ADVERTISEMENT

ಜೀವನದಲ್ಲಿ ವಚನ ಮೌಲ್ಯ ಅಳವಡಿಸಿಕೊಳ್ಳಿ: ಬಸವಲಿಂಗ ಪಟ್ಟದ್ದೇವರು

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2021, 3:59 IST
Last Updated 8 ಸೆಪ್ಟೆಂಬರ್ 2021, 3:59 IST
ಭಾಲ್ಕಿಯ ಚನ್ನಬಸವಾಶ್ರಮದಲ್ಲಿ ನಡೆದ ವಚನ ದರ್ಶನ ಪ್ರವಚನ ಸಮಾರೋಪ ಕಾರ್ಯಕ್ರಮದಲ್ಲಿ ಅನುಭವ ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ಮಾತನಾಡಿದರು
ಭಾಲ್ಕಿಯ ಚನ್ನಬಸವಾಶ್ರಮದಲ್ಲಿ ನಡೆದ ವಚನ ದರ್ಶನ ಪ್ರವಚನ ಸಮಾರೋಪ ಕಾರ್ಯಕ್ರಮದಲ್ಲಿ ಅನುಭವ ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ಮಾತನಾಡಿದರು   

ಭಾಲ್ಕಿ: ‘ಶ್ರಾವಣದ ಮಾಸದಲ್ಲಿ ತಿಂಗಳು ಪರ್ಯಂತ ಕೇಳಿರುವ ಶರಣರ ವಚನಗಳ ಚಿಂತನ, ತತ್ವಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ನೆಮ್ಮದಿಯ ಜೀವನ ನಡೆಸಬೇಕು’ ಎಂದು ಅನುಭವ ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ಹೇಳಿದರು.

ಇಲ್ಲಿನ ಚನ್ನಬಸವಾಶ್ರಮದಲ್ಲಿ ನಡೆದ ವಚನ ದರ್ಶನ ಪ್ರವಚನ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬಸವಾದಿ ಶರಣರ ವಚನಗಳು ಬರೀ ಹೇಳುವುದು, ಕೇಳುವುದಕ್ಕೆ ಸೀಮಿತವಾಗಿರದೇ ಅವುಗಳನ್ನು ಆಚರಣೆಯಲ್ಲಿ ತರುವ ಅವಶ್ಯಕತೆ ಇದೆ. ನಾವು ನಮ್ಮ ಜೀವನ ಸುಖಿ ಸಮಾಧಾನ ಮಾಡಿಕೊಳ್ಳಬೇಕಾದರೆ ನಡೆ-ನುಡಿ ಒಂದಾಗಿಸಿಕೊಳ್ಳಬೇಕು ಎಂದರು.

ADVERTISEMENT

ನಮ್ಮ ಜೀವನ ಶರಣರ ಜೀವನ ಆಗಬೇಕಾದರೆ ನಾವು ಸಂಸಾರ, ಮನೆ, ಹೊಲ, ಮಕ್ಕಳು ಬಿಡಬೇಕಾಗಿಲ್ಲ. ಸಂಸಾರದಲ್ಲಿದ್ದುಕೊಂಡೆ ಸದ್ಗತಿ ಪಡೆಯುವ ಮಾರ್ಗವನ್ನು ಶರಣರು ಹೇಳಿದ್ದಾರೆ. ಶರಣರು ಎಲ್ಲವನ್ನು ಇಟ್ಟುಕೊಂಡೇ ಲಿಂಗಾಂಗ ಸಾಮರಸ್ಯವನ್ನು ಪಡೆದಿದ್ದಾರೆ. ಅದಕ್ಕಾಗಿ ನಾವು ಸಂಸಾರದಲ್ಲಿದ್ದರು ಇಲ್ಲದ ಹಾಗೆ ಇರಬೇಕು.

ಕಮಲದ ಹೂ ಕೆಸರಲ್ಲಿಯೇ ಅರಳುತ್ತದೆ. ಆದರೂ ಅದು ಕೆಸರಿಗೆ ಅಂಟಿಕೊಳ್ಳುವುದಿಲ್ಲ. ಹಾಗೆಯೇ ನಮ್ಮ ಜೀವನ ಇರಬೇಕು ಎಂದು ಮಾರ್ಮಿಕ ಉದಾಹರಣೆಗಳೊಂದಿಗೆ ವಿವರಿಸಿದರು.

ಹಿರೇಮಠದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು, ನಿರಂಜನ ಸ್ವಾಮೀಜಿ, ಬಸವಲಿಂಗ ಸ್ವಾಮೀಜಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.