ADVERTISEMENT

30 ಚಿತ್ರಕಲಾ ಶಿಕ್ಷಕರಿಗೆ ರಾಷ್ಟ್ರ ನಿರ್ಮಾಪಕ ಪ್ರಶಸ್ತಿ

ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿಯಿಂದ ಅರ್ಥಪೂರ್ಣ ಶಿಕ್ಷಕರ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2022, 11:08 IST
Last Updated 19 ಸೆಪ್ಟೆಂಬರ್ 2022, 11:08 IST
ಬೀದರ್‌ನ ಐಎಂಎ ಹಾಲ್‍ನಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿ ವತಿಯಿಂದ ಜಿಲ್ಲೆಯ ಚಿತ್ರಕಲಾ ಶಿಕ್ಷಕರಿಗೆ ರಾಷ್ಟ್ರ ನಿರ್ಮಾಪಕ ಪ್ರಶಸ್ತಿ ಪ್ರದಾನ ಮಾಡಲಾಯಿತು
ಬೀದರ್‌ನ ಐಎಂಎ ಹಾಲ್‍ನಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿ ವತಿಯಿಂದ ಜಿಲ್ಲೆಯ ಚಿತ್ರಕಲಾ ಶಿಕ್ಷಕರಿಗೆ ರಾಷ್ಟ್ರ ನಿರ್ಮಾಪಕ ಪ್ರಶಸ್ತಿ ಪ್ರದಾನ ಮಾಡಲಾಯಿತು   

ಬೀದರ್: ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿ ವತಿಯಿಂದ 30 ಚಿತ್ರಕಲಾ ಶಿಕ್ಷಕರಿಗೆ ರಾಷ್ಟ್ರ ನಿರ್ಮಾಪಕ ಪ್ರಶಸ್ತಿ ಪ್ರದಾನ, ಹಿರಿಯ ಚಿತ್ರ ಕಲಾವಿದರಿಗೆ ಸನ್ಮಾನ ಹಾಗೂ ಚಿತ್ರಕಲಾ ಪ್ರದರ್ಶನದೊಂದಿಗೆ ಇಲ್ಲಿಯ ಐಎಂಎ ಹಾಲ್‍ನಲ್ಲಿ ಶಿಕ್ಷಕರ ದಿನ ಆಚರಿಸಲಾಯಿತು.

ಬೀದರ್‌ನ ಚಿತ್ರಕಲಾ ಶಿಕ್ಷಕರಾದ ಆನಂದ ದೀನೆ, ವಿಶ್ವನಾಥ ಎಸ್, ಸುದರ್ಶನ್ ಬಿ, ಶಿವಶಂಕರ ಮಠದ, ಸಂತೋಷ ವಣ್ಣೆಕೇರಿ, ರುಬಿನಾ ಬೇಗಂ, ಅಶೋಕ್ ಯಾದವ್, ಜಾವೇದ್ ಅಹಮ್ಮದ್, ಭಾಲ್ಕಿಯ ಜಿಪ್ಸನ್ ಕೋಟೆ, ಶಾಂತಾಬಾಯಿ ಬಿ, ಪರಮೇಶ್ವರ ಕೆ, ಮಲ್ಲೇಶ್ವರ, ವಿಷ್ಣುಕಾಂತ್ ಠಾಕೂರ್, ಔರಾದ್‍ನ ಅನಿಲ ಕಟ್ಟೆ, ಛಾಯಾ ಗರ್ಜೆ, ಎಂ.ಡಿ. ಮೊಯಿಜ್ ಅಹಮ್ಮದ್, ಹುಮನಾಬಾದ್‍ನ ಸಂಗಮ್ಮ ಸಜ್ಜನ್, ಅಶೋಕ ಹಿರೇಮಠ, ರಾಜಣ್ಣ ಮೂಲಗಿ, ಗುಂಡಪ್ಪ ಕೋರೆ, ಪ್ರಭು ರತ್ನಾಕರ್, ಬಸವಕಲ್ಯಾಣದ ಇಂದಿರಾ, ಶರಣಪ್ಪ ಕೋಟೆ, ಅಶೋಕ ರಾಜೋಳೆ, ಸಂತೋಷ ವೀರಣ್ಣ ಮೊದಲಾದವರಿಗೆ ರಾಷ್ಟ್ರ ನಿರ್ಮಾಪಕ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಚಿತ್ರಕಲಾ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಚಂದ್ರಶೇಖರ ಸೋಮಶೆಟ್ಟಿ ಹಾಗೂ ಶಾಂತಾ ಚನ್ನವೀರಯ್ಯ ಮಠದ ಅವರನ್ನು ಸನ್ಮಾನಿಸಲಾಯಿತು.

