ADVERTISEMENT

ಸ್ಪರ್ಧಾತ್ಮಕ ಪರೀಕ್ಷಾ ಸಿದ್ಧತೆಗೆ ಮಾಸ್ಟರ್‌ ಮೈಂಡ್‌ ಪೂರಕ: ಸಂಗೀತಾ ಪಾಟೀಲ

ಚಿಟಗುಪ್ಪದಲ್ಲಿ ನಡೆದ ಪರೀಕ್ಷಾ ಸಿದ್ಧತಾ ಕಾರ್ಯಾಗಾರದಲ್ಲಿ ಸಂಗೀತಾ ಪಾಟೀಲ ಸಲಹೆ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2021, 13:11 IST
Last Updated 22 ಡಿಸೆಂಬರ್ 2021, 13:11 IST
ಚಿಟಗುಪ್ಪ ಪಟ್ಟಣದ ಸದ್ಬೋಧಿನಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಕಾರ್ಯಾಗಾರದಲ್ಲಿ ಪ್ರಾಚಾರ್ಯೆ ಸಂಗೀತಾ ಪಾಟೀಲ ಮಾತನಾಡಿದರು
ಚಿಟಗುಪ್ಪ ಪಟ್ಟಣದ ಸದ್ಬೋಧಿನಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಕಾರ್ಯಾಗಾರದಲ್ಲಿ ಪ್ರಾಚಾರ್ಯೆ ಸಂಗೀತಾ ಪಾಟೀಲ ಮಾತನಾಡಿದರು   

ಚಿಟಗುಪ್ಪ: ‘ಸ್ಪಧಾತ್ಮಕ ಪರೀಕ್ಷಾ ಸಿದ್ಧತೆಗೆ ‘ಪ್ರಜಾವಾಣಿ’ಯ ಮಾಸ್ಟರ್‌ ಮೈಂಡ್‌ ಆನ್‌ಲೈನ್‌ ಪತ್ರಿಕೆ ಉಪಯುಕ್ತ’ ಎಂದು ಪ್ರಾಚಾರ್ಯೆ ಸಂಗೀತಾ ಪಾಟೀಲ ತಿಳಿಸಿದರು.

ಮಾಸ್ಟರ್‌ ಮೈಂಡ್‌ ಆನ್‌ಲೈನ್‌ ಪತ್ರಿಕೆ ಸಹಯೋಗದಲ್ಲಿ ಸದ್ಬೋಧಿನಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ನಡೆದ ಪರೀಕ್ಷಾ ಸಿದ್ಧತಾ ಕಾರ್ಯಾಗಾರದಲ್ಲಿ ಮಾತನಾಡಿದರು.

‘ಪತ್ರಿಕೆಯಲ್ಲಿ, ಬಹು ಆಯ್ಕೆಯ ವಸ್ತು ಹಾಗೂ ವಿಷಯನಿಷ್ಠ ಅಂಶಗಳ ಕುರಿತು ಅತ್ಯಂತ ವಿವರವಾಗಿ ಬರೆಯಲಾಗುತ್ತದೆ. ಅಭ್ಯರ್ಥಿಗಳಿಗೆ ಸಂಪೂರ್ಣ ಜ್ಞಾನ ಒದಗಿಸಲಾಗುತ್ತಿದೆ. ಅಭ್ಯರ್ಥಿಗಳು ಇದನ್ನು ಪ್ರತಿದಿನ ಅಧ್ಯಯನ ಮಾಡಿದರೆ, ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಬಹುದು’ ಎಂದರು.

ADVERTISEMENT

ವೀರೇಶ್‌.ಎನ್‌ ಮಠಪತಿ ಸ್ಫರ್ಧಾತ್ಮಕ ಪರೀಕ್ಷಾ ಸಿದ್ಧತೆಯ ಕುರಿತು ಉಪನ್ಯಾಸ ನೀಡಿದರು. ಪ್ರವೀಣಕುಮಾರ ಪ್ರಾಸ್ತಾವಿಕವಾಗಿ ಮಾತನಾಡಿದರು.

ಉಪನ್ಯಾಸಕ ಸೋಮನಾಥ ಪಾಟೀಲ ಮಾತನಾಡಿ,‘ಪ್ರಜಾವಾಣಿ 70 ವರ್ಷಗಳಿಂದ ರಾಜ್ಯದಲ್ಲಿ ಕನ್ನಡ ಉಳಿಸಿ, ಬೆಳೆಸುವ ಕೆಲಸವನ್ನು ಅತ್ಯಂತ ಪ್ರಾಮಾಣಿಕವಾಗಿ ಮಾಡುತ್ತಿದೆ. ಪ್ರತಿಭಾನ್ವಿತರಿಗೆ ವೇದಿಕೆಯಾಗಿದೆ’ ಎಂದರು.

ಕನ್ನಡ ಪಂಡಿತ ನೀಲಕಂಠ ಇಸ್ಲಾಮಪುರ್‌, ಮುಖ್ಯಶಿಕ್ಷಕ ಅಶೋಕ ಮಠಪತಿ ಹಾಗೂ ಆಡಳಿತಾಧಿಕಾರಿ ರಾಜಕುಮಾರ್‌ ಇದ್ದರು.

ಪದವಿ ಪೂರ್ವ ಹಾಗೂ ‍ಪದವಿಯ 100ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.

ಸ್ಥಳದಲ್ಲಿಯೇ ಹಲವರು ಮಾಸ್ಟರ್‌ ಮೈಂಡ್‌ಚಂದಾದಾರಿಕೆ ಪಡೆದರು. ಶಿಬಿರದಲ್ಲಿ ವಿದ್ಯಾರ್ಥಿನಿಯರ ಪ್ರಶ್ನೆ, ಗೊಂದಲಗಳಿಗೆ ಉಪನ್ಯಾಸಕರು ಉತ್ತರಿಸಿದರು.

ಶಿಕ್ಷಕಿ ಪ್ರೇಮಲತಾ ಸ್ವಾಗತಿಸಿದರು. ಶಶಿಕಲಾ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.