ADVERTISEMENT

ರೈತರೊಂದಿಗೆ ಶಾಸಕ ಚವಾಣ್ ಸಹಭೋಜನ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2025, 5:12 IST
Last Updated 20 ಡಿಸೆಂಬರ್ 2025, 5:12 IST
ಕಮಲನಗರ ತಾಲ್ಲೂಕಿನ ಹೋಳಸಮುದ್ರ ಗ್ರಾಮದಲ್ಲಿ ಎಳ್ಳ ಅಮವಾಸ್ಯೆ ನಿಮಿತ್ತ ಮಾರುತಿ ಆಳಂದೆ ಅವರ ಹೊಲದಲ್ಲಿ ಶಾಸಕ ಪ್ರಭು ಚವ್ಹಾಣ ರೈತ ಮುಖಂಡರೊಂದಿಗೆ ಊಟ ಮಾಡಿದರು 
ಕಮಲನಗರ ತಾಲ್ಲೂಕಿನ ಹೋಳಸಮುದ್ರ ಗ್ರಾಮದಲ್ಲಿ ಎಳ್ಳ ಅಮವಾಸ್ಯೆ ನಿಮಿತ್ತ ಮಾರುತಿ ಆಳಂದೆ ಅವರ ಹೊಲದಲ್ಲಿ ಶಾಸಕ ಪ್ರಭು ಚವ್ಹಾಣ ರೈತ ಮುಖಂಡರೊಂದಿಗೆ ಊಟ ಮಾಡಿದರು    

ಶಾಸಕ ಪ್ರಭು ಚವಾಣ್‌ ಅವರು ಎಳ್ಳ ಅಮಾವಾಸ್ಯೆ ನಿಮಿತ್ತ ಸ್ವ-ಗ್ರಾಮ ಘಮಸುಬಾಯಿ ತಾಂಡಾದಲ್ಲಿನ ತಮ್ಮ ಹೊಲಕ್ಕೆ ತೆರಳಿ ಪೂಜೆ ನೆರವೇರಿಸಿ ಚರಗ ಚಲ್ಲಿದರು. ಬಳಿಕ ಜೋಳದ ರೊಟ್ಟಿ, ಸಜ್ಜೆ ರೊಟ್ಟಿ, ಭಜ್ಜಿಪಲ್ಯೆ, ಶೇಂಗಾ-ಎಳ್ಳಿನ ಹೋಳಿಗೆ ಸವಿದರು.

‘ಎಳ್ಳಮವಾಸ್ಯೆ ನಮ್ಮ ಭಾಗದ ರೈತರು ಆಚರಿಸುವ ಪ್ರಮುಖ ಹಬ್ಬವಾಗಿದೆ. ಭೂತಾಯಿಯನ್ನು ಪೂಜಿಸಿ ಹೊಲದಲ್ಲಿ ಕುಳಿತು ಊಟ ಮಾಡುವ ಖುಷಿಯೇ ಬೇರೆ. ಪ್ರತಿ ವರ್ಷದಂತೆ ರೈತ ಮುಖಂಡರ ಕೃಷಿ ಜಮೀನುಗಳಿಗೆ ಭೇಟಿ ನೀಡಿ ರೈತರೊಂದಿಗೆ ಹಬ್ಬ ಆಚರಿಸುತ್ತಿದ್ದೇನೆ’ ಎಂದು ಸಂಭ್ರಮ ಹಂಚಿಕೊಂಡರು.

ನಂತರ ವಿವಿಧ ಗ್ರಾಮಗಳಲ್ಲಿ ಸಂಚರಿಸಿ ರೈತರೊಂದಿಗೆ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡರು. ದಾಬಕಾದಲ್ಲಿ ಧನಾಜಿ ಜಾಧವ, ಮಾಳೆಗಾಂವನಲ್ಲಿ ಅನೀಲ ದೇಶಮುಖ, ಹಕ್ಯಾಳದಲ್ಲಿ ಕಿರಣ ಪಾಟೀಲ, ಕಮಲನಗರದಲ್ಲಿ ಶಿವಕುಮಾರ ಜುಲ್ಫೆ, ಪಪ್ಪು ವಿಠಲ ಬಿರಾದಾರ, ಹೊಳಸಮುದ್ರ ಮಾರುತಿ ಆಳಂದೆ, ಹಲ್ಲಾಳಿಯಲ್ಲಿ ಪ್ರವೀಣ ಕಾರಬಾರಿ, ಠಾಣಾಕುಶನೂರನಲ್ಲಿ ಧನರಾಜ ವಡೆಯರ್, ಅನೀಲ ಬೋಚರೆ, ಮುಧೋಳದಲ್ಲಿ ಉದಯ ಸೋಲಾಪೂರೆ ಹಾಗೂ ಡೊಂಗರಗಾಂವ ಗ್ರಾಮದ ಗೋವಿಂದ ಪಾಟೀಲ ಅವರ ಹೊಲಗಳಿಗೆ ಭೇಟಿ ನೀಡಿದರು.

ADVERTISEMENT

ಈ ಸಂದರ್ಭದಲ್ಲಿ ಮುಖಂಡರಾದ ಮಾರುತಿ ಚವ್ಹಾಣ, ರಾಮಶೆಟ್ಟಿ ಪನ್ನಾಳೆ, ಶಿವಾನಂದ ವಡ್ಡೆ, ನಾಗೇಶ ಪತ್ರೆ, ಪ್ರತೀಕ ಚವ್ಹಾಣ, ಯೋಗೇಶ ಪಾಟೀಲ, ನಾಗನಾಥ ಚಿಕ್ಲೆ, ಭರತ ಕದಂ, ಬಂಟಿ ರಾಂಪೂರೆ, ನೀಲಕಂಠ ಪಾಟೀಲ, ಪ್ರವೀಣ ಕಾರಬಾರಿ, ಅಶೋಕ ಮೇತ್ರೆ, ಪ್ರದೀಪ ಪವಾರ, ಧನಾಜಿ ರಾಠೋಡ, ಸುಭಾಷ ಸಪರ್ಂಚ್, ಬಾಬುರಾವ ರಾಠೋಡ, ವಿಲಾಸ ಚವ್ಹಾಣ, ದೀಪಕ ಜಾಧವ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಫೋಟೋ ಕ್ಯಾಪ್ಷನ್ : 19ಕೆಎಂಎಲ್03-ಎ : ಕಮಲನಗರ ತಾಲ್ಲೂಕಿನ ದಾಬಕಾ ಗ್ರಾಮದ ಧನಾಜಿ ಜಾಧವ ಅವರ ಹೊಲದಲ್ಲಿ ಶಾಸಕ ಪ್ರಭು ಚವ್ಹಾಣ ಅವರು ಜೋಕಾಲಿ ಆಡಿದರು.