ADVERTISEMENT

ಬೀದರ್‌: ಬಿಜೆಪಿಯಿಂದ ಪಾಪನಾಶದಲ್ಲಿ ಭೂಮಿಪೂಜೆ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2023, 16:20 IST
Last Updated 9 ಸೆಪ್ಟೆಂಬರ್ 2023, 16:20 IST
ಜಿಲ್ಲಾ ಬಿಜೆಪಿಯಿಂದ ಬೀದರ್‌ನ ಪಾಪನಾಶದಲ್ಲಿ ಶನಿವಾರ ಏರ್ಪಡಿಸಿದ್ದ ‘ನನ್ನ ಮಣ್ಣು, ನನ್ನ ದೇಶ’ ಕಾರ್ಯಕ್ರಮದಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು
ಜಿಲ್ಲಾ ಬಿಜೆಪಿಯಿಂದ ಬೀದರ್‌ನ ಪಾಪನಾಶದಲ್ಲಿ ಶನಿವಾರ ಏರ್ಪಡಿಸಿದ್ದ ‘ನನ್ನ ಮಣ್ಣು, ನನ್ನ ದೇಶ’ ಕಾರ್ಯಕ್ರಮದಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು   

ಬೀದರ್‌: ನವದೆಹಲಿಯಲ್ಲಿ ನಿರ್ಮಿಸುತ್ತಿರುವ ‘ಕರ್ತವ್ಯ ಪಥ್‌’ಗೆ ದೇಶದ ವಿವಿಧ ಕಡೆಗಳಿಂದ ಮಣ್ಣು ಸಂಗ್ರಹಿಸಿ ಕಳಿಸಿಕೊಡಲು ಹಮ್ಮಿಕೊಂಡಿರುವ ‘ನನ್ನ ಮಣ್ಣು, ನನ್ನ ದೇಶ’ ಕಾರ್ಯಕ್ರಮ ನಗರದ ಪಾಪನಾಶದಲ್ಲಿ ಶನಿವಾರ ನಡೆಯಿತು.

ಪಾಪನಾಶ ಶಿವಲಿಂಗ ದೇವಸ್ಥಾನದ ಪರಿಸರದಲ್ಲಿ ಭೂಮಿಗೆ ಪೂಜೆ ನೆರವೇರಿಸಿ, ಮಣ್ಣು ಸಂಗ್ರಹಿಸಲಾಯಿತು. ಬಿಜೆಪಿ ಜಿಲ್ಲಾ ಅಧ್ಯಕ್ಷ ಶಿವಾನಂದ ಮಂಠಾಳಕರ, ವಿಭಾಗ ಸಹ ಸಂಘಟನಾ ಪ್ರಧಾನ ಕಾರ್ಯದರ್ಶಿ ಸೂರ್ಯಕಾಂತ ಧೋನಿ, ಕಲಬುರಗಿ ವಿಭಾಗ ಸಹ ಪ್ರಭಾರಿ ಈಶ್ವರ ಸಿಂಗ್ ಠಾಕೂರ, ಹಿರಿಯ ಮುಖಂಡ ಬಾಬು ವಾಲಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ ಎಸ್. ಪಾಟೀಲ, ನಗರ ಘಟಕದ ಅಧ್ಯಕ್ಷ ಶಶಿ ಹೊಸಳ್ಳಿ, ರಾಜೇಂದ್ರ ಪೂಜಾರಿ, ರಾಜು ಚಿದ್ರಿ, ಮಹೇಶ್ವರ ಸ್ವಾಮಿ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT