ADVERTISEMENT

ಬೀದರ್: ಗುರುವಚನ ಪಟ್ಟಾಭಿಷೇಕ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2020, 11:08 IST
Last Updated 10 ಫೆಬ್ರುವರಿ 2020, 11:08 IST
ಬೀದರ್‌ನ ಬಸವಗಿರಿಯಲ್ಲಿ ವಚನ ವಿಜಯೋತ್ಸವ ಅಂಗವಾಗಿ ಅಕ್ಕಅನ್ನಪೂರ್ಣ ಅವರು ಗುರುವಚನ ಪಟ್ಟಾಭಿಷೇಕ ಕಾರ್ಯಕ್ರಮ ನಡೆಸಿಕೊಟ್ಟರು. ಡಾ.ಕಿರಣಕುಮಾರ, ಗುರುಬಸವ ಪಟ್ಟದ್ದೇವರು, ಬಸವಜಯ ಮೃತ್ಯುಂಜಯ ಸ್ವಾಮೀಜಿ, ಗುರುನಾಥ ಕೊಳ್ಳೂರ ಇದ್ದಾರೆ
ಬೀದರ್‌ನ ಬಸವಗಿರಿಯಲ್ಲಿ ವಚನ ವಿಜಯೋತ್ಸವ ಅಂಗವಾಗಿ ಅಕ್ಕಅನ್ನಪೂರ್ಣ ಅವರು ಗುರುವಚನ ಪಟ್ಟಾಭಿಷೇಕ ಕಾರ್ಯಕ್ರಮ ನಡೆಸಿಕೊಟ್ಟರು. ಡಾ.ಕಿರಣಕುಮಾರ, ಗುರುಬಸವ ಪಟ್ಟದ್ದೇವರು, ಬಸವಜಯ ಮೃತ್ಯುಂಜಯ ಸ್ವಾಮೀಜಿ, ಗುರುನಾಥ ಕೊಳ್ಳೂರ ಇದ್ದಾರೆ   

ಬೀದರ್: ಲಿಂಗಾಯತ ಮಹಾಮಠ ಹಾಗೂ ಬಸವ ಸೇವಾ ಪ್ರತಿಷ್ಠಾನದ ವತಿಯಿಂದ ವಚನ ವಿಜಯೋತ್ಸವದ ಅಂಗವಾಗಿ ಭಾನುವಾರ ನಡೆದ ಗುರುವಚನ ಪಟ್ಟಾಭಿಷೇಕ ಮಹೋತ್ಸವದಲ್ಲಿ ವಚನ ಗ್ರಂಥಗಳಿಗೆ ಸಾಮೂಹಿಕವಾಗಿ ಪಟ್ಟಕಟ್ಟಲಾಯಿತು.

ಭಾಲ್ಕಿಯ ಬಸವಲಿಂಗ ಪಟ್ಟದ್ದೇವರು, ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಮಠದ ಬಸವಜಯಮೃತ್ಯುಂಜಯ ಸ್ವಾಮೀಜಿ, ಹನುಮಸಾಗರದ ವಿಜಯಮಹಾಂತೇಶ ಸ್ವಾಮೀಜಿ, ರಾಯಚೂರಿನ ಮಲ್ಲಿಕಾರ್ಜುನ ಸ್ವಾಮಿ, ಅಶೋಕ ಆಲೂರ, ದಾವಣಗೆರೆಯ ಬಸವ ಪ್ರಭು ಸ್ವಾಮಿ, ಅಕ್ಕ ಅನ್ನಪೂರ್ಣ, ಗಂಗಾಂಬಿಕೆ ಅಕ್ಕ ಹಾಗೂ ವಿಜ್ಞಾನಿ ಕಿರಣಕುಮಾರ ಅವರು ಶರಣರಿಗೆ ಉಪದೇಶ ಮಾಡಿದರು.

ಸಮಾರಂಭದಲ್ಲಿ ನೆರೆದವರು ‘ಲಿಂಗಾಯತರಿಗೆ ವಚನವೇ ಪ್ರಭು, ವಚನವೇ ಒಡೆಯ. ವಚನದಲ್ಲಿ ಉಲ್ಲೇಖಿಸಿದಂತೆ ನಾವೆಲ್ಲ ನಡೆದುಕೊಳ್ಳುತ್ತೇವೆ’ ಎಂದು ಪ್ರತಿಜ್ಞೆ ಮಾಡಿದರು. ನಂತರ ಜಯಘೋಷ ಮೊಳಗಿತು. ಇದಕ್ಕೊ ಮೊದಲು ಶಿವಕುಮಾರ ಪಾಂಚಾಳ ವಚನ ಸಂಗೀತ ಹಾಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.