ADVERTISEMENT

ಖಟಕಚಿಂಚೋಳಿ | ಹೊಸ ವರ್ಷದ ಸಂಭ್ರಮ: ಕೇಕ್ ಮಾರಾಟ ಜೋರು

ಗಿರಿರಾಜ ಎಸ್ ವಾಲೆ
Published 1 ಜನವರಿ 2024, 6:32 IST
Last Updated 1 ಜನವರಿ 2024, 6:32 IST
ಖಟಕಚಿಂಚೋಳಿ ಗ್ರಾಮದ ಬೇಕರಿ ಎದುರು ಹೊಸ ವರ್ಷದ ಅಂಗವಾಗಿ ವಿವಿಧ ಬಗೆಯ ಕೇಕ್‌ಗಳನ್ನು ಸಿದ್ಧಪಡಿಸಿ ಮಾರಾಟಕ್ಕೆ ಇಟ್ಟಿರುವುದು
ಖಟಕಚಿಂಚೋಳಿ ಗ್ರಾಮದ ಬೇಕರಿ ಎದುರು ಹೊಸ ವರ್ಷದ ಅಂಗವಾಗಿ ವಿವಿಧ ಬಗೆಯ ಕೇಕ್‌ಗಳನ್ನು ಸಿದ್ಧಪಡಿಸಿ ಮಾರಾಟಕ್ಕೆ ಇಟ್ಟಿರುವುದು   

ಖಟಕಚಿಂಚೋಳಿ: 2024ರ ಹೊಸ ವರ್ಷ ಆಗಮನದ ಸಂಭ್ರಮ ಮನೆ ಮಾಡಿದ್ದು, ಕೇಕ್‌ಗಳಿಗೆ ಬೇಡಿಕೆ ಹೆಚ್ಚಿದೆ. ಹೋಬಳಿಯ ಚಳಕಾಪುರ, ಖಟಕಚಿಂಚೋಳಿ, ಬ್ಯಾಲಹಳ್ಳಿ ಸೇರಿದಂತೆ ಇನ್ನಿತರ ಗ್ರಾಮಗಳ ಬೇಕರಿಗಳಲ್ಲಿ ವಿವಿಧ ಬಗೆಯ ಕೇಕ್‌ಗಳನ್ನು ಯುವಕರು ಖರೀದಿಸಿದರು.

ಹೊಸ ವರ್ಷದ ಮುನ್ನಾ ದಿನವೇ ಬಹುತೇಕ ಯುವಕರು, ಬೇಕರಿಗಳಿಗೆ ತೆರಳಿ ತಮಗೆ ಇಷ್ಟವಾದ ಆಕಾರ, ಗಾತ್ರದ ಕೇಕ್‌ಗಳನ್ನು ಮುಂಗಡವಾಗಿ ಹಣ ನೀಡಿ, ಕಾದಿರಿಸಿದ್ದರು. ಗ್ರಾಮೀಣ ಭಾಗದ ಬೇಕರಿಗಳಲ್ಲಿ 5 ಕೆ.ಜಿ., 4 ಕೆ.ಜಿ., 2 ಕೆ.ಜಿ., 1 ಕೆ.ಜಿ. ಹಾಗೂ ಅರ್ಧ ಕೆ.ಜಿ. ತೂಕದ ನೂರಾರು ಕೇಕ್‌ಗಳು ಸಿದ್ಧಗೊಂಡಿವೆ. ಪ್ರತಿ ಕೆ.ಜಿ.ಗೆ ₹ 150 ರಿಂದ ₹ 300 ವರೆಗೆ ಮಾರಾಟವಾಗುತ್ತಿವೆ. ಕ್ರೀಮ್‌ ಕೇಕ್‌, ಬಟರ್‌ಸ್ಕಾಚ್ ಕೇಕ್, ಬ್ಲ್ಯಾಕ್‌ ಫಾರೆಸ್ಟ್‌, ಪಿಸ್ತಾ, ಬಾದಾಮ್, ಪೈನಾಪಲ್‌ ಕೇಕ್‌ಗಳಿಗೆ ಬೇಡಿಕೆ ಇದೆ. ಇದರಿಂದ ಬೇಕರಿಗಳ ಮಾಲೀಕರು ಭರ್ಜರಿ ವ್ಯಾಪಾರದ ನಿರೀಕ್ಷೆಯಲ್ಲಿದ್ದಾರೆ.

