ADVERTISEMENT

ಪುಷ್ಕರಣಿ ನಿರ್ಮಾಣ ಕಾಮಗಾರಿಗೆ ಚಾಲನೆ

ನರೇಗಾ ಯೋಜನೆಯಡಿ ₹16 ಲಕ್ಷ ಅನುದಾನ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2021, 4:11 IST
Last Updated 19 ಏಪ್ರಿಲ್ 2021, 4:11 IST
ಕಮಲನಗರ ತಾಲ್ಲೂಕಿನ ಡೋಣಗಾಂವ್ (ಎಂ) ಗ್ರಾಮದ ಭಕ್ತಮುಡಿ ಮಾಹಳಪ್ಪಯ್ಯನ ಸನ್ನಿಧಿಯಲ್ಲಿ ಪುಷ್ಕರಣಿ ನಿರ್ಮಾಣ ಕಾಮಗಾರಿಗೆ ಡಾ.ಶಂಭುಲಿಂಗ ಶಿವಾಚಾರ್ಯರು ಚಾಲನೆ ನೀಡಿದರು
ಕಮಲನಗರ ತಾಲ್ಲೂಕಿನ ಡೋಣಗಾಂವ್ (ಎಂ) ಗ್ರಾಮದ ಭಕ್ತಮುಡಿ ಮಾಹಳಪ್ಪಯ್ಯನ ಸನ್ನಿಧಿಯಲ್ಲಿ ಪುಷ್ಕರಣಿ ನಿರ್ಮಾಣ ಕಾಮಗಾರಿಗೆ ಡಾ.ಶಂಭುಲಿಂಗ ಶಿವಾಚಾರ್ಯರು ಚಾಲನೆ ನೀಡಿದರು   

ಕಮಲನಗರ: ‘ತಮ್ಮ ದೈನಂದಿನ ಕೆಲಸ ಕಾರ್ಯಗಳೋಂದಿಗೆ ಸದಾ ಧರ್ಮ ಕಾರ್ಯಗಳಲ್ಲಿ ತೊಡಗಿಸಿಕೊಂಡು ಸುಂದರವಾದ ಜೀವನ ರೂಪಿಸಿಕೊಳ್ಳ ಬೇಕು’ ಎಂದು ಉದಗೀರ-ಡೋಣ ಗಾಂವ್ (ಎಂ) ಹಾವಗಿಸ್ವಾಮಿ ಮಠದ ಪೀಠಾಧ್ಯಕ್ಷರಾದ ಡಾ. ಶಂಭುಲಿಂಗ ಶಿವಾಚಾರ್ಯರು ಹೇಳಿದರು.

ತಾಲ್ಲೂಕಿನ ಡೋಣಗಾಂವ್(ಎಂ) ಗ್ರಾಮದ ಹೊರವಲಯದ ಭಕ್ತಮುಡಿ ಮಹಾಳಪ್ಪಯ್ಯನ ಸನ್ನಿಧಿಯಲ್ಲಿ ಈಚೆಗೆ ನರೇಗಾ ಯೋಜನೆಯಡಿ ಹಮ್ಮಿಕೊಂಡಿದ್ದ ಅಂದಾಜು ₹16 ಲಕ್ಷ ಅನುದಾನದಲ್ಲಿ ನೂತನ ಪುಷ್ಕರಣಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

‘ಕಾಲಕಾಲಕ್ಕೆ ಬದಲಾವಣೆಗಳು ಕಾಣುತ್ತೇವೆ. ಅಶಾಂತಿ, ಅನ್ಯಾಯ ಹೆಚ್ಚಾದಲ್ಲಿ ಧರ್ಮ ಕಾರ್ಯಗಳು ಕಡಿಮೆಯಾಗಿ ಅಚ್ಚರಿಯ ಪರಿವರ್ತನೆಯಾಗುತ್ತೇವೆ. ಕೊರೊನಾ ವೈರಸ್ ಮುನುಕುಲವನ್ನೇ ಅಲುಗಾಡಿಸುತ್ತಿದೆ. ಜೀವ ಹಾನಿ ಸಂಭವಿಸುತ್ತಿವೆ’ ಎಂದರು.

ADVERTISEMENT

ಡೋಣಗಾಂವ್ (ಎಂ) ಪಿಕೆಪಿಎಸ್ ಅಧ್ಯಕ್ಷ ಅಪ್ಪಾಸಾಬ್ ದೇಶಮುಖ ಮಾತನಾಡಿ, ‘ಭಕ್ತಮುಡಿಯ ಮಹಾಳಪ್ಪಯ್ಯ, ರಂಡ್ಯಾಳ ಚನ್ನಮಲ್ಲಪ್ಪ, ಡೋಣಗಾಂವ್ ಹಾವಗಿಸ್ವಾಮಿ ದೇವಸ್ಥಾನಗಳು ಭಕ್ತರಿಗೆ ಸ್ವರ್ಗವಾಗಿವೆ. ಈ ಮೂವರು ಮಹಾತ್ಮರು ಸಮಾಜದ ಏಳಿಗೆಗೆ ಮಹತ್ತರ ಕಾಣಿಕೆ ನೀಡಿದ್ದಾರೆ. ಈ ಪವಿತ್ರ ಕ್ಷೇತ್ರದಲ್ಲಿ ಭಕ್ತರಿಗೆ ಜಳಕ ಮಾಡಲು ಹರಿದು ಬರುವ ಹಳ್ಳದ ನೀರನ್ನು ನಿಲ್ಲಿಸಿ ಕಲ್ಯಾಣಿ ಪುಷ್ಕರಣಿ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗುತ್ತಿದೆ’ ಎಂದರು.

ಔರಾದ್ ತಾಲ್ಲೂಕು ಪಂಚಾಯಿತಿ ಇಒ ಮಾಣೀಕರಾವ ಪಾಟೀಲ, ಕಮಲನಗರ ತಾ.ಪಂ ಸಹಾಯಕ ನಿರ್ದೇಶಕ ಶಿವಾನಂದ ಔರಾದೆ, ಪಿಡಿಒ ದತ್ತಾತ್ರಿ ಪುಜಾರಿ, ಬಸವರಾಜ ಎಸ್. ಸೂರ್ಯವಂಶಿ, ಪ್ರವೀಣ, ಗಣೇಶ, ಗ್ರಾ.ಪಂ ಅಧ್ಯಕ್ಷ ಎಸ್.ಜೆ, ಉಪಾಧ್ಯಕ್ಷೆ ಪ್ರೇಮಾ ಗಂದಗೆ ಹಾಗೂ ಗ್ರಾ.ಪಂ ಸದಸ್ಯರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.