ಚಿತ್ರ ಕಲಾವಿದರಿಗೂ ಇದೆ ಭವಿಷ್ಯ:

ADVERTISEMENT

ಚಿತ್ರ ಕಲಾವಿದರಿಗೂ ಉಜ್ವಲ ಭವಿಷ್ಯ ಇದೆ. ಕಾರಣ, ವಿದ್ಯಾರ್ಥಿಗಳು ಚಿತ್ರಕಲೆ ಬಗ್ಗೆಯೂ ಒಲವು ಬೆಳೆಸಿಕೊಳ್ಳಬೇಕು ಎಂದು ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಕಾರ್ಯಕ್ರಮ ಉದ್ಘಾಟಿಸಿದ ಕಲಬುರಗಿಯ ಚೈತನ್ಯ ಆರ್ಟ್ ಗ್ಯಾಲರಿಯ ನಿರ್ದೇಶಕ ಡಾ. ಎ.ಎಸ್. ಪಾಟೀಲ ಹೇಳಿದರು. ರೋಟರಿ ಕ್ಲಬ್ ಚಿತ್ರಕಲಾ ಶಿಕ್ಷಕರನ್ನು ಗುರುತಿಸಿ, ಪ್ರಶಸ್ತಿ ನೀಡಿ ಪ್ರೋತ್ಸಾಹಿಸಿರುವುದು ಶ್ಲಾಘನೀಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಕ್ಲಬ್ ಅಧ್ಯಕ್ಷ ನಿತಿನ್ ಕರ್ಪೂರ ಅವರು, ಮಕ್ಕಳ ಕಲಿಕೆ, ಶೈಕ್ಷಣಿಕ ಬೆಳವಣಿಗೆ ಹಾಗೂ ಸಾಧನೆಯಲ್ಲಿ ಚಿತ್ರಕಲಾ ಶಿಕ್ಷಕರ ಪಾತ್ರವೂ ಮಹತ್ವದ್ದಾಗಿದೆ. ಚಿತ್ರಕಲೆಯಿಂದಾಗಿ ಅನೇಕ ಸುಲಭ ಕಲಿಕಾ ವಿಧಾನಗಳನ್ನು ಅಳವಡಿಸಿಕೊಳ್ಳಲು ಸಾಧ್ಯವಾಗಿದೆ ಎಂದು ಹೇಳಿದರು.

ಕ್ಲಬ್ ಸಾಕ್ಷರತಾ ಅಭಿಯಾನದ ಅಧ್ಯಕ್ಷ ಪ್ರಭು ತಟ್ಟಪಟ್ಟಿ ಅವರು ಕ್ಲಬ್ ಅಭಿಯಾನದ ಮಾಹಿತಿ ನೀಡಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಗಣಪತಿ ಬಾರಾಟಕೆ, ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರ ಹಂಚನಾಳ, ಬಿಆರ್‍ಸಿ ಸಮನ್ವಯಾಧಿಕಾರಿ ವಿಜಯಕುಮಾರ ಬೆಳಮಗಿ, ಚಿತ್ರಕಲಾ ಶಿಕ್ಷಕರ ಒಕ್ಕೂಟದ ಜಿಲ್ಲಾ ಅಧ್ಯಕ್ಷ ವಿಷ್ಣುಕಾಂತ್ ಠಾಕೂರ್, ಕ್ಲಬ್ ಉಪಾಧ್ಯಕ್ಷ ಶಿವಕುಮಾರ ಪಾಖಾಲ್, ಖಜಾಂಚಿ ಸತೀಶ ಸ್ವಾಮಿ, ವಿದ್ಯಾರ್ಥಿಗಳಾದ ಅರ್ಣವ್ ಚಟ್ನಳ್ಳಿ, ಹರ್ಷಿತಾ ಮಾತನಾಡಿದರು.

ಸಪ್ನಾ ಗ್ರುಪ್ ವ್ಯವಸ್ಥಾಪಕ ನಿರ್ದೇಶಕ ಚಂದ್ರಶೇಖರ ಪಾಟೀಲ, ರೋಟರಿ ಕಲ್ಯಾಣ ಝೋನ್ ಸಹಾಯಕ ಗವರ್ನರ್ ಸಂಜಯ್ ಹತ್ತಿ, ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿಯ ಕಾರ್ಯದರ್ಶಿ ಡಾ. ರಿತೇಶ್ ಸುಲೆಗಾಂವ್, ಸಹ ಪ್ರಾಧ್ಯಾಪಕ ಡಾ. ಅರುಣ ಖರಾಟೆ, ಚಿತ್ರಕಲಾ ಶಿಕ್ಷಕರಾದ ರಾಜು ಪ್ರಕಾಶ, ಜೆ. ಪ್ರಭಾಕರ್ ಇದ್ದರು. ಡಾ. ಸತೀಶ ಬಿರಾದಾರ ನಿರೂಪಿಸಿದರು. ರಾಜಕುಮಾರ ಅಳ್ಳೆ ವಂದಿಸಿದರು. ಯೋಗೀಶ್ ಚಿತ್ರಕಲಾ ಮಹಾವಿದ್ಯಾಲಯ ಸಹಯೋಗದಲ್ಲಿ ಏರ್ಪಡಿಸಿದ್ದ ಚಿತ್ರಕಲಾ ಪ್ರದರ್ಶನ ಎಲ್ಲರ ಗಮನ ಸೆಳೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.