ADVERTISEMENT

ಸಿಪಿಐ ಕಾರ್ಯಕರ್ತರ ಪ್ರತಿಭಟನೆ

ಖಾಸಗೀಕರಣ ನೀತಿಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2020, 8:55 IST
Last Updated 13 ಫೆಬ್ರುವರಿ 2020, 8:55 IST
ಸರ್ಕಾರಿ ಸಂಸ್ಥೆಗಳ ಖಾಸಗೀಕರಣ ವಿರೋಧಿಸಿ ಸಿಪಿಐ ಕಾರ್ಯಕರ್ತರು ಬೀದರ್‌ನಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು
ಸರ್ಕಾರಿ ಸಂಸ್ಥೆಗಳ ಖಾಸಗೀಕರಣ ವಿರೋಧಿಸಿ ಸಿಪಿಐ ಕಾರ್ಯಕರ್ತರು ಬೀದರ್‌ನಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು   

ಬೀದರ್: ಕೇಂದ್ರ ಸರ್ಕಾರದ ಸಾರ್ವಜನಿಕ ಸಂಸ್ಥೆಗಳ ಖಾಸಗೀಕರಣ ನೀತಿ ವಿರೋಧಿಸಿ ಸಿಪಿಐ ಕಾರ್ಯಕರ್ತರು ನಗರದಲ್ಲಿ ಬುಧವಾರ ಪ್ರತಿಭಟನೆ ಮೆರವಣಿಗೆ ನಡೆಸಿದರು.

ಇಲ್ಲಿಯ ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿಗೆ ನೀಡಿದರು.

‘ಕೇಂದ್ರ ಸರ್ಕಾರ ಈಚೆಗೆ ಮಂಡಿಸಿದ ಬಜೆಟ್‌ನಲ್ಲಿ ರೈಲ್ವೆ, ಜೀವವಿಮೆ ಹಾಗೂ ಬ್ಯಾಂಕುಗಳನ್ನು ಖಾಸಗೀಕರಣಗೊಳಿಸುವುದಾಗಿ ಹೇಳಿದೆ. ಇದರಿಂದ ಸಾರ್ವಜನಿಕ ವಯಲಕ್ಕೆ ಬಹುದೊಡ್ಡ ಅಪಾಯ ಕಾದಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ADVERTISEMENT

ಜಿಲ್ಲಾ ಆಸ್ಪತ್ರೆ ಖಾಸಗೀಕರಣ ಹಾಗೂ ಸರ್ಕಾರಿ ಕಂಪನಿಗಳ ಶೇರು ಮಾರಾಟ ನಿರ್ಧಾರ ಕೈಬಿಡಬೇಕು. ಗುತ್ತಿಗೆ ಆಧಾರಿತ ಕೃಷಿಗೆ ಅವಕಾಶ ಕೊಡಬಾರದು ಎಂದು ಒತ್ತಾಯಿಸಿದರು.

‘ವಿದ್ಯುತ್ ಸರಬರಾಜು ಕಂಪನಿಯವರು ಹೊಸ ಮೀಟರ್‌ ಅಳವಡಿಸಿರುವುದರಿಂದ ಪ್ರತಿ ತಿಂಗಳ ಮೊತ್ತದಲ್ಲಿ ಏರಿಕೆಯಾಗಿದೆ. ಅವುಗಳ ತನಿಖೆಯಾಗಬೇಕು. ಅಡುಗೆ ಅನಿಲದ ಬೆಲೆ ಹೆಚ್ಚಳ ಹಿಂಪಡೆಯಬೇಕು’ ಎಂದು ಆಗ್ರಹಿಸಿದರು.

ಭಾರತ ಕಮ್ಯುನಿಷ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಬಾಬುರಾವ್ ಹೊನ್ನಾ, ಅಲಿ ಅಹಮ್ಮದ್
ಖಾನ್, ಮಾಣಿಕರಾವ್ ಖಾನಾಪೂರಕರ್, ನಜೀರ್ ಅಹಮ್ಮದ್‌, ಅಹಮ್ಮದ್ ಜಂಬಗಿ, ಪ್ರಭು ಹೊಚಕನಳ್ಳಿ, ರವಿರಾಜ, ಜಗನ್ನಾಥ ಮಹಾರಾಜ, ಗುರುಪಾದಯ್ಯ ಸ್ವಾಮಿ, ಬಾಬುರಾವ್ ವಾಡೆಕರ್, ತುಕರಾಮ್ ಸೋಲಪೂರೆ, ಚಂದ್ರಬಾನ, ಪ್ರಭು ತಗಣಿಕರ್, ರಾಮಣ್ಣ ಅಲ್ಮಾಸಪೂರ್, ನನ್ನೆ ಸಾಬ್, ಎಂ.ಡಿ.ಶಫಾಯತ್ ಅಲಿ, ಪಪ್ಪುರಾಜ ಮೇತ್ರೆ, ಸುನೀಲ ವರ್ಮಾ, ಎಂ.ಡಿ.ಖಮರ ಪಟೇಲ್‌, ಮುನಿರೋದ್ದಿನ್, ಅಬ್ದುಲ್ ಖಾದರ್‌, ಖಾದರ್ ಶಾ, ಶಂಕರರಾವ್ ಕಮಠಾಣಾ, ಸೈಯದ್ ಸರ್ಫರಾಜ್ ಹಾಸ್ಮಿ, ಮಚ್ಚೇಂದ್ರ, ಸುಮಂತ ಹಾಗೂ ರಮೇಶ ಸಿರಕಟನಳ್ಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.