ADVERTISEMENT

ಭಾಲ್ಕಿ | ಕೋಟ್ಯಂತರ ರೂಪಾಯಿ ಅವ್ಯವಹಾರ: ತನಿಖೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 7 ಜೂನ್ 2024, 16:12 IST
Last Updated 7 ಜೂನ್ 2024, 16:12 IST

ಭಾಲ್ಕಿ: ‘ತಾಲ್ಲೂಕಿನ ಕೋನಮೇಳಕುಂದಾ ಗ್ರಾಮ ಪಂಚಾಯಿತಿಯ ಪಿ.ಡಿ.ಒ, ಅಧ್ಯಕ್ಷ ಸೇರಿಕೊಂಡು 2020–21ರಿಂದ 2023-24ನೇ ಸಾಲಿನ ವರೆಗೆ 14, 15ನೇ ಹಣಕಾಸು ಯೋಜನೆ, ಕರ ವಸೂಲಿ, ಉದ್ಯೋಗ ಖಾತ್ರಿಯ ಸೇರಿದಂತೆ ಇತರ ಮೂಲಗಳಿಂದ ಬಂದ ಅನುದಾನದಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆಸಿದ್ದಾರೆ’ ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಚರಣಜೀತ ಆಣದೂರೆ, ಉಪಾಧ್ಯಕ್ಷ ಪ್ರವೀಣ ಮೊಳಕೇರೆ ಸೇರಿದಂತೆ ಇತರರು ಆರೋಪಿಸಿದರು.

ಈ ಸಂಬಂಧ ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿ ಅವರು ಮಾತನಾಡಿದರು.

‘ಈ ಅವ್ಯವಹಾರದ ಬಗ್ಗೆ ವಿಶೇಷ ಗಮನ ಹರಿಸಿ ತಕ್ಷಣವೇ ತನಿಖಾ ತಂಡ ರಚಿಸಿ ಸಂಪೂರ್ಣ ತನಿಖೆಯನ್ನು ಕೈಗೊಳ್ಳಬೇಕು. ಅವ್ಯವಹಾರದಲ್ಲಿ ಭಾಗಿಯಾಗಿರುವ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ವತಿಯಿಂದ ಹೋರಾಟ ಮಾಡಬೇಕಾಗುತ್ತದೆ’ ಎಂದು ಪ್ರಮುಖರಾದ ಕೇತನ ಪಾಟೀಲ, ದಿನೇಶ ಡೊಂಗರ್ಗಿಕರ್, ಧನರಾಜ ಸಾಂಗವಿಕರ್, ಶಾಶ್ವತ ಶೇರಿಕಾರ, ಪೌಲ್ ಸಾಲೊಮಿನ್ ಎಚ್ಚರಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.