ADVERTISEMENT

ಬೀದರ್‌ | ದುಶ್ಚಟಗಳಿಗೆ ಒಳಗಾಗಬೇಡಿ: ಜಿಲ್ಲಾಧಿಕಾರಿ ರವಿಶಂಕರ್‌

ಸಿದ್ದಾರ್ಥ ಕಾಲೇಜಿನ ಎನ್ಎಸ್‌ಎಸ್‌ ಶಿಬಿರ ಆರಂಭ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2025, 5:42 IST
Last Updated 19 ಡಿಸೆಂಬರ್ 2025, 5:42 IST
ಎನ್‌ಎಸ್‌ಎಸ್‌ ಶಿಬಿರವನ್ನು ಅಬಕಾರಿ ಇಲಾಖೆಯ ಜಿಲ್ಲಾಧಿಕಾರಿ ರವಿಶಂಕರ್‌ ಉದ್ಘಾಟಿಸಿದರು
ಎನ್‌ಎಸ್‌ಎಸ್‌ ಶಿಬಿರವನ್ನು ಅಬಕಾರಿ ಇಲಾಖೆಯ ಜಿಲ್ಲಾಧಿಕಾರಿ ರವಿಶಂಕರ್‌ ಉದ್ಘಾಟಿಸಿದರು   

ಬೀದರ್‌: ನಗರದ ಸಿದ್ಧಾರ್ಥ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಸಕ್ತ ಸಾಲಿನ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರಕ್ಕೆ ಇಲ್ಲಿನ ಅಲಿಯಾಬಾದ್‌ನಲ್ಲಿ (ಜೆ) ಗುರುವಾರ ಚಾಲನೆ ನೀಡಲಾಯಿತು.

ಅಬಕಾರಿ ಇಲಾಖೆಯ ಜಿಲ್ಲಾಧಿಕಾರಿ ರವಿಶಂಕರ್‌ ಉದ್ಘಾಟಿಸಿ, ಮದ್ಯಪಾನ ಆರೋಗ್ಯಕ್ಕೆ ಒಳ್ಳೆಯದಲ್ಲ. ಯಾರೂ ಕೂಡ ದುಶ್ಚಟಗಳಿಗೆ ಒಳಗಾಗಬಾರದು ಎಂದು ಹೇಳಿದರು.

ನಿಟ್ಟೂರ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಬಾಲಾಜಿ ವಾಡೇಕರ್ ಮಾತನಾಡಿ, ‘ಎನ್.ಎಸ್.ಎಸ್ ನಿಂದ ಸಮಾಜ ಸೇವೆಯ ಜತೆ ಮಾನವಿಯ ಮೌಲ್ಯಗಳು ಬೆಳೆಯುತ್ತದೆ. ತಂದೆ ತಾಯಿಯನ್ನು ಯಾವ ರೀತಿಯಾಗಿ ನೋಡಿಕೊಳ್ಳಬೇಕು. ವಿದ್ಯಾರ್ಥಿಗಳಲ್ಲಿ ಉನ್ನತ ಮೌಲ್ಯಗಳ ಮಹತ್ವ ಗೊತ್ತಾಗುತ್ತದೆ’ ಎಂದು ತಿಳಿಸಿದರು.

ADVERTISEMENT

‌ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ರಾಜಶೇಖರ ಮಂಗಲಗಿ, ಎನ್.ಎಸ್.ಎಸ್‌ನಿಂದ ಮಕ್ಕಳಲ್ಲಿ ನಾಯಕತ್ವ ಗುಣ ಬೆಳೆಯುತ್ತದೆ. ಸಮಾಜ ಸೇವೆ ಗುಣ ಬೆಳೆಯುತ್ತದೆ ಎಂದು ಹೇಳಿದರು.

ಸಿದ್ಧಾರ್ಥ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಎಸ್. ಪ್ರಭು ಮಾತನಾಡಿ, ಇಂದಿನ ಯುವಕರೇ ನಾಳೆಯ ಪ್ರಜೆಗಳು. ಸಮಯಕ್ಕೆ ಪ್ರತಿಯೊಬ್ಬರೂ ಮಹತ್ವ ಕೊಟ್ಟು ಅದರಂತೆ ಕೆಲಸ ನಿರ್ವಹಿಸಬೇಕು ಎಂದು ತಿಳಿಸಿದರು.

ಉಪನ್ಯಾಸಕ ಏಕನಾಥ, ಕಾರ್ಯಕ್ರಮದ ಸಂಯೋಜನಾಧಿಕಾರಿ ನಸಿರೊದ್ದೀನ್, ಸುಲೋಚನಾ ಬಿರಾದಾರ, ಪ್ರಿಯಾಂಕಾ, ನಾಗಗೊಂಡ, ನಾಗಪ್ಪ, ಶೇಕ್ ಅಕೀಬ್‌ ಜಾವೇದ್‌, ಮಂಜುಳಾ ಮತ್ತು ರೇಖಾ ಹಾಜರಿದ್ದರು. ಎನ್.ಎಸ್.ಎಸ್. ಗೀತೆಯನ್ನು ರೀಟಾ ಮತ್ತು ಸಂಗಡಿಗರು ಹಾಡಿದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.