ADVERTISEMENT

ಬೀದರ್: ವ್ಯಾಪಾರಿಗಳಿಗೆ ಮಾಸ್ಕ್ ವಿತರಣೆ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2020, 10:05 IST
Last Updated 18 ಮಾರ್ಚ್ 2020, 10:05 IST
ಹುಮನಾಬಾದ್‍ನ ಕನ್ನಡ ಸೇನೆ ಕರ್ನಾಟಕ ತಾಲ್ಲೂಕು ಸಂಘಟನೆಯ ಸದಸ್ಯರು ವ್ಯಾಪಾರಿಗಳಿಗೆ ಮಂಗಳವಾರ ಮಾಸ್ಕ್‌ ವಿತರಿಸಿದರು
ಹುಮನಾಬಾದ್‍ನ ಕನ್ನಡ ಸೇನೆ ಕರ್ನಾಟಕ ತಾಲ್ಲೂಕು ಸಂಘಟನೆಯ ಸದಸ್ಯರು ವ್ಯಾಪಾರಿಗಳಿಗೆ ಮಂಗಳವಾರ ಮಾಸ್ಕ್‌ ವಿತರಿಸಿದರು   

ಹುಮನಾಬಾದ್: ಕನ್ನಡ ಸೇನಾ ಕರ್ನಾಟಕ ತಾಲ್ಲೂಕು ಸಂಘಟನೆಯಿಂದ ಮಂಗಳವಾರ ಇಲ್ಲಿನ ಬಸವೇಶ್ವರ ಮತ್ತು ಡಾ.ಅಂಬೇಡ್ಕರ್ ವೃತ್ತದ ಬಳಿ ತರಕಾರಿ ಮಾರಾಟ ಮಾಡುತ್ತಿರುವ ಮಹಿಳಾ ಮತ್ತು ಪುರುಷ ವ್ಯಾಪಾರಸ್ಥರಿಗೆ ಉಚಿತವಾಗಿ 200 ಮಾಸ್ಕ್ ವಿತರಿಸಲಾಯಿತು.

ಕನ್ನಡ ಸೇನೆ ತಾಲ್ಲೂಕು ಘಟಕದ ಆಧ್ಯಕ್ಷ ದತ್ತು ಪರೀಟ ಲದ್ದಿ ಉಚಿತ ಮಾಸ್ಕ್‌ ವಿತರಿಸಿ ಮಾತನಾಡಿ,‘ಜನರ ಆರೋಗ್ಯದ ದ್ರಷ್ಟಿಯಿಂದ ತರಕಾರಿ ಮಾರಾಟಗಾರರು ಪ್ರಮುಖ ಪಾತ್ರವಹಿಸಲಿದ್ದು. ತರಕಾರಿ ಮಾರಾಟ ಮಾಡುವಾಗ ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಂಡು ತರಕಾರಿ ಮಾರಾಟ ಮಾಡಬೇಕು’ ಎಂದರು. ಪುರಸಭೆ ಸದಸ್ಯ ವಿಜಯಕುಮಾರ ಭಾಸಪಳ್ಳಿ, ಕನ್ನಡ ಸೇನೆ ಕರ್ನಾಟಕ ತಾಲ್ಲೂಕು ಉಪಾಧ್ಯಕ್ಷ ಎಮ್‍ಡಿ ಮಹೇಬೂಬ್, ನಗರ ಅಧ್ಯಕ್ಷ ಸೋಮನಾಥ ಮಡಿವಾಳ, ನಾಗು ಗಾದಾ, ಮಚ್ಚೆಂದ್ರ ಗವಳಿ, ಆನಂದ ಮಾಳಗೆ, ವಿಜಯಕುಮಾರ, ಬಾಲಾಜಿ, ಹಾಗೂ ಶಿವಕುಮಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT