ಮಂದಕನಳ್ಳಿ(ಜನವಾಡ): ‘ಆರೋಗ್ಯವಂತ ಮಕ್ಕಳ ಜನನಕ್ಕಾಗಿ ಗರ್ಭಿಣಿಯರು, ಪೌಷ್ಟಿಕ ಆಹಾರ ಸೇವಿಸಬೇಕು’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀಧರ ಎಂ.ಎಸ್. ಹೇಳಿದರು.
ತಾಲ್ಲೂಕಿನ ಮಂದಕನಳ್ಳಿ ಗ್ರಾಮದಲ್ಲಿ ಗುರುವಾರ ನಡೆದ ರಾಷ್ಟ್ರೀಯ ಪೋಷಣ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಸಿರಿಧಾನ್ಯ, ಹಸಿರು ಸೊಪ್ಪು, ತರಕಾರಿ, ಮೊಟ್ಟೆ, ಮೀನು, ಹಾಲು, ಹಣ್ಣು ಸೇವನೆಯಿಂದ ಅಧಿಕ ಪ್ರಮಾಣದಲ್ಲಿ ವಿಟಮಿನ್ ದೊರೆಯುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ‘ಗರ್ಭಿಣಿಯರು, ಬಾಣಂತಿಯರು ಮಗುವಿಗೆ 2 ವರ್ಷ ತುಂಬುವವರೆಗೂ ಪೌಷ್ಟಿಕ ಆಹಾರಕ್ಕೆ ಪ್ರಾಮುಖ್ಯತೆ ಕೊಡಬೇಕು’ ಎಂದು ಹೇಳಿದರು.
ಗ್ರಾ.ಪಂ ಉಪಾಧ್ಯಕ್ಷೆ ಕೃಷ್ಣಬಾಯಿ, ಸದಸ್ಯೆ ಶೋಭಾ, ಪ್ರಮುಖರಾದ ವೀರಾಬಾಯಿ, ಸುಮಿತ್ರಾ, ಅವಿರತ ಸಿಂದೆ, ಸುರೇಖಾ, ಚಿನ್ನಮ್ಮ, ಜಗದೇವಿ, ಸುಲೆಮ್ಮ, ಹಾಲಮ್ಮ, ಉಷಾ, ಜ್ಞಾನದೇವಿ, ರಾಜೇಶ್ವರಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.