ADVERTISEMENT

ಬೀದರ್‌ ಜೈಲಿನಿಂದ ಕೈದಿ ಪರಾರಿ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2020, 14:21 IST
Last Updated 17 ಫೆಬ್ರುವರಿ 2020, 14:21 IST
ಬೀದರ್‌ ಜೈಲಿನಿಂದ ಪರಾರಿಯಾದ ವಿಚಾರಣಾಧೀನ ಕೈದಿ
ಬೀದರ್‌ ಜೈಲಿನಿಂದ ಪರಾರಿಯಾದ ವಿಚಾರಣಾಧೀನ ಕೈದಿ   

ಬೀದರ್‌: ಇಲ್ಲಿಯ ಕೇಂದ್ರ ಕಾರಾಗೃಹದಿಂದ ವಿಚಾರಣಾಧೀನ ಕೈದಿಯೊಬ್ಬ ಭಾನುವಾರ ಸಂಜೆ
ಪರಾರಿಯಾಗಿದ್ದಾನೆ.

ಭಾಲ್ಕಿಯ ಲೆಕ್ಚರ್ ಕಾಲೊನಿಯ ರಾಘವೇಂದ್ರ ಚಪಾತ್ಯೆ(22) ಪರಾರಿಯಾದವನು. ಫೆ.16ರಂದು ಭಾನುವಾರ ಜೈಲಿನ ಗೋಡೆ ಮೇಲಿಂದ ಹಾರಿ ಪರಾರಿಯಾಗಿದ್ದಾನೆ.

ರಾಘವೇಂದ್ರನ ವಿರುದ್ಧ ಭಾಲ್ಕಿ ಪಟ್ಟಣ ಹಾಗೂ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಐಪಿಸಿ ಸೆಕ್ಷನ್ 341, 323, 324, 308, 504 ಹಾಗೂ 506ರ ಅಡಿ ಪ್ರಕರಣಗಳು ದಾಖಲಾಗಿವೆ. ಭಾಲ್ಕಿ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಿದ ನಂತರ ಆತನನ್ನು ಜನವರಿ 11 ರಂದು ಬೀದರ್ನ ಕೇಂದ್ರ ಕಾರಾಗೃಹಕ್ಕೆ ತರಲಾಗಿತ್ತು. ಜೈಲಿನ ಅಧಿಕಾರಿಗಳು ನ್ಯೂಟೌನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ADVERTISEMENT

ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸ್‌ ಕಾನ್‌ಸ್ಟಬಲ್‌ ಒಬ್ಬರನ್ನು ಅಮಾನತು ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.