ADVERTISEMENT

ಬೀದರ್: ನಾಗೇಶ್ವರ ಮಾಲೆ ಇರಮುಡಿ ಮುಕ್ತಾಯ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2025, 4:19 IST
Last Updated 24 ಆಗಸ್ಟ್ 2025, 4:19 IST
ಹುಮನಾಬಾದ್ ತಾಲ್ಲೂಕಿನ ಹಳ್ಳಿಖೇಡ(ಬಿ) ಪಟ್ಟಣದ ಸೀಮಿ ನಾಗನಾಥ ದೇವಸ್ಥಾನದಲ್ಲಿ ನಾಗೇಶ್ವರ ಮಾಲೆ ಇರುಮುಡಿ ಮುಕ್ತಾಯ ಸಮಾರಂಭ ಜರುಗಿತು
ಹುಮನಾಬಾದ್ ತಾಲ್ಲೂಕಿನ ಹಳ್ಳಿಖೇಡ(ಬಿ) ಪಟ್ಟಣದ ಸೀಮಿ ನಾಗನಾಥ ದೇವಸ್ಥಾನದಲ್ಲಿ ನಾಗೇಶ್ವರ ಮಾಲೆ ಇರುಮುಡಿ ಮುಕ್ತಾಯ ಸಮಾರಂಭ ಜರುಗಿತು   

ಹುಮನಾಬಾದ್‌: ತಾಲ್ಲೂಕಿನ ಹಳ್ಳಿಖೇಡ್ (ಬಿ) ಪಟ್ಟಣದ ಸೀಮಿ ನಾಗನಾಥ ದೇವಸ್ಥಾನದಲ್ಲಿ ನಾಗೇಶ್ವರ ಮಾಲೆ ಇರಮುಡಿ ಮುಕ್ತಾಯ ಸಮಾರಂಭ ಜರುಗಿತು.

180 ಜನರು 41 ದಿನಗಳು ನಾಗೇಶ್ವರ ಮಾಲೆ ಧರಿಸಿದ್ದು, ಶನಿವಾರ ದೇವಸ್ಥಾನದಲ್ಲಿ ಸಮಾಪ್ತಿ ಕಾರ್ಯಕ್ರಮ ನಡೆಯಿತು.‌ ದೇವಸ್ಥಾನದಲ್ಲಿ ಬೆಳಿಗ್ಗೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ನಾಗೇಶ್ವರ ಮಾಲೆ ಸ್ವಾಮಿಗಳ ಇರಮುಡಿ ಕಾರ್ಯಕ್ರಮ ಕಳೆದ 20 ವರ್ಷಗಳಿಂದ ನಡೆದುಕೊಂಡು ಬರುತ್ತಿದೆ. ಈ ವರ್ಷ ನಡೆದ ಇರಮುಡಿ ಕಾರ್ಯಕ್ರಮದಲ್ಲಿ 180ಕ್ಕೂ ಹೆಚ್ಚು ಜನ ಮಾಲೆ ಧರಿಸಿರುವುದು ವಿಶೇಷವಾಗಿತ್ತು.

ADVERTISEMENT

ತುಮಕೂರಿನ ವೀರಗಾಸೆ ಕಲಾ ತಂಡದಿಂದ ವಿಶೇಷ ವೀರಭದ್ರೇಶ್ವರ ಹಾಗೂ ಭದ್ರಕಾಳಿ ನೃತ್ಯ ನೋಡುಗರ ಗಮನ ಸೆಳೆಯಿತು.

ಈ ಸಮಾರಂಭದಲ್ಲಿ ಹಳ್ಳಿಖೇಡ (ಬಿ) ಪಟ್ಟಣದ ಸೇರಿದಂತೆ ತಾಲ್ಲೂಕಿನ ಹುಡಗಿ, ಹಳ್ಳಿಖೇಡ (ಕೆ), ಸಿಂಧಬಂದಗಿ, ಅತಿವಾಳ, ದುಬಲಗುಂಡಿ, ಕಬೀರಾಬಾದ್ ವಾಡಿ, ನಂದಗಾಂವ, ಹಿಲಾಲಪುರ, ಮರಕಲ್, ಮುಗನೂರ ಗ್ರಾಮಗಳ ಭಕ್ತರು ಪಾಲ್ಗೊಂಡಿದ್ದರು.

ಚಿಕ್ಕಮಠ ಸಂಸ್ಥಾನದ ಪಂಡಿತಾರಾಧ್ಯ ಶಿವಾಚಾರ್ಯರು, ಸಿದ್ಧಾರೂಢ ಮಠದ ಶಂಕರಾನಂದ ಸ್ವಾಮಿ, ರಾಘವೇಂದ್ರ ಪಂಚಾಳ, ಗಣೇಶ್ ಘನತೆ, ಮನೋಹರ್ ಚಳಕಿ, ಬಸವರಾಜ ಹಾಲಾ, ಮಹೇಶ್ ಪ್ರಭಾ, ಜಗದೀಶ್, ನಾಗರಾಜ ಆರ್ಯ, ದಯಾನಂದ ಭಂಡಾರಿ ಇದ್ದರು.‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.