ADVERTISEMENT

‘ಶರಣತತ್ವದ ಆಚರಣೆಯಿಂದ ಸಮಾಜದಲ್ಲಿ ಶಾಂತಿ’

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2023, 14:33 IST
Last Updated 11 ಫೆಬ್ರುವರಿ 2023, 14:33 IST
ಭಾಲ್ಕಿ ತಾಲ್ಲೂಕಿನ ಮೊರಂಬಿ ಗ್ರಾಮದಲ್ಲಿ ನಡೆದ ಬಸವ, ಮೊರಂಬಿ ಉತ್ಸವದ ಸಮಾರೋಪ ಕಾರ್ಯಕ್ರಮಮವನ್ನು ಹುಲಸೂರಿನ ಶಿವಾನಂದ ಸ್ವಾಮೀಜಿ ಉದ್ಘಾಟಿಸಿದರು. ಹವಾ ಮಲ್ಲಿನಾಥ ಮಹಾರಾಜ, ಗುರುಬಸವ ಪಟ್ಟದ್ದೇವರು ಇದ್ದರು
ಭಾಲ್ಕಿ ತಾಲ್ಲೂಕಿನ ಮೊರಂಬಿ ಗ್ರಾಮದಲ್ಲಿ ನಡೆದ ಬಸವ, ಮೊರಂಬಿ ಉತ್ಸವದ ಸಮಾರೋಪ ಕಾರ್ಯಕ್ರಮಮವನ್ನು ಹುಲಸೂರಿನ ಶಿವಾನಂದ ಸ್ವಾಮೀಜಿ ಉದ್ಘಾಟಿಸಿದರು. ಹವಾ ಮಲ್ಲಿನಾಥ ಮಹಾರಾಜ, ಗುರುಬಸವ ಪಟ್ಟದ್ದೇವರು ಇದ್ದರು   

ಭಾಲ್ಕಿ: ‘ಬಸವಾದಿ ಶರಣರ ತತ್ವಗಳ ಆಚರಣೆಯಿಂದ ಸಮಾಜದಲ್ಲಿ ಶಾಂತಿ ಹಾಗೂ ನೆಮ್ಮದಿ ನೆಲೆಸಲು ಸಾಧ್ಯ’ ಎಂದು ಹುಲಸೂರಿನ ಶಿವಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಮೊರಂಬಿ ಗ್ರಾಮದಲ್ಲಿ ನಡೆದ ಬಸವ, ಮೊರಂಬಿ ಉತ್ಸವದ ಸಮಾರೋಪ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಆಧುನಿಕ ಜೀವನ ಪದ್ಧತಿ, ಒತ್ತಡಯುಕ್ತ ಜೀವನ ಜನರ ನೆಮ್ಮದಿ ಕಸಿದುಕೊಂಡು ಬಿ.ಪಿ, ಶುಗರ್ ಸೇರಿದಂತೆ ಇತರ ರೋಗಗಳನ್ನು ಉಡುಗೊರೆಯಾಗಿ ನೀಡಿದೆ. ಒತ್ತಡ ರಹಿತ ಬದುಕು ನಡೆಸಲು ಪ್ರತಿಯೊಬ್ಬರೂ ವಚನಗಳ ಅಧ್ಯಯನ, ಅವುಗಳ ಆಚರಣೆಯತ್ತ ಗಮನ ಕೇಂದ್ರೀಕರಿಸಬೇಕು ಎಂದು ತಿಳಿಸಿದರು.

ADVERTISEMENT

ಗುರುಬಸವ ಪಟ್ಟದ್ದೇವರು ಮಾತನಾಡಿ,‘ಯುವಕರು ಸದ್ಗುಣಿಗಳಾಗಿ ಹೆತ್ತವರು ಹಾಗೂ ಗ್ರಾಮ ಹೆಮ್ಮೆ ಪಡುವಂತೆ ಆದರ್ಶ ಜೀವನ ನಡೆಸಬೇಕು’ ಎಂದರು.

ಹವಾ ಮಲ್ಲಿನಾಥ ಮಹಾರಾಜ, ಸಾಗರ ಖಂಡ್ರೆ, ರಮೇಶ ಚಿದ್ರಿ, ವಿಜಯಕುಮಾರ ವಾರದ್ ಸೇರಿದಂತೆ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.