ಕೇಕ್‌ಗಳ ಮೇಲೆ ಕನ್ನಡ, ಇಂಗ್ಲಿಷ್ ಭಾಷೆಯಲ್ಲಿ 2024ಕ್ಕೆ ಹಾರ್ದಿಕ ಶುಭಾಶಯಗಳು ಎಂದು ಬರೆಯಿಸಲಾಗಿದೆ. ಕೇಕ್ ಕತ್ತರಿಸಿ ಸಂಭ್ರಮಿಸಲು ಬೇಕಾಗುವ ಸಲಕರಣೆಗಳಾದ ಚಾಕೂ, ಮೇಣದಬತ್ತಿ, ಸೇರಿದಂತೆ ಇನ್ನಿತರ ಸಾಮಾಗ್ರಿಗಳ ಸಮೇತ ಬೇಕರಿ ಅಂಗಡಿಯವರು ನೀಡುತ್ತಿದ್ದಾರೆ.

ADVERTISEMENT

ಯುವಕ, ಯುವತಿಯರು ಹಾಗೂ ಮಕ್ಕಳು ಗುಂಪುಗಳ ಮೂಲಕ ಬೇಕರಿಗಳಿಗೆ ಬಂದು ಬಣ್ಣಬಣ್ಣದ ಕೇಕ್‌ಗಳನ್ನು ಖರೀದಿಸುತ್ತಿದ್ದಾರೆ. ಎಲ್ಲರೂ ಮಧ್ಯರಾತ್ರಿ ವೇಳೆಗೆ ಸರಿಯಾಗಿ ತಮ್ಮ ಓಣಿಗಳಲ್ಲಿ ಪಟಾಕಿ ಸಿಡಿಸಿ, ಪರಸ್ಪರ ಸಿಹಿ ಹಂಚಿಕೊಂಡು ಹೊಸ ವರ್ಷ ಬರಮಾಡಿಕೊಳ್ಳಲಿದ್ದಾರೆ. ‘ನಾನು ಕಳೆದ ಹತ್ತು ವರ್ಷಗಳಿಂದ ಕೇಕ್‌ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಪ್ರತಿ ವರ್ಷ ಹೊಸ ವರ್ಷಾಚರಣೆಯ ಸಂಭ್ರಮಕ್ಕಾಗಿ ಕೇಕ್‌ಗಳ ಬೇಡಿಕೆ ಹೆಚ್ಚುತ್ತಲೇ ಇದೆ. ಎಂಟು ಜನ ಸೇರಿಕೊಂಡು ಹತ್ತು ದಿನದಿಂದ ನಿರಂತರ ಕೆಲಸ ಮಾಡುತ್ತಿದ್ದೇವೆ’ ಎನ್ನುತ್ತಾರೆ ಬೇಕರಿ ಅಂಗಡಿ.

Highlights - ಕೆಕ್ ಕತ್ತರಿಸಲು ಉತ್ಸುಕರಾದ ಮಕ್ಕಳು ಚರ್ಚ್ ಗಳಲ್ಲಿ ರಾತ್ರಿ ವಿಶೇಷ ಪ್ರಾರ್ಥನೆ ₹200 ಬೆಲೆಯ ಕೇಕ್ ಗಳು ಹೆಚ್ಚಿಗೆ ಮಾರಾಟ

Quote - ಕ್ರೈಸ್ತ್ ಸಮುದಾಯದವರು ಡಿ. 31ರಂದು ಮಧ್ಯರಾತ್ರಿ ಚರ್ಚಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಕೇಕ್ ಕತ್ತರಿಸುವ ಮೂಲಕ ಹೊಸ ವರ್ಷವನ್ನು ಸಂಭ್ರಮದಿಂದ ಬರಮಾಡಿಕೋಳ್ಳುತ್ತಾರೆ ಟಿ.ಎಂ. ಮಚ್ಚೆ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.