ADVERTISEMENT

ರೈತರಿಗೆ ಬೆಳೆಹಾನಿ ಪರಿಹಾರ ನೀಡಿ- ರಾಜಶೇಖರ ಪಾಟೀಲ ಒತ್ತಾಯ

ಸರ್ಕಾರಕ್ಕೆ ಶಾಸಕ ರಾಜಶೇಖರ ಪಾಟೀಲ ಒತ್ತಾಯ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2022, 4:23 IST
Last Updated 16 ಆಗಸ್ಟ್ 2022, 4:23 IST
ಹುಮನಾಬಾದ್‌ನಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಶಾಸಕ ರಾಜಶೇಖರ ಪಾಟೀಲ ಮಾತನಾಡಿದರು
ಹುಮನಾಬಾದ್‌ನಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಶಾಸಕ ರಾಜಶೇಖರ ಪಾಟೀಲ ಮಾತನಾಡಿದರು   

ಹುಮನಾಬಾದ್: ‘ಹಲವರ ತ್ಯಾಗ, ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯ ದೊರಕಿದೆ’ ಎಂದು ಶಾಸಕ ರಾಜಶೇಖರ ಪಾಟೀಲ ಹೇಳಿದರು.

ತಾಲ್ಲೂಕು ಆಡಳಿತದಿಂದ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ,‘ಬ್ರಿಟಿಷರ ಆಡಳಿತದಲ್ಲಿ ಕಠಿಣ ಜೀವನ ಸಾಗಿಸುವಂಥ ಅನಿವಾರ್ಯತೆ ಇತ್ತು. ಇವರ ವಿರುದ್ಧ ದೇಶದ ಅನೇಕ ಸ್ವಾತಂತ್ರ್ಯ ಹೋರಾಟಗಾರರು ತಮ್ಮ ಪ್ರಾಣವನ್ನೂ ಲೆಕ್ಕಿಸದೇ ಹೋರಾಟ ನಡೆಸಿದರು. ಆದ್ದರಿಂದ ಇಂದು ನೆಮ್ಮದಿಯ ಜೀವನ ನಡೆ ಸುತ್ತಿದ್ದೇವೆ’ ಎಂದರು.

‘ಬಿಎಸ್‌ಎಸ್‌ಕೆ ಕಾರ್ಖಾನೆಗೆ ಕಬ್ಬು ಸಾಗಿಸಿದ ಅನೇಕ ರೈತರಿಗೆ ಇನ್ನೂ ಪೂರ್ತಿ ಹಣ ನೀಡಿಲ್ಲ. ನಿರಂತರ ಮಳೆಯಿಂದಾಗಿ ಹುಮನಾಬಾದ್ ಕ್ಷೇತ್ರದಲ್ಲಿ ಬೆಳೆ ಹಾಳಾಗಿದೆ. ಸರ್ಕಾರ ಪ್ರತಿ ಹೆಕ್ಟೇರ್‌ಗೆ ₹50 ಸಾವಿರ ಸಹಾಯಧನ ನೀಡಬೇಕು’ ಎಂದು ಒತ್ತಾಯಿಸಿದರು.

ADVERTISEMENT

ವಿಧಾನ ಪರಿಷತ್ ಸದಸ್ಯರಾದ ಡಾ.ಚಂದ್ರಶೇಖರ ಪಾಟೀಲ, ಭೀಮರಾವ್ ಪಾಟೀಲ, ಪುರಸಭೆ ಅಧ್ಯಕ್ಷೆ ನೀತು ಶರ್ಮಾ, ಉಪಾಧ್ಯಕ್ಷೆ ಸತ್ಯವತಿ ಮಠಪತಿ, ತಹಶೀಲ್ದಾರ್ ಡಾ.ಪ್ರದೀಪಕುಮಾರ ಹಿರೇಮಠ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮುರುಗೆಪ್ಪ ವಸ್ತ್ರದ, ಸಿಪಿಐ ಶರಣ ಬಸಪ್ಪ ಕೊಡ್ಲಾ, ಪುರಸಭೆ ಮುಖ್ಯಾಧಿಕಾರಿ ಶಿವರಾಜ ರಾಠೋಡ, ಪಿಎಸ್ಐ ಮಂಜನಗೌಡ ಪಾಟೀಲ, ಸಂಚಾರ ಠಾಣೆ ಪಿಎಸ್ಐ ಬಸವರಾಜ, ಅಫ್ಸರ್ ಮಿಯ್ಯಾ, ರಮೇಶ ಡಾಕುಳಗಿ, ಕಂಟೆಪ್ಪ ದಾನ ಹಾಗೂ ಮಲ್ಲಿಕಾರ್ಜುನ ಮಾಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.