹಾಗೂ ಸಿಬ್ಬಂದಿ ಪರಿಶ್ರಮದ ಫಲವಾಗಿ ಮಾರ್ಕೆಟ್‌ ಠಾಣೆ ಉತ್ತಮ ಪೊಲೀಸ್‌ ಠಾಣೆಯಾಗಿ ಗುರುತಿಸಿಕೊಂಡಿದೆ. ಅಧಿಕೃತ ವರದಿ ಇನ್ನೂ ನಮ್ಮ ಕೈಸೇರಬೇಕಿದೆ. ಜಿಲ್ಲೆಯ ಇತರೆ ಠಾಣೆಗಳಲ್ಲೂ ಸುಧಾರಣೆ ತರಲು ಪ್ರಯತ್ನ ನಡೆಸಿದ್ದೇವೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಾಗೇಶ ಡಿ.ಎಲ್‌. ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.