
ಔರಾದ್: ಪ್ರಸಕ್ತ ವರ್ಷ ಮಳೆಗಾಲದಲ್ಲಿ ಸುರಿದ ಭಾರಿ ಮಳೆಯಿಂದ ಹಾನಿಯಾದ ಕೆರೆ ಹಾಗೂ ಸೇತುವೆ ದುರಸ್ತಿ ಕಾಮಗಾರಿಗೆ ಶಾಸಕ ಪ್ರಭು ಚವಾಣ್ ಭಾನುವಾರ ಚಾಲನೆ ನೀಡಿದರು.
‘ಭಾರಿ ಮಳೆಯಿಂದ ಯನಗುಂದಾ ಸೇತುವೆ ಕುಸಿದು ಈ ಭಾಗದ ಸಂಪರ್ಕ ಕಡಿತಗೊಂಡು ಜನ ತೀವ್ರ ತೊಂದರೆ ಎದುರಿಸುತ್ತಿದ್ದರು. ಬೋಂತಿ ಕೆರೆ ಒಡೆದು ಹೊಲಗಳಿಗೆ ನೀರು ನುಗ್ಗಿ ರೈತರು ಹಾನಿ ಅನುಭವಿಸಿರುವ ಹಿನ್ನೆಲೆಯಲ್ಲಿ ಸರ್ಕಾರದ ಮೇಲೆ ಒತ್ತಡ ಹೇರಿ ₹ 3 ಕೋಟಿ ಅನುದಾನ ಮಂಜೂರು ಮಾಡಿಸಲಾಗಿದೆ’ ಎಂದು ಶಾಸಕರು ತಿಳಿಸಿದರು.
‘ಸೇತುವೆ ಹಾಗೂ ಕೆರೆ ಕಾಮಗಾರಿ ಸೂಕ್ಷ್ಮವಾಗಿರುವುದರಿಂದ ಗುಣಮಟ್ಟ ಕಾಯ್ದುಕೊಳ್ಳಬೇಕು. ಅಧಿಕಾರಿಗಳು ಮೇಲ್ವಿಚಾರಣೆ ಮಾಡಬೇಕು. ಕಳಪೆ ಆದರೆ ಜನರೇ ಕಾಮಗಾರಿ ತಡೆ ಹಿಡಿಯಬೇಕು’ ಎಂದು ಹೇಳಿದರು.
ರಾಮಸಿಂಗ್ ನಾಯಕ್ ತಾಂಡಾ ಬಳಿಯ ₹ 1.5 ಕೋಟಿ ಕೆರೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.
ರಾಮಶೆಟ್ಟಿ ಪನ್ನಾಳೆ, ಧೊಂಡಿಬಾ ನರೋಟೆ, ಶಿವರಾಜ ಅಲ್ಮಾಜೆ, ಖಂಡೋಬಾ ಕಂಗಟೆ, ಪ್ರತೀಕ ಚವಾಣ್, ಶಿವಕುಮಾರ ಮಜಗೆ, ನಾಗನಾಥ ಲಕ್ಕಾ, ರಮೇಶ ಗೌಡ ಮತ್ತಿತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.