ADVERTISEMENT

‘ಸಂಘ,ಸಂಸ್ಥೆಗಳ ಸೇವೆಯಿಂದ ಪ್ರಗತಿ’

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2022, 3:09 IST
Last Updated 4 ಏಪ್ರಿಲ್ 2022, 3:09 IST
ಚಿಟಗುಪ್ಪ ಪಟ್ಟಣದ ಗಣೇಶ ಮಂದಿರದ ಆವರಣದಲ್ಲಿ ಕಲ್ಯಾಣ ಮಂಟಪ ನಿರ್ಮಾಣ ಕಾಮಗಾರಿಗೆ ನ್ಯಾಯಾಧೀಶ ವಿಜಯಕುಮಾರ ಜಟ್ಲಾ ಭೂಮಿ ಪೂಜೆ ನೆರವೇರಿಸಿದರು
ಚಿಟಗುಪ್ಪ ಪಟ್ಟಣದ ಗಣೇಶ ಮಂದಿರದ ಆವರಣದಲ್ಲಿ ಕಲ್ಯಾಣ ಮಂಟಪ ನಿರ್ಮಾಣ ಕಾಮಗಾರಿಗೆ ನ್ಯಾಯಾಧೀಶ ವಿಜಯಕುಮಾರ ಜಟ್ಲಾ ಭೂಮಿ ಪೂಜೆ ನೆರವೇರಿಸಿದರು   

ಚಿಟಗುಪ್ಪ: ‘ಸಂಘ, ಸಂಸ್ಥೆಗಳ ಸಮಾಜಮುಖಿ ಸೇವೆಯಿಂದ ದೇಶದ ಪ್ರಗತಿ ಸಾಧ್ಯ’ ಎಂದು ಸೇಡಂ ಸಿವಿಲ್‌ ನ್ಯಾಯಾಲಯದ ಹಿರಿಯ ನ್ಯಾಯಾಧೀಶ ವಿಜಯಕುಮಾರ ಜಟ್ಲಾ ಅವರು ಅಭಿಪ್ರಾಯಪಟ್ಟರು.

ಇಲ್ಲಿಯ ಗಣೇಶ ಮಂದಿರದ ಆವರಣದಲ್ಲಿ ಗಜಾನನ ಡೌಲಪರ್ಸ್‌ ವತಿಯಿಂದ ನಿರ್ಮಿಸಲಾಗುತ್ತಿರುವ ಕಲ್ಯಾಣ ಮಂಟಪ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ,‘ಉದ್ಯಮಿ ಸಮೂಹ, ಯುವಕರು, ಉಳ್ಳವರು ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ನಾಗರಿಕರನ್ನು ಪ್ರೋತ್ಸಾಹಿಸಿ ಮೇಲೆತ್ತುವ ಕಾರ್ಯ ಮಾಡಬೇಕು’ ಎಂದರು.

ಪುರಸಭೆ ಮಾಜಿ ಸದಸ್ಯ ರಾಜಕುಮಾರ ಗುತ್ತೇದಾರ, ಗಣ್ಯರಾದ ಸಂಜು ಗಂಜಿ, ಮಾರುತಿ ಮರಾಠ, ರಮೇಶ ಪಾರಾ, ಶೀಲವಂತ ನಾಗೇಶ, ದೀಪಕ ಪಂಚಾಳ್‌ ಹಾಗೂ ಇತರರು ಇದ್ದರು. ಗಣೇಶ ದೇಗುಲದ ಅಧ್ಯಕ್ಷ ವೀರಣ್ಣ ಜಟ್ಲಾ ಸ್ವಾಗತಿಸಿದರು.

ADVERTISEMENT

ನಂತರ ದೇಗುಲದಲ್ಲಿ ದೇವರಿಗೆ ಯುಗಾದಿಯ ವಿಶೇಷ ಪೂಜೆ, ಫಲ ಪುಷ್ಪಗಳ ಅರ್ಪಣೆ, ಕಾಯಿ ಕರ್ಪೂರ ಅರ್ಪಿಸಿ ಮಹಾಮಂಗಳಾರತಿ ಬೆಳಗಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.