ADVERTISEMENT

ವ್ಯಕ್ತಿತ್ವ ವಿಕಸನಕ್ಕೆ ಮಾತೃಭಾಷೆ ಪೂರಕ: ಬಸವರಾಜ ಪಾಟೀಲ ಸೇಡಂ

​ಪ್ರಜಾವಾಣಿ ವಾರ್ತೆ
Published 29 ಜನವರಿ 2026, 8:31 IST
Last Updated 29 ಜನವರಿ 2026, 8:31 IST
ಔರಾದ್‌ನ ಲಿಟ್ಲ್ ಫ್ಲಾವರ್ ಶಾಲೆ ವಾರ್ಷಿಕೋತ್ಸವದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ವಿಕಾಸ ಅಕಾಡೆಮಿ ಮುಖ್ಯಸ್ಥ ಬಸವರಾಜ ಪಾಟೀಲ ಸೇಡಂ ಮತ್ತಿತರರು ಇದ್ದರು
ಔರಾದ್‌ನ ಲಿಟ್ಲ್ ಫ್ಲಾವರ್ ಶಾಲೆ ವಾರ್ಷಿಕೋತ್ಸವದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ವಿಕಾಸ ಅಕಾಡೆಮಿ ಮುಖ್ಯಸ್ಥ ಬಸವರಾಜ ಪಾಟೀಲ ಸೇಡಂ ಮತ್ತಿತರರು ಇದ್ದರು   

ಔರಾದ್: ‘ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಮಾತೃಭಾಷೆ ಪೂರಕವಾಗಿದ್ದು, ಇಂಗ್ಲಿಷ್ ಕಲಿತರೂ ಮಾತೃ ಭಾಷೆ ಮಾತ್ರ ಬಿಡಬಾರದು’ ಎಂದು ವಿಕಾಸ ಅಕಾಡೆಮಿ ಮುಖ್ಯಸ್ಥ ಬಸವರಾಜ ಪಾಟೀಲ ಸೇಡಂ ಹೇಳಿದರು.


ಪಟ್ಟಣದಲ್ಲಿ ಮಂಗಳವಾರ ಸಂಜೆ ಲಿಟ್ಲ್ ಫ್ಲಾವರ್ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳ ಚಿಂತನೆ, ಕ್ರಿಯಾಶೀಲತೆ, ವ್ಯಕ್ತಿತ್ವ ವಿಕಸನ ಮಾತ್ರ ಭಾಷೆಯಿಂದಲೇ ಸಾಧ್ಯ. ಹೀಗಾಗಿ ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ವಾರದಲ್ಲಿ ಒಂದು ದಿನ ಕಡ್ಡಾಯವಾಗಿ ಮಾತೃ ಭಾಷೆ ಕಲಿಸಬೇಕು ಎಂದರು.


ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಮಾತ್ರ ನಾವು ಗೌರವಿಸುತ್ತೇವೆ. ಕ್ರೀಡಾ, ಸಂಗೀತ ಸೇರಿದಂತೆ ಇತರೆ ರಂಗಗಳಲ್ಲಿಯ ಪ್ರತಿಭಾಂವAತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಕೆಲಸ ಆಗಬೇಕು ಎಂದು ಸಲಹೆ ನೀಡಿದರು.
ಸಂಸ್ಥೆ ಅಧ್ಯಕ್ಷ ಬಂಡೆಪ್ಪ ಕಂಟೆ, ರಾಜೇಂದ್ರ ಮುದ್ದಾ, ರತನ ಪೋಕಲವಾರ, ಪ್ರಕಾಶ ಘುಳೆ, ರವೀಂದ್ರ ಮೀಸೆ, ರಾಜೇಂದ್ರ ಎಕಲಾರ, ಶಿವರಾಜ ಮಸ್ಕಲೆ, ಶಾಲೆ ಸಿಬ್ಬಂದಿ ಬಸವರಾಜ ಅಣದೂರೆ, ಸುನಿತಾ ಪವಾರ ಮತ್ತಿತರರು ಇದ್ದರು. ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ವಿದ್ಯಾರ್ಥಿಗಳು ಸಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
------

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.